ಕಾಲುಗಳಿಲ್ಲದ ಯುವತಿ ಸ್ಟೂಲ್ ಹಿಡಿದು ವೈದ್ಯೆಯಾದ ಕಥೆ !

ಬೀಜಿಂಗ್: ಚೀನದ ಚಂಗ್‌ಕ್ವಾಕಿಂಗ್‌ನ ವಿಕಲಾಂಗ ಯುವತಿಯೊಭ್ಬಳು ಸ್ಟೂಲ್ ಹಿಡಿದು ನಡೆಯುತ್ತಾ ವೈದ್ಯಕೀಯ ಕೋರ್ಸ್ ಮುಗಿಸಿದ್ದಾಳೆ. ಜುಹೋಂಗ್ ನಾಲ್ಕು ವರ್ಷದವಳಿದ್ದಾಗ ರಸ್ತೆ ಅಫಘಾತವೊಂದರಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಳು. ಆದರೂ ಅವಳು ಧೈರ್ಯಗೆಡಲಿಲ್ಲ. ತನ್ನ ವೈದ್ಯಕೀಯ ವ್ಯಾಸಂಗವನ್ನು ಮುಂದುವರಿಸಿದಳು. ಈಗ ತಮ್ಮ ಗ್ರಾವದಲ್ಲಿಯೇ ಒಂದು ಆಸ್ಪತ್ರೆಯನ್ನು ತೆರೆದಿದ್ದಾಳೆ.
ವಿಕಲಾಂಗರು ಯಾರಿಗೇನು ಕಮ್ಮಿಯಿಲ್ಲ ಎಂಬುದನ್ನು ಜುಹೋಂಗ್ ಸಾಧಿಸಿ ತೋರಿಸಿದ್ದಾಳೆ, ಜನಸೇವೆ ಮಾಡುವುದು ನನಗಿರುವ ಏಕೈಕ ಉದ್ದೇಶವಾಗಿದೆ ಎಂದು ಜುಹೋಂಗ್ ಹೇಳಿಕೊಂಡಿದ್ದಾಳೆ. 1983ರಲ್ಲಿ ಬೆಳೆಗ್ಗೆ ಜುಹೋಂಗ್ ಶಾಲೆಗೆ ತೆರುಳುತ್ತಿದ್ದಾಗ ಭಾರೀ ಟ್ರಕ್ಕೊಂದು ಅವಳಿಗೆ ಬಡಿದಿತ್ತು. ಅಪಘಾತದಲ್ಲಿ ಅವಳೆರಡೂ ಕಾಲುಗಳಿಗೆ ಗಂಭೀರ ಹಾನಿಯಾಗಿತ್ತು. ವೈದ್ಯರು ಅಪರೇಶನ್ ಮಾಡಿ ಎರಡು ಕಾಲುಗಳನ್ನು ತೆಗೆದು ಹಾಕಿದ್ದರು.
ಆಸ್ಪತ್ರೆಯಿಂದ ಗುಣಮುಖಳಾಗಿ ಬಂದ ಮೇಲೆ ಎರಡು ಸ್ಟೂಲ್ ಹಿಡಿದು ನಡೆಯುವುದಕ್ಕೆ ಅಭ್ಯಾಸ ಮಾಡಿದಳುಮತ್ತು ನಡೆಯಲು ಯಶಸ್ವಿಯಾದಳು. ಆದರೆ ಹೀಗೆ ಅಭ್ಯಾಸ ಮಾಡುವಾಗ ಅವಳಿಗೆ ವಿಪರೀತ ನೋವಾಗುತ್ತಿತ್ತು. ತಾನು ನಡೆದಾಡುವುದು ಸಾಧ್ಯವಲ್ಲ ಎಂದು ಅನಿಸಿತ್ತಂತೆ. ಆದರೆ ಅಭ್ಯಾಸವನ್ನು ಕೈಬಿಡದೆ ಮುಂದುವರಿಸಿ ಈಗ ಸ್ಟೂಲ್‌ನ ಸಹಾಯದಲ್ಲಿ ನಡೆಯುತ್ತಿದ್ದಾಳೆ. ತನ್ನ ವೈದಕೀಯ ವ್ಯಾಸಂಗ ಮುಗಿಸಿದ್ದಾಳೆ ಜೊತೆಗೆ ಕ್ಲಿನಿಕ್‌ನ್ನು ತೆರೆದಿದ್ದಾಳೆ. ಜುಹೋಂಗ್‌ಗಳ ಸಾಧನೆ ಇತರರಿಗೆ ಪ್ರೇರಣೀಯವಾಗಿದೆ.








