ಶಬರಿ ಮಲೆಗೆ ಮಹಿಳಾ ಪ್ರವೇಶ ಸಲ್ಲ: ಕೇರಳ ಸರಕಾರ

ತಿರುವನಂತಪುರಂ: ಶಬರಿಮಲೆಗೆ ಮಹಿಳಾಪ್ರವೇಶವನ್ನು ಅನುಮತಿಸಲಾಗದು ಎಂದು ಸೂಚಿಸಿ ಕೇರಳ ಸರಕಾರ ಸುಪ್ರೀಂ ಕೋರ್ಟ್‌ಗೆ ಅಫಿದಾವತ್ ಸಲ್ಲಿಸಿದೆ. ಹತ್ತರಿಂದ ಐವತ್ತು ವಯೋಮಾನದೊಳಗಿನ ಮಹಿಳೆಯರ ಶಬರಿಮಲೆ ಪ್ರವೇಶ ಸಂಪ್ರದಾಯ ವಿರೋಧಿಯಾಗಿದೆ.
ಸಂವಿದಾನದ 25,26 ಅನುಚ್ಛೇದಗಳಲ್ಲಿ ಹಿಂದಿನಿಂದಲೂ ಸಂಪ್ರದಾಯವಾಘಿ ಮುಂದುವರಿದು ಬಂದ ಆಚರೆಣೆಗಳನ್ನು ಉಲ್ಲಂಘಿಸಬಾರದೆಂದು ಹೇಳಲಾಗಿದೆ ಎಂದು ಅಫಿದಾವತ್‌ನಲ್ಲಿ ವಿವರಿಸಲಾಗಿದೆ. ಶಬರಿಮಲೆಯಲ್ಲಿ 10 ಮತ್ತು 50ರೊಳಗಿನ ಮಹಿಳೆಯರಿಗೂ ಶಬರಿ ಮಲೆ ದೇವಳ ಪ್ರವೇಶಕ್ಕೆ ಅನುಮತಿಸಬಹುದಾಗಿದೆ ಎಂದು ಹಿಂದಿನ ಎಲ್‌ಡಿಎಫ್ ಸರಕಾರ 2008ರಲ್ಲಿ ಅಫಿದಾವತ್ ಸಲ್ಲಿಸಿತ್ತು.
Next Story





