Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಪವನ್ ನೇಗಿ 8.5 ಕೋಟಿ ರೂ.ಗೆ ಡೆವಿಲ್ಸ್...

ಪವನ್ ನೇಗಿ 8.5 ಕೋಟಿ ರೂ.ಗೆ ಡೆವಿಲ್ಸ್ ಪಾಲು; ವಿಶ್ವಕಪ್ ತಂಡ ಸೇರಿದ 24 ಗಂಟೆಯೊಳಗೆ ಕೋಟ್ಯಾಧೀಶ

ವಾರ್ತಾಭಾರತಿವಾರ್ತಾಭಾರತಿ6 Feb 2016 5:54 PM IST
share
ಪವನ್ ನೇಗಿ 8.5 ಕೋಟಿ ರೂ.ಗೆ ಡೆವಿಲ್ಸ್ ಪಾಲು; ವಿಶ್ವಕಪ್ ತಂಡ ಸೇರಿದ 24 ಗಂಟೆಯೊಳಗೆ ಕೋಟ್ಯಾಧೀಶ

 ಬೆಂಗಳೂರು, ಫೆ.6: ಮುಂಬರುವ 9ನೆ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಮೆಂಟ್‌ಗೆ ಇಂದು ನಡೆದ ಆಟಗಾರರ ಹರಾಜಿನಲ್ಲಿ ಆಸ್ಟ್ರೇಲಿಯದ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಗರಿಷ್ಠ ಮೊತ್ತ 9.5 ಕೋಟಿ ರೂ.ಗೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪಾಲಾದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ಕ್ಯಾಪ್ ಇನ್ನೂ ಧರಿಸದ ದಿಲ್ಲಿಯ ಆಟಗಾರ ಪವನ್ ನೇಗಿ ಜಾಕ್‌ಪಾಟ್ ಗಿಟ್ಟಿಸಿಕೊಂಡಿದ್ದಾರೆ.
ವಿಶ್ವಕಪ್ ಟ್ವೆಂಟಿ-20 ಮತ್ತು ಏಷ್ಯಾ ಕಪ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡ 24 ಗಂಟೆಗಳೊಳಗಾಗಿ ದಿಲ್ಲಿಯ 23ರ ಹರೆಯದ ಕ್ರಿಕೆಟಿಗ ಪವನ್ ನೇಗಿ ಕೋಟ್ಯಾಧೀಶರಾಗಿ ಹೊರಹೊಮ್ಮಿದ್ದಾರೆ.
ನೇಗಿ ಆಟಗಾರರ ಹರಾಜಿನಲ್ಲಿ ಆಲ್‌ರೌಂಡರ್ ಯುವರಾಜ್ ಸಿಂಗ್‌ರನ್ನು ಹಿಂದಕ್ಕೆ ತಳ್ಳಿ 8.5 ಕೋಟಿ ರೂ. ಮೊತ್ತಕ್ಕೆ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ತೆಕ್ಕೆಗೆ ಸೇರ್ಪಡೆಯಾಗಿದ್ದಾರೆ.
ಕಳೆದ ಬಾರಿ ಉಚ್ಛಾಟಿತ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ನೇಗಿ ಅವರ ಮೂಲ ಬೆಲೆ 30 ಲಕ್ಷ ರೂ. ಇತ್ತು. ಆದರೆ ಅವರು ಅನಿರೀಕ್ಷಿತವಾಗಿ ಬಂಪರ್ ಬಹುಮಾನ ಗಿಟ್ಟಿಸಿಕೊಂಡಿದ್ದಾರೆ.
ಈ ಆವೃತ್ತಿಯ ಹರಾಜಿನಲ್ಲಿ ಆಸ್ಟ್ರೇಲಿಯದ ಶೇನ್ ವ್ಯಾಟ್ಸನ್ ಗರಿಷ್ಠ ಮೊತ್ತಕ್ಕೆ ಮಾರಾಟವಾಗಿದ್ದಾರೆ. 9.5 ಕೋಟಿ ರೂ.ಗೆ ವಾಟ್ಸನ್ ಅವರು ರಾಯಲ್ ಚಾಲೆಂಜರ್ಸ್‌ ತಂಡದಲ್ಲಿ ಅವಕಾಶ ಪಡೆದರು.
