ಮಹಿಳೆಯರ ಕ್ರಿಕೆಟ್: ಭಾರತ ವಿರುದ್ಧ ಆಸ್ಟ್ರೇಲಿಯಕ್ಕೆ ಜಯ

ಸ್ಮತಿ ಮಂದಾನಾ ಶತಕ ವ್ಯರ್ಥ
ಹೊಬರ್ಟ್, ಫೆ.5: ಸ್ಮತಿ ಮಂದಾನಾ ಚೊಚ್ಚಲ ಶತಕ ಬಾರಿಸಿದ ಹೊರತಾಗಿಯೂ ಭಾರತ ಮಹಿಳಾ ತಂಡ ಆಸ್ಟ್ರೇಲಿಯ ವಿರುದ್ಧದ ಎರಡನೆ ಏಕದಿನ ಪಂದ್ಯವನ್ನು 6 ವಿಕೆಟ್‌ಗಳ ಅಂತರದಿಂದ ಸೋತಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ನಿಕೊಲೆ ಬೊಲ್ಟನ್(77) ಹಾಗೂ ನಾಯಕಿ ಮೆಗ್ ಲಾನ್ನಿಂಗ್(61) ನೆರವಿನಿಂದ ಭರ್ಜರಿ ಗೆಲುವು ಸಾಧಿಸಿರುವ ಆಸ್ಟ್ರೇಲಿಯ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯೊಂದಿಗೆ ಸರಣಿ ಜಯಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತವನ್ನು 8 ವಿಕೆಟ್‌ಗೆ 252 ರನ್‌ಗೆ ನಿಯಂತ್ರಿಸಿದ ಆಸ್ಟ್ರೇಲಿಯ ಕೇವಲ ನಾಲ್ಕು ವಿಕೆಟ್‌ಗಳ ನಷ್ಟದಲ್ಲಿ ಇನ್ನೂ 20 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಗುರಿ ತಲುಪಿತು.
ಭಾರತ ಪಂದ್ಯದ ಮೊದಲ ಎಸೆತದಲ್ಲೇ ಆರಂಭಿಕ ಆಟಗಾರ್ತಿ ಟಿ. ಕಾಮಿನಿ ವಿಕೆಟ್ ಕಳೆದುಕೊಂಡಿತು. ಆಗ 2ನೆ ವಿಕೆಟ್‌ಗೆ 150 ರನ್ ಜೊತೆಯಾಟ ನಡೆಸಿದ ಮಂದಾನ(102 ರನ್, 109 ಎಸೆತ, 11 ಬೌಂಡರಿ) ಹಾಗೂ ನಾಯಕಿ ಮಿಥಾಲಿ ರಾಜ್(58ರನ್, 98 ಎ, 5 ಬೌಂಡರಿ) ತಂಡವನ್ನು ಆಧರಿಸಿದರು
Next Story





