ಮಂಗಳೂರು : ಕರಾವಳಿ ಉತ್ಸವಕ್ಕೆ ಉತ್ತರ ಭಾರತದ ಮಳಿಗೆಗಳ ಆಗಮನ

ಮಂಗಳೂರು, ಫೆ.5: ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಜನವರಿ 23ರಿಂದ ಆರಂಭಗೊಂಡು ಮಾರ್ಚ್ 7ವರೆಗೆ ನಡೆ ಯುವ ದ.ಕ. ಜಿಲ್ಲಾ ಕರಾವಳಿ ಉತ್ಸವದಲ್ಲಿ ಉತ್ತರ ಭಾರತದ ವಿವಿಧ ಸಾಮಗ್ರಿಗಳ ಅಪಾರ ಸಂಗ್ರಹವನ್ನು ಹೊಂದಿರುವ ಹೆಚ್ಚುವರಿ ಮಳಿಗೆಗಳು ಆರಂಭಗೊಂಡು ಜನಾಕರ್ಷಣೆ ಪಡೆಯುತ್ತಿದೆ. ಉತ್ತರ ಭಾರತದ ಕಾಶ್ಮೀರಿ ಆರ್ಟ್ ಹೆಸರಿನ ಬಟ್ಟೆಯ ಮಳಿಗೆಯಲ್ಲಿ ಕಾಶ್ಮೀರಿ ಸಿಲ್ಕ್ ಸಾರೀಸ್, ಚೈನ್ ಸ್ಟಿಚ್ ರಗ್, ಕಾಶ್ಮೀರಿ ಹ್ಯಾಂಡ್‌ವೇರ್ ಸೂಟ್, ಕಾಶ್ಮೀರಿ ಶಾಲ್, ಬ್ಯಾಗ್‌ಗಳ ಸಂಗ್ರಹವಿದೆ. ಲಕ್ನೋ ಚಿಕನ್ ವರ್ಕ್ ಖ್ಯಾತಿಯ ಕಾಟನ್ ಸಾರೀಸ್, ಡ್ರೆಸ್ ಮೆಟೀರಿಯಲ್ಸ್, ಸ್ಟೋನ್ಡ್ ಸಾರೀಸ್, ಖುರ್ತಾಗಳು ಲಭ್ಯ ಇವೆ. ಜೈಪುರ ಉತ್ಪಾದನೆಯ ಗಾರ್ಲಿಕ್ ಪಪ್ಪಡ್, ಜೀರಾ ಪಪ್ಪಡ್, ಬಟರ್ ಚೀಸ್ ಪಪ್ಪಡ್, ರೆಡ್ ಚಿಲ್ಲಿ ಪಪ್ಪಡ್ ಮೊದಲಾದ ವಿವಿಧ ಬಗೆಯ ಸ್ವಾದಿಷ್ಠ ಹಪ್ಪಳಗಳು ಜೈಪುರ ಪಪ್ಪಡ್ ಮಳಿಗೆಯಲ್ಲಿ ಲಭ್ಯ ಇವೆ. ದಿಲ್ಲಿಯ ಮರದ ಆಟಿಕೆಗಳು, ಉಡುಗೊರೆ ಸಾಮಗ್ರಿ ಸಹಿತ ಗೃಹಬಳಕೆಯ ಸಾಮಗ್ರಿ ಗಳು ದೊರೆಯಲಿವೆ. ಹೈದರಾ ಬಾದ್ ಫ್ಯಾನ್ಸಿ ಬ್ಯಾಂಗಲ್ಸ್ ಮಳಿಗೆಯಲ್ಲಿ ಹೈದರಾಬಾದ್ ಖ್ಯಾತಿಯ ವಿವಿಧ ಮಾದರಿ, ವಿನ್ಯಾಸಗಳ ಬಳೆಗಳ ಸಂಗ್ರಹ ಮಳಿಗೆಯಲ್ಲಿವೆ ಎಂದು ಉತ್ಸವ ಸಮಿತಿಯ ಸಂಘಟಕರು ತಿಳಿಸಿದ್ದಾರೆ.
ಮನೋರಂಜನೆಯ ಆಟಗಳ ಸಹಿತ ಆಲಂಕಾರಿಕ ವಸ್ತುಗಳ ಮಳಿಗೆಗಳು, ಮಕ್ಕಳ ಆಟಿಕೆ ಹಾಗೂ ದಿನಬಳಕೆಯ ಉಪಯುಕ್ತ ಸಾಮಗ್ರಿಗಳ ಮಳಿಗೆಗಳು ಲಭ್ಯವಿದೆ. ರಾಜಸ್ಥಾನ್ ಕರ ಕುಶಲ ವಸ್ತುಗಳು ಹಾಗೂ ಬೆಡ್ ಶೀಟ್ಸ್, ಸೋಫಾ ಕವರ್, ಕುಶನ್‌ಕವರ್ ಮೊದಲಾದವು ಗಳು ಮತ್ತು ಉತ್ತರ ಭಾರತ ಉತ್ಪಾ ದನೆಯ ಕೈಮಗ್ಗದ ಉಡುಪುಗಳಾದ ಖಾದಿ ಶರ್ಟ್ಸ್, ಜುಬ್ಬಾ, ಪಠಾನ್ ಕುರ್ತಾ ಮೊದಲಾದ ಉಡುಪುಗಳ ಆಕರ್ಷಕ ಮಳಿಗೆಗಳಿವೆ.








