Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೇರಳ ವಿಧಾನ ಸಭೆಯಲ್ಲಿ ‘ ಸೋಲಾರ್ ’...

ಕೇರಳ ವಿಧಾನ ಸಭೆಯಲ್ಲಿ ‘ ಸೋಲಾರ್ ’ ಕೋಲಾಹಲ

ವಾರ್ತಾಭಾರತಿವಾರ್ತಾಭಾರತಿ5 Feb 2016 6:23 PM IST
share
ಕೇರಳ ವಿಧಾನ ಸಭೆಯಲ್ಲಿ ‘ ಸೋಲಾರ್ ’ ಕೋಲಾಹಲ

ತಿರುವನಂತಪುರ, ಫೆ.5: ಕೇರಳ ವಿಧಾನಸಭೆಯ ಬಜೆಟ್ ಅಧಿವೇಶನದ ಆರಂಭದ ದಿನವಾದ ಇಂದು ಭಾರೀ ನಾಟಕೀಯ ವಿದ್ಯಮಾನವೊಂದಕ್ಕೆ ಸದನ ಸಾಕ್ಷಿಯಾಯಿತು.
ರಾಜ್ಯಪಾಲರು ಪರಂಪರೆಯಂತೆ ಸದನವನ್ನುದ್ದೇಶಿಸಿ ಭಾಷಣ ಆರಂಭಿಸಿದೊಡನೆಯೇ ಎದ್ದುನಿಂತ ವಿಪಕ್ಷ ನಾಯಕ ಅಚ್ಯುತಾನಂದನ್, ರಾಜ್ಯ ಸರಕಾರವು ಕುತ್ತಿಗೆಯವರೆಗೆ ಭ್ರಷ್ಟಾಚಾರದಲ್ಲಿ ಮುಳುಗಿದೆಯೆಂದು ಆರೋಪಿಸಿದರು.
ರಾಜ್ಯದಲ್ಲಿ ಬಾರ್ ಹಾಗೂ ಸೌರಫಲಕ ಹಗರಣಗಳ ಬಗ್ಗೆ ಕೋಲಾಹಲ ನಡೆಯುತ್ತಿರುವ ನಡುವೆಯೇ ರಾಜ್ಯಪಾಲರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂದು ಹಿರಿಯ ಸಿಪಿಎಂ ನಾಯಕ ಆಗ್ರಹಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ರಾಜ್ಯಪಾಲರು, ‘‘ನೀವು ನಿಮ್ಮ ಪ್ರಜಾಸತ್ತಾತ್ಮಕ ಪ್ರತಿಭಟನೆ ಎತ್ತಿದ್ದೀರಿ. ನೀವು ಈ ಸರಕಾರವನ್ನು ವಿರೋಧಿಸುತ್ತಿದ್ದೀರಿ. ಅಷ್ಟು ಸಾಕು. ನೀವು ನನಗೆ ನನ್ನ ಸಾಂವಿಧಾನಿಕ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಬೇಕು. ನಾನು ನಿಮ್ಮ ಎಲ್ಲ ಆಕ್ಷೇಪಗಳನ್ನು ಗಮನಿಸುತ್ತಿದ್ದೇನೆ’’ ಎಂದರು.
ರಾಜ್ಯಪಾಲರು ಭಾಷಣ ಮುಂದುವರಿಸುತ್ತಿದ್ದಂತೆಯೇ ವಿಪಕ್ಷ ನಾಯಕರು ಎದ್ದು ನಿಂತು, ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹಾಗೂ ಇತರ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸುವ ಫಲಕಗಳು ಹಾಗೂ ಬ್ಯಾನರ್‌ಗಳನ್ನು ಪ್ರದರ್ಶಿಸ ತೊಡಗಿದರು.
ಸದನದಲ್ಲಿ ಸಿಪಿಎಂನ ಉಪನಾಯಕರಾಗಿರುವ ಕೊಡಿಯೇರಿ ಬಾಲಕೃಷ್ಣನ್ ಎದ್ದು ನಿಂತುದನ್ನು ಗಮನಿಸಿದ ರಾಜ್ಯಪಾಲ.‘‘ ಮಾನ್ಯ ಬಾಲಕೃಷ್ಣನ್‌ರೇ. ಇದು ನಿಮಗೂ ಸಂಭಿವಿಸಬಹುದು. ಪ್ರತಿಭಟಿಸುವ ಹಕ್ಕನ್ನು ನೀವು ಹೊಂದಿದ್ದರೆ, ಭಾಷಣ ಮಾಡುವ ಸಾಂವಿಧಾನಿಕ ಬದ್ಧತೆ ನನಗಿದೆ. ಒಂದೋ ಸುಮ್ಮನೆ ಕುಳಿತುಕೊಳ್ಳಬೇಕು ಅಥವಾ ಸದನದಿಂದ ಹೊರ ಹೋಗುವುದು ಒಳ್ಳೆಯದು’’ ಎಂದು ಚಾಟಿ ಬೀಸಿದರು.
