ಕುವೈತ್ : ಸುಂದರ ಕುವೈತ್, ಐಎಂಎನಿಂದ ಫೋಟೊಗ್ರಫಿ ಸ್ಪರ್ಧೆ

ಕುವೈತ್: ಇಲ್ಲಿನ ಭಾರತೀಯ ಮುಸ್ಲಿಮ್ ಅಸೋಸಿಯೇಶನ್ (ಐಎಂಎ), ಫೋಟೊಗ್ರಫಿ ಸ್ಪರ್ಧೆಯನ್ನು ಏರ್ಪಡಿಸಿದ್ದು, ಆಸಕ್ತರೆಲ್ಲ ರಿಗೂ ಮುಕ್ತವಾಗಿ ಪಾಲ್ಗೊಳ್ಳುವ ಅವಕಾಶವನ್ನು ನೀಡಲಾಗಿದೆ. 'ಸುಂದರ ಕುವೈತ್' ಫೋಟೊಗ್ರಫಿ ಸ್ಪರ್ಧೆಯ ಥೀಮ್‌ಆಗಿದೆ. ಕುವೈತ್ ರಾಷ್ಟ್ರದ ನೈಜ ಸೌಂದರ್ಯವನ್ನು ಪ್ರತಿಬಿಂಬಿಸುವಂತಹ ಛಾಯಾಚಿತ್ರಗಳನ್ನು ತೆಗೆಯುವ ಅವಕಾಶವನ್ನು ಈ ಸ್ಪರ್ಧೆಯು ಒದಗಿಸಿಕೊಟ್ಟಿದೆ.
ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು, ವೃತ್ತಿಪರ ಛಾಯಾಗ್ರಾಹಕರಾಗಿರಬೇಕಾಗಿಲ್ಲ ಅಥವಾ ಛಾಯಾಚಿತ್ರಗಳನ್ನು ತೆಗೆಯಲು ಅವರು ವೃತ್ತಿಪರ ಕ್ಯಾಮೆರಾಗಳನ್ನು ಬಳಸಬೇಕೆಂದೇನಿಲ್ಲ. ಮೊಬೈಲ್ ಕ್ಯಾಮೆರಾಗಳೊಂದಿಗೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಆದರೆ ಸ್ಪರ್ಧಾಳುಗಳು ಅತ್ಯಂತ ಸೃಜನಶೀಲತೆಯೊಂದಿಗೆ ಛಾಯಾಚಿತ್ರಗಳನ್ನು ತೆಗೆದಿರಬೇಕು ಹಾಗೂ ಅವು ಅಧಿಕ ರಿಸೊಲ್ಯೂಶನ್ ಹೊಂದಿರಬೇಕು.
PHOTO@IMAKUWAIT.ORG
ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿಚ್ಚಿ ಸುವವರು, ತಾವು ತೆಗೆದಿರುವ ಹೈ ರೆಸೂಲ್ಯೂಶನ್‌ನ ಛಾಯಾಚಿತ್ರಗಳನ್ನು ಇ-ಮೇಲ್ ವಿಳಾಸಕ್ಕೆ, ತಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ ಕಳುಹಿಸಿ ಕೊಡಬೇಕು. ಓರ್ವ ಸ್ಪರ್ಧಿಯು ಐದು ಛಾಯಾಚಿತ್ರಗಳನ್ನು ಕಳುಹಿಸಬಹುದಾಗಿದೆ. ಜಾತಿ,ಮತ ಭೇದವಿಲ್ಲದೆ, ಎಲ್ಲಾ ಅನಿವಾಸಿ ಭಾರತೀಯರು ಈ ಸ್ಪರ್ಧೆಯಲ್ಲಿ ಮುಕ್ತವಾಗಿ ಪಾಲ್ಗೊಳ್ಳಬಹುದಾಗಿದೆ. ಸ್ಮಾರ್ಟ್‌ಫೋನ್ ಸೇರಿದಂತೆ,ಎಲ್ಲಾ ರೀತಿಯ ಕ್ಯಾಮೆರಾಗಳಿಂದ ತೆಗೆದ ಫೋಟೊಗಳನ್ನು ಸ್ಪರ್ಧೆಗೆ ಸ್ವೀಕರಿಸಲಾಗುತ್ತದೆ. ಎಲ್ಲಾ ಛಾಯಾಚಿತ್ರಗಳು, ನೈಜವಾದುದಾಗಿರಬೇಕು ಮತ್ತು ಅವನ್ನು ಫೋಟೋಶಾಪ್‌ನಂತಹ ಸಾಫ್ಟ್‌ವೇರ್ ಮೂಲಕ ತಿರುಚಿರಬಾರದು.
ಸ್ಪರ್ಧೆಯಲ್ಲಿ ಆಯ್ಕೆಯಾದ 4 ಶ್ರೇಷ್ಠ ಛಾಯಾಚಿತ್ರಗಳನ್ನು, ಐಎಂಎನ 2016ರ ವಿಶೇಷಾಂಕದಲ್ಲಿ ಪ್ರಕಟಿಸಲಾಗುವುದು. ವಿಶೇಷಾಂಕದ ಮುದ್ರಣ ಪ್ರತಿಗಳ ಮೂಲಕ ಈ ಛಾಯಾಚಿತ್ರಗಳು ಸುಮಾರು 40 ಸಾವಿರ ಮಂದಿಯನ್ನು ತಲುಪುವ ನಿರೀಕ್ಷೆಯಿದೆ. ಅಲ್ಲದೆ ಫೇಸ್‌ಬುಕ್ ಹಾಗೂ ಟ್ವಿಟರ್, ಇಮೇಲ್‌ಗಳು, ವಿವಿಧ ವೆಬ್ ಸುದ್ದಿ ಜಾಲತಾಣಗಳು,ಐಎಎ ವೆಬ್‌ಸೈಟ್‌ಗಳು ಹಾಗೂ ಮುದ್ರಣ ಮಾಧ್ಯಮಗಳಲ್ಲೂ ಈ ಛಾಯಾಚಿತ್ರಗಳು ಪ್ರಸಾರಗೊಳ್ಳಲಿವೆ.
www.imakuwait.org ಈ ವರ್ಷದ ಮಾರ್ಚ್ 18ರಂದು ನಡೆಯಲಿರುವ 'ಡೆಸರ್ಟ್ ಫ್ಯಾಮಿಲಿ ಪಿಕ್‌ನಿಕ್'ನಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮವೊಂದರಲ್ಲಿ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಲಾಗುವುದು. ನೂರಾರು ಕುಟುಂಬಗಳ 1300ಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.ಕುವೈತ್‌ನಲ್ಲಿನ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ನೋಂದಾವಣೆಗೊಂಡಿರುವ ಐಎಂಎಯು ಅವ್‌ಕಾಫ್ ಸಚಿವಾಲಯದ ಸಹಕಾರದೊಂದಿಗೆ ತನ್ನ ಚಟುವಟಿಕೆಗಳನ್ನು ನಡೆಸುತ್ತಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 66511665 ಸಂಪರ್ಕಿಸಬಹುದು ಅಥವಾ ಅನ್ನು ಸಂದರ್ಶಿಸಬಹುದಾಗಿದೆ.








