Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಸೌದಿಯಲ್ಲಿ ರಾಷ್ರೀಯ ಮುದ್ರಾ ಅಭಿಯಾನಕ್ಕೆ...

ಸೌದಿಯಲ್ಲಿ ರಾಷ್ರೀಯ ಮುದ್ರಾ ಅಭಿಯಾನಕ್ಕೆ ಚಾಲನೆ

ವಾರ್ತಾಭಾರತಿವಾರ್ತಾಭಾರತಿ5 Feb 2016 7:53 PM IST
share
ಸೌದಿಯಲ್ಲಿ ರಾಷ್ರೀಯ ಮುದ್ರಾ ಅಭಿಯಾನಕ್ಕೆ ಚಾಲನೆ

ಜಿದ್ದಾ: ಪವಿತ್ರ ನಗರ ಮಕ್ಕಾದ ಗವರ್ನರ್, ಯುವರಾಜ ಖಾಲಿದ್ ಅಲ್‌ಫೈಸಲ್ ಈ ವರ್ಷದ ‘ರಾಷ್ಟ್ರೀಯ ಮುದ್ರೆ’ (ನೇಶನ್ಸ್ ಇಂಪ್ರಿಂಟ್) ಅಭಿಯಾನದ ಚಿಹ್ನೆಯನ್ನು ಇತ್ತೀಚೆಗೆ ಅನಾವರಣಗೊಳಿಸಿದರು. ಸೌದಿ ಸಾಮ್ರಾಜ್ಯದ ಎಲ್ಲಾ ವರ್ಗಗಳ ಯುವಜನರನ್ನು ಒಗ್ಗೂಡಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ. ಲೋಗೋ ಅನಾವರಣ ಗೊಳಿಸುವ ಸಂದರ್ಭದಲ್ಲಿ ಯುವರಾಜ ಖಾಲಿದ್ ಮಾತನಾಡಿ, ಈ ಅಭಿಯಾನದ ಯಶಸ್ಸಿಗೆ ಸಕಲ ಪ್ರಯತ್ನಗಳನ್ನು ನಡೆಸಲಾಗುತ್ತಿರುವ ಬಗ್ಗೆ ಶ್ಲಾಘಿಸಿದರು. ಎರಡು ಪವಿತ್ರ ಮಸೀದಿಗಳ ಪಾಲಕರಾದ ದೊರೆ ಸಲ್ಮಾನ್ ಅವರ ಆಡಳಿತದಲ್ಲಿ ಇದೊಂದು ಐತಿಹಾಸಿಕ ಕ್ಷಣವೆಂದು ಬಣ್ಣಿಸಿದರು.

ದೊರೆ ಸಲ್ಮಾನ್ ಅವರ ಆಶೋತ್ತರಗಳು ಹಾಗೂ ಆಕಾಂಕ್ಷೆಗಳನ್ನು ದೇಶದ ಯುವಜನತೆ ಸಾಕಾರಗೊಳಿಸುವರೆಂಬ ಆಶಯವನ್ನು ಯುವರಾಜ ಖಾಲಿದ್ ವ್ಯಕ್ತಪಡಿಸಿದರು. ಅಧಿಕಾರಕ್ಕೇರಿದ ಅಲ್ಪಾವಧಿಯಲ್ಲಿಯೇ ದೊರೆ ಸಲ್ಮಾನ್ ಅವರ ಸಾಧನೆಗಳನ್ನು ಯುವರಾಜ ಖಾಲಿದ್ ಶ್ಲಾಘಿಸಿದರು.

 ಮಕ್ಕಾದ ಆಡಳಿತವು ಯುವಜನತೆಗಾಗಿ ಈ ವರ್ಷ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು. ಮಕ್ಕಾ ಯುವಜನ ವೇದಿಕೆಯು, ಎಲ್ಲಾ ಯುವಜನ ಚಟುವಟಿಕೆಗಳ ಮಾತೃಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆಯೆಂದು ಅವರು ಪ್ರಕಟಿಸಿದರು.