‘’ನಿಮ್ಮ ಪ್ರತಿಭಟನೆ ಸರಕಾರದ ವಿರುದ್ಧವೇ ಹೊರತು ನನ್ನ ವಿರುದ್ಧವಲ್ಲದೆಂಬುದು ನನಗೆ ತಿಳಿದಿದೆ. ಇಡೀ ದೇಶ ನಿಮ್ಮನ್ನು ಗಮನಿಸುತ್ತಿದೆ. ಜನರು ನಿಮ್ಮ ಆಕ್ಷೇಪಗಳನ್ನು ಗಮನಿಸುತ್ತಿದ್ದಾರೆ. ನೀವು ನಿಮ್ಮ ವಿಚಾರ ತಿಳಿಸಿದಿರಿ ಹಾಗೂ ನಾನದನ್ನು ಗಮನಿಸಿದ್ದೇನೆ’’ ಎಂದವರು ಹೇಳಿದರು.
ಆದರೆ, ಆ ಬಳಿಕ ಪ್ರತಿಭಟಿಸುತ್ತಿದ್ದ ಎಲ್‌ಡಿಎಫ್ ಸದಸ್ಯರು ಸದನದ ಹೊರಗೆ ಒಟ್ಟು ಸೇರಿದರು. ಅವರು, ‘ಕಳಂಕಿತ ಸಚಿವ ಸಂಪುಟದ ನೀತಿಯನ್ನು ನಾವು ಬಯಸುವುದಿಲ್ಲ’ ಎಂಬ ಘೋಷಣೆ ಕೂಗುತ್ತ, ಫಲಕಗಳನ್ನು ಪ್ರದರ್ಶಿಸಿದರು.
ಕೇರಳದಲ್ಲಿ ಈ ವರ್ಷಾಂತ್ಯಕ್ಕೆ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಇದು 13 ನೆ ವಿಧಾನ ಸಭೆಯ ಕೊನೆಯ ಅಧಿವೇಶನವಾಗಿದೆ. ಆದುದರಿಂದ 14 ದಿನಗಳ ಈ ಅಧಿವೇಶನ ರಾಜಕೀಯವಾಗಿ ಪ್ರಾಮುಖ್ಯ ಪಡೆದಿದೆ.
ಎರಡು ದಿನಗಳ ಹಿಂದೆ ರಾಜ್ಯಪಾಲರನ್ನು ಭೇಟಿಯಾಗಿದ್ದ ಎಲ್‌ಡಿಎಫ್ ನಾಯಕರು, ಚಾಂಡಿ ಸರಕಾರವು ವಿವಿಧ ಆರೋಪಗಳನ್ನು ಹೊತ್ತಿರುವುದರಿಂದ ಸದನವನ್ನುದ್ದೇಶಿಸಿ ಪರಂಪರೆಯಂತೆ ಭಾಷಣ ಮಾಡದಿರುವಂತೆ ಅವರನ್ನು ವಿನಂತಿಸಿದ್ದರು.
ಸೌರ ಫಲಕ ಹಗರಣದ ಪ್ರಧಾನ ಆರೋಪಿ ಸರಿತಾ ನಾಯಕ್ ಎಂಬಾಕೆ, ತಾನು ಮುಖ್ಯಮಂತ್ರಿಯ ಆಪ್ತ ಸಹಾಯಕನಿಗೆ ರೂ.1.90 ಕೋಟಿ ಹಾಗೂ ವಿದ್ಯುತ್ ಸಚಿವ ಅರ್ಯಾಡನ್ ಮುಹಮ್ಮದ್‌ರಿಗೆ ರೂ. 40 ಲಕ್ಷ ಲಂಚ ನೀಡಿದ್ದೇನೆಂದು ನ್ಯಾಯಮೂರ್ತಿ ಶಿವರಂಜನ್ ಆಯೋಗದ ಮುಂದೆ ನೀಡಿದ್ದಳು. ಆದರೆ, ಅದನ್ನು ಇಬ್ಬರೂ ಸಚಿವರು ತಳ್ಳಿ ಹಾಕಿದ್ದರು.
ಹೊಟೇಲ್ ಉದ್ಯಮಿ ಬಿಜು ರಮೇಶ್ ಎಂಬವರು ಮಾಡಿದ್ದ ಲಂಚದ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ವಿತ್ತ ಸಚಿವರಾಗಿದ್ದ ಕೆ.ಎಂ. ಮಣಿ ರಾಜೀನಾಮೆ ನೀಡಬೇಕಾಯಿತು.
ಬಾರ್ ಹಗರಣದಲ್ಲಿ ಅಬಕಾರಿ ಸಚಿವ ಕೆ.ಬಾಬು ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ವಿಜಿಲೆನ್ಸ್ ನ್ಯಾಯಾಲಯ ಆದೇಶ ನೀಡಿದ ಬಳಿಕ ಅವರೂ ರಾಜೀನಾಮೆ ನೀಡಿದ್ದರು. ಆದಾಗ್ಯೂ, ಹೈಕೋರ್ಟ್ ಈ ಆದೇಶಕ್ಕೆ 2 ತಿಂಗಳು ತಡೆಯಾಜ್ಞೆ ನೀಡಿದ ಬಳಿಕ, ರಾಜೀನಾಮೆ ಅಂಗೀಕರಿಸಲು ಮುಖ್ಯಮಂತ್ರಿ ನಿರಾಕರಿಸಿದ ಮೇಲೆ ಬಾಬು ಮರಳಿ ಸಂಪುಟ ಸೇರಿದ್ದರು.
ಕೇರಳ ವಿಧಾನಸಭೆಯ ಬಜೆಟ್ ಅಧಿವೇಶನ ಫೆ.25ಕ್ಕೆ ಕೊನೆಗೊಳ್ಳುವ ನಿರೀಕ್ಷೆಯಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X