ಭೂತಾನ್: ನೂತನ ಯುವರಾಜನ ಜನನ
ತಿಂಪು, ಫೆ. 6: ಭೂತಾನ್ ದೊರೆಗೆ ಗಂಡು ಮಗುವಾಗಿದ್ದು, ಚಿನ್ನದ ಸಿಂಹಾಸನಕ್ಕೆ ವಾರೀಸುದಾರನಾಗಿದೆ. ತಮ್ಮ ಪ್ರಥಮ ಮಗುವಿನ ಜನನವನ್ನು ರಾಜ ದಂಪತಿ ಶನಿವಾರ ಘೋಷಿಸಿದ್ದು, ಹಿಮಾಲಯ ದೇಶಾದ್ಯಂತ ಸಡಗರದ ವಾತಾವರಣ ನೆಲೆಸಿದೆ.
ದೊರೆ ಜಿಗ್ಮೆ ಖೇಸರ್ ನಮ್‌ಗ್ಯಲ್ ವಾಂಗ್‌ಚುಕ್ ಮತ್ತು ರಾಣಿ ಜೆಟ್ಸನ್ ಪೇಮರಿಗೆ ಭೂತಾನ್ ರಾಜಧಾನಿ ತಿಂಪುವಿನಲ್ಲಿರುವ ಲಿಂಗ್‌ಕಾನ ಅರಮನೆಯಲ್ಲಿ ನಿನ್ನೆ ನೂತನ ಯುವರಾಜ ಜನಿಸಿದ್ದಾರೆ ಎಂದು ರಾಜ ಮಾಧ್ಯಮ ಕಚೇರಿ ಇಂದು ವರದಿ ಮಾಡಿದೆ.
ಜನರಿಗೆ ಸಡಗರ ಆಚರಿಸಲು ಸಾಧ್ಯವಾಗುವಂತೆ ಸೋಮವಾರ ರಾಷ್ಟ್ರೀಯ ರಜಾ ದಿನವನ್ನಾಗಿ ಘೋಷಿಸಿಲು ಸರಕಾರ ನಿರ್ಧರಿಸಿದೆ.
Next Story





