ಟ್ವೆಂಟಿ-20 ವಿಶ್ವಕಪ್‌ಗೆ ಭಾರತದ ಮಹಿಳಾ ತಂಡ
ಹೊಸದಿಲ್ಲಿ, ಫೆ.5: ಆಸ್ಟ್ರೇಲಿಯ ವಿರುದ್ಧ ಐತಿಹಾಸಿಕ ಸರಣಿ ಜಯಿಸಿದ್ದ ಭಾರತದ ಮಹಿಳಾ ತಂಡವನ್ನೇ ಮಾರ್ಚ್-ಎಪ್ರಿಲ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವ ಚಾಂಪಿಯನ್‌ಶಿಪ್‌ಗೆ ಉಳಿಸಿಕೊಳ್ಳಲಾಗಿದೆ.
ವಿಶ್ವಕಪ್‌ನಲ್ಲಿ ಮಿಥಾಲಿ ರಾಜ್ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ.
ಮಿಥಾಲಿ ನೇತೃತ್ವದ ಭಾರತ ತಂಡ ಕಳೆದ ತಿಂಗಳು ಆಸ್ಟ್ರೇಲಿಯ ವಿರುದ್ಧ ಮೊದಲ ಬಾರಿ ದ್ವಿಪಕ್ಷೀಯ ಸರಣಿ ಜಯಿಸುವ ಮೂಲಕ ಇತಿಹಾಸ ಬರೆದಿತ್ತು. ಭಾರತ ಸದ್ಯ ಆಸ್ಟ್ರೇಲಿಯದಲ್ಲಿ ಏಕದಿನ ಸರಣಿಯನ್ನು ಆಡುತ್ತಿದೆ.
ಟ್ವೆಂಟಿ-20 ವಿಶ್ವಕಪ್‌ಗೆ ಭಾರತದ ಮಹಿಳಾ ತಂಡ:
ಮಿಥಾಲಿ ರಾಜ್(ನಾಯಕಿ), ಜೂಲನ್ ಗೋಸ್ವಾಮಿ, ಸ್ಮತಿ ಮಂದಾನ, ವೇದಾ ಕೃಷ್ಣಮೂರ್ತಿ, ಹರ್ಮನ್‌ಪ್ರೀತ್ ಕೌರ್, ಶಿಖಾ ಪಾಂಡೆ, ರಾಜೇಶ್ವರಿ ಗಾಯಕ್ವಾಡ್, ಸುಶ್ಮಾ ವರ್ಮ, ಪೂನಂ ಯಾದವ್, ವಿಆರ್ ವನಿತಾ, ಅನುಜಾ ಪಾಟೀಲ್, ಎಕ್ತಾ ಬಿಶ್ತ್, ತಿರುಶ್‌ಕಾಮಿನಿ, ದೀಪ್ತಿ ಶರ್ಮ, ನಿರಂಜನಾ ನಾಗರಾಜನ್.
Next Story





