ಮಕ್ಕಾ, ಜಿದ್ದಾ, ತಾಯಿಫ್ ಗಳಲ್ಲಿ, ಅಂಧರಿಗಾಗಿ ವಿಶೇಷ ವಾಕ್ ವೇ ನಿರ್ಮಾಣ

ಅಂಧರು ಹಾಗೂ ದೃಷ್ಟಿವಿಕಲರಿಗೆ, ಸಮಾಜದ ಇತರ ಸದಸ್ಯರೊಂದಿಗೆ ಬೆರೆಯಲು ಸುರಕ್ಷಿತ ಹಾಗೂ ಸುಭದ್ರವಾದ ಸ್ಥಳವೊಂದನ್ನು ಒದಗಿಸಬೇಕೆಂಬ ಹೈದಾಮ್ ಬಿನ್ ಅಬ್ದುಲ್ ಅಝೀಝ್ ಅಲ್ ಸಬೀಲ್ ಅವರ ಚಿಂತನೆಯ ಫಲವಾಗಿ ಈ ಯೋಜನೆ ಜಾರಿಗೊಂಡಿದೆ ಎಂದು ಎಬ್ಸಾರ್ ಸೇವಾಸಂಸ್ಥೆಯ ಪ್ರಪ್ರಥಮ ಮಹಿಳಾ ಸದಸ್ಯರಾಗಿರುವ ನ್ಟಾಟ್ಟೊ ಹೇಳಿದ್ದಾರೆ.
ಮೊದಲಿಗೆ ನಾವು ಈ ವಿಷಯವನ್ನು ಜಿದ್ದಾ ವಿವಿಯ ಜೊತೆ ಚರ್ಚಿಸಿದ್ದೆವು ಹಾಗೂ ಶ್ರಾವ್ಯ ಪರಿಣಾಮಗಳು (ಸೌಂಡ್‌ಎಫೆಕ್ಟ್ಸ್) ಮತ್ತಿತರ ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡ 2 ಸಾವಿರ ಮೀಟರ್ ವಿಸ್ತೀರ್ಣದ ಕಾಲುದಾರಿ (ವಾಕ್‌ವೇ)ಯನ್ನು ರೂಪಿಸಲು ಯೋಜನೆಯನ್ನು ರೂಪಿಸಿದ್ದೇವೆ ಎಂದು ನ್ಯಾಟ್ಟೊ ತಿಳಿಸಿದ್ದಾರೆ.
ಅಂತಹ ದಾರಿಗಳನ್ನು ಮೂರು ಪ್ರಮುಖ ನಗರಗಳಾದ ಮಕ್ಕಾ, ಜಿದ್ದಾ ಹಾಗೂ ತಾಯಿಫ್‌ಗಳಲ್ಲಿ ನಿರ್ಮಿಸಬೇಕೆಂದು ಯುವರಾಜ ಖಾಲಿದ್ ಸಲಹೆ ನೀಡಿದ್ದಾರೆಂದು ಅವರು ತಿಳಿಸಿದರು.
‘‘ಹೈದಾಮ್‌ನ ಚಿಂತನೆಯು ತಮಗೆ ತುಂಬಾ ಹರ್ಷ ತಂದಿದೆ. ಅದನ್ನು ಪ್ರಪ್ರಥಮವಾಗಿ ಈ ಮೂರು ನಗರಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಹಾಗೂ ಆನಂತರ, ಸೌದಿ ಅರೇಬಿಯದ ಉಳಿದೆಡೆಯೂ ವಿಸ್ತರಿಸಲಾಗುವುದು. ಸೌದಿ ಸಾಮ್ರಾಜ್ಯದ ಅಭಿವೃದ್ಧಿ ಯೋಜನೆಗಳಲ್ಲಿ ಯುವಜನತೆ ಪಾಲ್ಗೊಳ್ಳುವುದನ್ನು ನಾವು ಬಯಸುತ್ತೇವೆಯೆಂದವರು ಹೇಳುತ್ತಾರೆ. ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಪ್ರಸ್ತುತ ವಿಶ್ವದಾದ್ಯಂತ 28.50 ಕೋಟಿ ದೃಷ್ಟಿವಿಕಲರಿದ್ದಾರೆ. ಅವರ ಪೈಕಿ,3.90 ಕೋಟಿ ಮಂದಿ. ಅವಘಡಗಳಿಂದಾಗಿ ತಮ್ಮ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಹಾಗೂ 1.20 ಕೋಟಿ ಮಂದಿ, ದೃಷ್ಟಿಮಾಂಧ್ಯತೆಯನ್ನು ಹೊಂದಿದ್ದಾರೆ, 1.90 ಕೋಟಿ ಮಕ್ಕಳು ದೃಷ್ಟಿವೈಕಲ್ಯದಿಂದ ನರಳುತ್ತಿದ್ದಾರೆ ಹಾಗೂ 1.20 ಕೋಟಿ ಮಕ್ಕಳು ವಿವಿಧ ಕಾರಣಗಳಿಂದಾಗಿ ದೃಷ್ಟಿಮಾಂದ್ಯತೆಯನ್ನು ಅನುಭವಿಸುತ್ತಿದ್ದಾರೆ.







