ಕ್ರಿಕೆಟಿಗ ರವೀಂದ್ರ ಜಡೇಜಗೆ ನಿಶ್ಚಿತಾರ್ಥ

ರಾಜ್‌ಕೋಟ್, ಫೆ.5: ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜ ಶುಕ್ರವಾರ ಮೆಕಾನಿಕಲ್ ಇಂಜಿನಿಯರ್ ರೀವಾ ಸೋಳಂಕಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು.
ಜಡೇಜ ಮಾಲಕತ್ವದ ರೆಸ್ಟೋರೆಂಟ್‌ನಲ್ಲಿ ಕೆಲವೇ ಅತಿಥಿಗಳ ಸಮ್ಮುಖದಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆದಿದೆ.
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್‌ನ ಗೌರವ ಕಾರ್ಯದರ್ಶಿ ನಿರಂಜನ್ ಷಾ ಹಾಗೂ ರಾಜ್‌ಕೋಟ್ ನಗರ ಪೊಲೀಸ್ ಕಮಿಶನರ್ ಮೋಹನ್ ಜಾ ಸಹತ ಕೆಲವೇ ಅತಿಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸೌರಾಷ್ಟ್ರ ಕ್ರಿಕೆಟ್ ತಂಡಕ್ಕೆ ಆಹ್ವಾನ ನೀಡಲಾಗಿತ್ತು. ಆದರೆ, ಸೌರಾಷ್ಟ್ರ ತಂಡ ವಿದರ್ಭ ವಿರುದ್ಧ ಆಂಧ್ರದಲ್ಲಿ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಆಡುತ್ತಿದೆ.
Next Story