 ಯುವರಾಜ್ ಸಿಂಗ್ 7 ಕೋಟಿ ರೂ.ಗೆ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಸೇರ್ಪಡೆಗೊಂಡಿದ್ದರು. ಅಷ್ಟೇ ಮೊತ್ತಕ್ಕೆ ದಕ್ಷಿಣ ಆಫ್ರಿಕದ ಆಲ್‌ರೌಂಡರ್ ಕ್ರಿಸ್ ಮೋರಿಸಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿ ಸ್ಥಾನ ಪಡೆದರು. ಪವನ್ ನೇಗಿ ಯುವರಾಜ್ ಅವರನ್ನು ಮೀರಿಸಿ, ಭಾರತದ ಆಟಗಾರರ ಪೈಕಿ ಗರಿಷ್ಟ ಮೊತ್ತಕ್ಕೆ ಮಾರಾಟವಾಗಿರುವ ಆಟಗಾರ ಎನಿಸಿಕೊಂಡಿದ್ದಾರೆ.
 ನೇಗಿ ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದರು. ಶುಕ್ರವಾರ ವಿಶ್ವಕಪ್ ಮತ್ತು ಏಷ್ಯಾಕಪ್ ತಂಡಗಳಲ್ಲಿ ಸ್ಥಾನ ಉಳಿಸಿಕೊಂಡರು. ಎಡಗೈ ಸ್ಪಿನ್ನರ್ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ನೇಗಿ 56 ಟಿ 20 ಪಂದ್ಯಗಳನ್ನು ಆಡಿದ್ದಾರೆ. 46 ವಿಕೆಟ್ ಪಡೆದಿದ್ದಾರೆ. ಇತ್ತೀಚೆಗೆ ಸೈಯದ್ ಮುಶ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ 9 ಪಂದ್ಯಗಳಲ್ಲಿ 6 ವಿಕೆಟ್ ಮತ್ತು 173 ರನ್ ಗಳಿಸಿದ್ದಾರೆ. 3 ಪ್ರಥಮ ದರ್ಜೆ ಪಂದ್ಯ ಆಡಿರುವ ಅನುಭವ ಹೊಂದಿದ್ದಾರೆ.
ಮೋಹಿತ್ ಶರ್ಮ(6 .50 ಕೋಟಿ ರೂ.), ಆಶೀಷ್ ನೆಹ್ರಾ(5.50 ಕೋಟಿ ರೂ.), ಮಿಚೆಲ್ ಮಾರ್ಷ್ (4.80 ಕೋಟಿ ರೂ.), ಮುರುಗೇಶನ್ ಅಶ್ವಿನ್(4.50 ಕೋಟಿ ರೂ.), ಕಾರ್ಲೊಸ್ ಬ್ರಾತ್‌ವೈಟ್( 4.20 ಕೋಟಿ ರೂ.) ಮತ್ತು ದೀಪಕ್ ಹೂಡಾ(4.20 ಕೋಟಿ ರೂ.) ಅಗ್ರ ಹತ್ತರಲ್ಲಿ ಗರಿಷ್ಠ ಬೆಲೆಗೆ ಮಾರಾಟವಾಗಿರುವ ಆಟಗಾರರು.
 
,,,,,,,,,,,,,,,
 ಕೋಟಿ ರೂ. ಮೊತ್ತಕ್ಕೆ ವಿವಿಧ ತಂಡಗಳನ್ನು ಸೇರಿದ ಆಟಗಾರರು
         ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್   ಕೋಟಿ ರೂ.
  ಕೆವಿನ್ ಪೀಟರ್ಸನ್                 3.5
ಇಶಾಂತ್ ಶರ್ಮ                   3.8
 ಇರ್ಫಾನ್ ಪಠಾಣ್                 1.0
ಮಿಚೆಲ್ ಮಾರ್ಷ್                  4.8
  ಮುರುಗನ್ ಅಶ್ವಿನ್                4.5
  ತಿಸ್ಸರಾ ಪೆರೇರಾ                  1.0
ದಿ ಗುಜರಾತ್ ಲಯನ್ಸ್
ಡ್ವೆಯ್ನೆ ಸ್ಮಿತ್                       2.3
 ಡೇಲ್ ಸ್ಟೇಯ್ನ                     2.3
 ದಿನೇಶ್ ಕಾರ್ತಿಕ್                 2.3
 ಧವಳ್ ಕುಲಕರ್ಣಿ                 2.0
 ಪ್ರವೀಣ್ ಕುಮಾರ್                3.5
ಏಕಲವ್ಯ ದ್ವಿವೇದಿ                 1.0
ಆ್ಯರೊನ್ ಫಿಂಚ್                  1.0
ರಾಯಲ್ ಚಾಲೆಂಜರ್ಸ್‌ ಬೆಂಗಳೂರು
