ಬದಲಾದ ಸರಕಾರ ,ಬದಲಾಗದ ಬಡತನ
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಇತ್ತೀಚಿಗೆ ೧೦ ವರ್ಷಗಳನ್ನು ಪೂರೈಸಿತು. ಗ್ರಾಮೀಣ ಬಡತನ ನಿವಾರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಕೀರ್ತಿ ಈ ಯೋಜನೆಯದ್ದು. ಪ್ರಧಾನಿ ನರೇಂದ್ರ ಮೋದಿ ಅವರೇ ಯುಪಿಎ ಪ್ರಾರಂಭಿಸಿದ ಯೋಜನೆಯನ್ನು ಶ್ಲಾಘಿಸಿದ್ದರು. ಆದರೆ ೧೦ ವರ್ಷದ ಹಿಂದೆ ಈ ಯೋಜನೆ ಪ್ರಾರಂಭವಾದ ಉತ್ತರ ಪ್ರದೇಶದ ಬುಂದೇಲ್ ಖಂಡ್ ನ ಬಂಡ ಜಿಲ್ಲೆಯಲ್ಲಿ ಹತ್ತು ವರ್ಷಗಳ ಬಳಿಕವೂ ತಳ ಮಟ್ಟದ ಪರಿಸ್ಥಿತಿ ಬದಲಾಗಿಲ್ಲ ಎಂಬುದನ್ನು ಇಲ್ಲಿಗೆ ಭೇಟಿ ನೀಡಿದ ಪತ್ರಕರ್ತೆ ಶ್ರೀಯಾ ಮೋಹನ್ ಕಂಡುಕೊಂಡಿದ್ದಾರೆ. ಯೋಜನೆ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಅನುಷ್ಠಾನ ಮಾಡುವವರು ಪ್ರಾಮಾಣಿಕರಾಗಿಲ್ಲದಿದ್ದರೆ ಅದು ನಿಷ್ಪ್ರಯೋಜಕವಾಗುತ್ತದೆ ಎಂಬ ಮಾತಿಗೆ ಬಹುಶ: ಇದಕ್ಕಿಂತ ಉತ್ತಮ ನಿದರ್ಶನ ಇನ್ನೊಂದಿಲ್ಲ. ಇಲ್ಲಿ " ಬಂಡ"ದಲ್ಲಿ ಶ್ರೀಯಾ ಕಂಡ ಕೆಲವು ಚಿತ್ರಗಳಿವೆ. ಪದಗಳ ಅಗತ್ಯವಿಲ್ಲದ ಚಿತ್ರಗಳಿವು ...
courtesy : catchnews.com
Next Story