 ಸೌದಿಯ 17 ಪ್ರಾಂತಗಳಲ್ಲಿ 150ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪುರುಷರು ಹಾಗೂ ಮಹಿಳೆಯರು ಸೇರಿದಂತೆ 10 ಲಕ್ಷಕ್ಕೂ ಅಧಿಕ ಮಂದಿಯನ್ನು ಈ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಗುರಿಯನ್ನು ಹೊಂದಲಾಗಿದೆ. ‘ಮಕ್ಕಾ ಯೂತ್ ಸೊಸೈಟಿ ಫಾರ್ ವಾಲಂಟರಿ ವರ್ಕ್’ ಸಂಸ್ಥೆಯು ದೇಶದ ಪ್ರಪ್ರಥಮ ಪರಿಣತ ಸ್ವಯಂಸೇವಾ ಸಂಸ್ಥೆಯಾಗಿರುವುದರಿಂದ, ಆದರ ಮೂಲಕ ಸ್ವಯಂಸೇವಾಚಟುವಟಿಕೆಗಳನ್ನು, ಯುವಜನರು ನಡೆಸಿಕೊಡಲಿದ್ದಾರೆಂದು ಅವರು ತಿಳಿಸಿದರು

‘ತಕ್‌ಫೀರ್‌ಗೆ ಇಲ್ಲ ಎನ್ನಿ, ಚಿಂತನೆಗೆ ಹೌದೆನ್ನಿ’, ಅನೈತಿಕತೆ ಧಿಕ್ಕರಿಸಿ, ಸುಧಾರಣೆ ಸ್ವಾಗತಿಸಿ’ ಎಂಬ ಘೋಷಾವಾಕ್ಯದೊಂದಿಗೆ ದೇಶದ ಮುದ್ರಾ ಅಭಿಯಾನವನ್ನು ನಾವು ಆರಂಭಿಸಲಿದ್ದೇವೆ ಎಂದು ಯುವರಾಜ ಖಾಲಿದ್ ತಿಳಿಸಿದರು. ಯುವಜನತೆ ಅಳವಡಿಸಿಕೊಳ್ಳಬೇಕಾದ ವೌಲ್ಯಗಳ ಕುರಿತ ಅಭಿಯಾನವನ್ನು ಕೂಡಾ ಎಲ್ಲಾ ಪ್ರಾಂತಗಳಲ್ಲಿ ಆರಂಭಿಸಲಾಗುವುದೆಂದು ಅವರು ತಿಳಿಸಿದರು.

ಮಕ್ಕಾ ಪ್ರಾಂತದಾದ್ಯಂತ ಯುವಜನರ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ನೀಡಿದವರನ್ನು ಹಾಗೂ ಯುವಜನ ಕಾರ್ಯಕ್ರಮಗಳ ಬಗ್ಗೆ ಕಾಳಜಿ ವಹಿಸಿರುವವರನ್ನು ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು. ಸರಕಾರಿ ಹಾಗೂ ಖಾಸಗಿ ವಲಯಗಳ ಪಾಲುದಾರಿಕೆಯೊಂದಿಗೆ ಪ್ರಾಂತದ ಯುವಜನರ ಅಭಿವೃದ್ಧಿಗೆ ನೆರವಾಗುವ ಸಮಗ್ರ ವ್ಯವಸ್ಥೆಯೊಂದನ್ನು ರೂಪಿಸಲು ಸಚಿವಾಲಯವು ಯೋಜನೆಗಳನ್ನು ಹೊಂದಿರುವುದಾಗಿ ಅವರು ತಿಳಿಸಿದರು.

ಸೃಜನಶೀಲ ಉಪಕ್ರಮಗಳು ಹಾಗೂ ಅಸಾಂಪ್ರದಾಯಿಕ ಚಿಂತನೆಗಳ ಮೂಲಕ ತಮ್ಮ ಧರ್ಮಕ್ಕೆ ಹಾಗೂ ತಾಯ್ನೆಡಿಗೆ ಸೇವೆ ಸಲ್ಲಿಸಲು ಯುವಜನರು ಆಸಕ್ತರಾಗಿದ್ದಾರೆಂದು ಯುವರಾಜ ಖಾಲಿದ್ ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X