 ಶೇನ್ ವ್ಯಾಟ್ಸನ್                  5.5
ಸ್ಟುವರ್ಟ್ ಬಿನ್ನಿ                   2.0
 ಕೇನ್ ರಿಚರ್ಡ್ಸನ್                2.0
ಸನ್‌ರೈಸರ್ಸ್‌ ಹೈದರಾಬಾದ್
 ಆಶೀಶ್ ನೆಹ್ರಾ                   5.5
ಯುವರಾಜ್ ಸಿಂಗ್             7.0
ಮುಸ್ತಫಿಝ್ರುಹ್ಮಾನ್           1.4
 ಬರೀಂದರ್ ಸ್ರಾನ್            1.2
 ಆದಿತ್ಯ ತಾರೆ                   1.2
ದೀಪಕ್ ಹೂಡಾ               4.2
ಡೆಲ್ಲಿ ಡೇರ್‌ಡೆವಿಲ್ಸ್
 ಸಂಜು ಸ್ಯಾಮ್ಸನ್             4.2
 ಕ್ರಿಸ್ ಮೊರೀಸ್                7.0
ಕಾರ್ಲೊಸ್ ಬ್ರಾತ್‌ವೈಟ್        4.2
 ಕರುಣ್ ನಾಯರ್              4.0
 ರಿಶಾಬ್ ಪಂತ್                1.9
 ಪವನ್ ನೇಗಿ                   8.5
ಮುಂಬೈ ಇಂಡಿಯನ್ಸ್
ಜೋಸ್ ಬಟ್ಲರ್               3.8
ಟಿಮ್ ಸೌಥಿ                   2.5
 ನಾಥು ಸಿಂಗ್                 3.2
 ಕೆಪಿ ಕಾಮತ್                 1.4
 ಕ್ರುನಾಲ್ ಪಾಂಡ್ಯ            2.0
ಕೋಲ್ಕತಾ ನೈಟ್ ರೈಡರ್ಸ್‌
 ಜಾನ್ ಹೇಸ್ಟಿಂಗ್ಸ್            1.3
ಜಯದೇವ್ ಉನದ್ಕಟ್        1.6
ಅಂಕಿತ್ ರಜಪೂತ್          1.5
ಕಿಂಗ್ಸ್ ಇಲೆವೆನ್ ಪಂಜಾಬ್
ಮೋಹಿತ್ ಶರ್ಮ             6.5
ಕೈಲ್ ಅಬಾಟ್                2.1
,,,,,,,,,,,,
ಯುವಿ ವೌಲ್ಯ ಇಳಿಕೆ
ಬೆಂಗಳೂರು, ಫೆ.6: ಪ್ರತಿ ವರ್ಷ ಐಪಿಎಲ್ ಆವೃತ್ತಿಯ ವೇಳೆ ಅತ್ಯಂತ ದುಬಾರಿ ಆಟಗಾರನಾಗಿ ಗಮನ ಸೆಳೆಯುವ ಆಲ್‌ರೌಂಡರ್ ಯುವರಾಜ್ ಸಿಂಗ್ ವೌಲ್ಯ ಈ ಬಾರಿ ಕಡಿಮೆಯಾಗಿದೆ.
 ಯುವರಾಜ್ ಸಿಂಗ್ ಏಳು ಕೋಟಿ ರೂ.ಗೆ ಹರಾಜಾಗಿದ್ದಾರೆ.ಇವರನ್ನು ವ್ಯಾಟ್ಸನ್ ಮತ್ತು ಪವನ್ ನೇಗಿ ಹಿಂದಕ್ಕೆ ತಳ್ಳಿದ್ದಾರೆ. 2014ರಲ್ಲಿ 14 ಕೋಟಿ ರೂ.ಗೆ ಆರ್‌ಸಿಬಿ ಸೇರ್ಪಡೆಗೊಂಡಿದ್ದ ಯುವಿ 2015ರಲ್ಲಿ 16 ಕೋಟಿ ರೂ.ಗೆ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಸೇರ್ಪಡೆಯಾಗಿದ್ದರು. ಆದರೆ ಅವರಿಂದ ತಂಡಕ್ಕೆ ದೊಡ್ಡ ಲಾಭವಾಗಲಿಲ್ಲ.
 ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರು ಯುವರಾಜ್‌ರಂತೆ ಹಿನ್ನಡೆ ಅನುಭವಿಸಿದ್ದಾರೆ. 2014ರಲ್ಲಿ ಐಪಿಎಲ್‌ನಲ್ಲಿ 12.50 ಕೋಟಿ ರೂ, 2015ರಲ್ಲಿ 10.5 ಕೋಟಿ ರೂ. ಗಿಟ್ಟಿಸಿಕೊಂಡಿದ್ದರು. ಈ ಬಾರಿ 2.30 ಕೋಟಿ ರೂ.ಗೆ ಗುಜರಾತ್ ಲಯನ್ಸ್ ಸೇರ್ಪಡೆಗೊಂಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X