ರೋಮ್ : ಇದು ನಾಟಕವಲ್ಲ ! ನೇಣಿಗೇರುವ ದೃಶ್ಯದಲ್ಲಿ ನಟನೇ ಬಲಿ

ರೋಮ್ , ಫೆ. 6 : ರಂಗ ನಟನೊಬ್ಬ ನಾಟಕ ಪ್ರದರ್ಶನದಲ್ಲೇ ಆಕಸ್ಮಿಕವಾಗಿ ನೇಣಿಗೆ ಬಲಿಯಾದ ದುರಂತ ಇತ್ತೀಚಿಗೆ ಇಟಲಿಯಲ್ಲಿ ನಡೆದಿದೆ. ಕಳೆದ ಶನಿವಾರ ನಡೆದ ಈ ಘಟನೆಯ ಬಳಿಕ ನಟ ಕೋಮಾಕ್ಕೆ ಹೋಗಿದ್ದು ಗುರುವಾರ ಮೃತಪಟ್ಟಿದ್ದಾನೆ. ಪೊಲೀಸರು ಈಗ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ.
ರಫಾಯೆಲ್ ಶುಮ್ಯಾಕರ್ ಎಂಬ 27 ವರ್ಷ ವಯಸ್ಸಿನ ನಟ ನಾಟಕವೊಂದರಲ್ಲಿ ನೇಣಿಗೆ ಶರಣಾಗುವ ದೃಶ್ಯದಲ್ಲಿ ನಟಿಸುತ್ತಿದ್ದ. ಆದರೆ ನಾಟಕ ನೋಡುತ್ತಿದ್ದ ಪ್ರೇಕ್ಷಕನೊಬ್ಬನಿಗೆ ಏನೋ ಎಡವಟ್ಟಾಗಿದೆ ಎಂದು ಗೊತ್ತಾಗಿ ಬೊಬ್ಬೆ ಹಾಕಿದ. ಕೂಡಲೇ ಎಚ್ಚೆತ್ತು ನಟನನ್ನು ನೇಣಿನಿಂದ ಕೆಳಗಿಳಿಸಲಾಯಿತು. ಆದರೆ ಆಗ ಬಹಳ ತಡವಾಗಿತ್ತು.
ಈಗ ನಾಟಕದ ಇಬ್ಬರು ನಿರ್ದೇಶಕರು ಹಾಗು ಇಬ್ಬರು ತಂತ್ರಜ್ಞರ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ.
ಪ್ರಕರಣ ಆತ್ಮಹತ್ಯೆ ಆಗಿರುವ ಸಾಧ್ಯತೆ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
Next Story





