ಫೆ. 8ರಂದು ‘ಟೆಂಡರ್ ಫ್ರೆಶ್’ ಐಸ್‌ಕ್ರೀಂ ಪಾರ್ಲರ್ ಶುಭಾರಂಭ

ಮಂಗಳೂರು, ಫೆ. 6: ನೈಸರ್ಗಿಕವಾಗಿ ತಯಾರಿಸಲಾದ ಸ್ವಾದಿಷ್ಟಕರ ಸಸ್ಯಾಹಾರಿ ಐಸ್‌ಕ್ರೀಂಗಳಿಂದ ಕೂಡಿದ ಐಸ್‌ಕ್ರೀಂ ಪಾರ್ಲರ್ ‘ಟೆಂಡರ್ ಫ್ರೆಶ್’ ಫೆ. 8ರಂದು ನಗರದ ಮಲಬಾರ್ ಗೋಲ್ಡ್ ಎದುರಿನ ಅಥೆನಾ ಆಸ್ಪತ್ರೆ ಸಂಕೀರ್ಣದಲ್ಲಿ ಶುಭಾರಂಭಗೊಳ್ಳಲಿದೆ.
ಅಂದು ಸಂಜೆ 7 ಗಂಟೆಗೆ ಐಸ್‌ಕ್ರೀಂ ಪಾರ್ಲರ್‌ನ ಉದ್ಘಾಟನಾ ಸಮಾರಂಭದಲ್ಲಿ ಶೈಖುನಾ ಅಲ್‌ಹಾಜ್ ಅಲಿಕುಂಞಿ ಉಸ್ತಾದ್ ಶಿರಿಯ ದುವಾ ನೆರವೇರಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟನೆ ನೆರವೇರಿಸಲಿದ್ದು, ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್ ಐಸ್‌ಕ್ರೀಂ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದಾರೆ.
ಅಧ್ಯಕ್ಷತೆಯನ್ನು ಅಥೆನಾ ಆಸ್ಪತ್ರೆ ಮತ್ತು ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್‌ನ ಅಧ್ಯಕ್ಷರಾದ ಆರ್.ಎಸ್. ಶೆಟ್ಟಿಯಾನ್ ವಹಿಸಲಿದ್ದು, ಶಾಸಕರಾದ ಮೊಯ್ದಿನ್ ಬಾವ, ಜೆ.ಆರ್. ಲೋಬೋ, ಐವನ್ ಡಿಸೋಜಾ, ಅಥೆನಾ ಆಸ್ಪತ್ರೆ ಮತ್ತು ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್‌ನ ನಿರ್ದೇಶಕಿ ಆಶಾ ಶೆಟ್ಟಿಯಾನ್ ಸೇರಿದಂತೆ ಇತರ ಹಲವು ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಯಾವುದೇ ರಾಸಾಯನಿಕ ಸ್ವಾದ ಹಾಗೂ ಬಣ್ಣಗಳಿಂದ ಕೂಡಿರದ ಸಸ್ಯಾಹಾರಿ ಐಸ್‌ಕ್ರೀಂ ಪಾರ್ಲರ್ ಇದಾಗಿದ್ದು, ಪ್ರತಿ ಅರ್ಧ ಕೆಜಿ ಐಸ್‌ಕ್ರೀಂ ಪ್ಯಾಕ್‌ನೊಂದಿಗೆ 250 ಗ್ರಾಂ ಐಸ್‌ಕ್ರೀಂ ಉಚಿತವಾಗಿ ದೊರೆಯಲಿದೆ. ಈ ಕೊಡುಗೆ ಸೀಮಿತವಾಗಿರುತ್ತದೆ.
ತಾಜಾ ಹಣ್ಣುಗಳು, ಒಣ ಹಣ್ಣುಗಳು, ಚಾಕಲೇಟ್‌ಗಳಿಂದ ಕೂಡಿದ ಬಗೆಬಗೆಯ ಐಸ್‌ಕ್ರೀಂಗಳ ಜತೆಗೆ ವಿಶೇಷ ಐಸ್‌ಕ್ರೀಂಗಳು ಕೂಡಾ ಪಾರ್ಲರ್‌ನಲ್ಲಿ ಲಭ್ಯವಿರುತ್ತವೆ. ಅರ್ಧ ಕೆಜಿ ಮತ್ತು ಅದಕ್ಕಿಂತ ಹೆಚ್ಚಿನ ಅಥವಾ ಕನಿಷ್ಠ 6 ಕಪ್ ಐಸ್‌ಕ್ರೀಂಗಳನ್ನು ಮನೆಗಳಿಗೆ ಉಚಿತವಾಗಿ ತಲುಪಿಸುವ ವ್ಯವಸ್ಥೆಯೂ ಇದೆ.
ಮುಂಬೈ ಮೂಲದ ಟೆಂಡರ್ ಫ್ರೆಶ್ ಐಸ್‌ಕ್ರೀಂನ ಮಂಗಳೂರಿನ ಪ್ರಥಮ ಪಾರ್ಲರ್ ಇದಾಗಿದ್ದು, ಈಗಾಗಲೇ ದೇಶದಲ್ಲಿ 15ಕ್ಕೂ ಅಧಿಕ ಕಡೆ ಐಸ್‌ಕ್ರೀಂ ಪಾರ್ಲರ್‌ಗಳನ್ನು ಹೊಂದಿದೆ ಎಂದು ಸಂಸ್ಥೆಯ ಮಾಲಕ ಅಬ್ದುಲ್ ಅಝೀಝ್ ರಹಿಮಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







