ವಿಶ್ವಸಂಸ್ಥೆಯ ಮಾನವಹಕ್ಕು ಮುಖ್ಯಸ್ಥರು ಲಂಕಾಗೆ
ಕೊಲಂಬೊ, ಫೆ. 6: ಎಲ್ಟಿಟಿಇ ವಿರುದ್ಧದ ಯುದ್ಧದ ಅವಧಿಯಲ್ಲಿ ತಮಿಳು ನಾಗರಿಕರ ವಿರುದ್ಧ ನಡೆಯಿತೆನ್ನಲಾದ ಯುದ್ಧಾಪರಾಧಗಳ ಬಗ್ಗೆ ತನಿಖೆ ನಡೆಸುವ ವಿಚಾರದಲ್ಲಿ ಶ್ರೀಲಂಕಾ ಸರಕಾರದೊಂದಿಗೆ ಮಾತುಕತೆ ನಡೆಸಲು ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಂಸ್ಥೆಯ ಮುಖ್ಯಸ್ಥ ಝೈದ್ ರಆದ್ ಅಲ್ ಹುಸೈನ್ ಶನಿವಾರ ಕೊಲಂಬೊಗೆ ಆಗಮಿಸಿದ್ದಾರೆ.
ಎಲ್ಟಿಟಿಇ ವಿರುದ್ಧದ ಯುದ್ಧದ ಅಂತಿಮ ಘಟ್ಟದಲ್ಲಿ ನಡೆಯಿತೆನ್ನಲಾದ ಮಾನವಹಕ್ಕುಗಳ ಉಲ್ಲಂಘನೆ ಬಗ್ಗೆ ತನಿಖೆ ನಡೆಸಲು ಆದೇಶ ನೀಡುವ ನಿರ್ಣಯವೊಂದನ್ನು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಅಂಗೀಕರಿಸಿತ್ತು. ದ್ವೀಪ ರಾಷ್ಟ್ರದ ಜನಾಂಗೀಯ ಸಂಘರ್ಷ 2009ರಲ್ಲಿ ಕೊನೆಗೊಂಡಿತ್ತು.
ಈ ಹಿನ್ನೆಲೆಯಲ್ಲಿ, ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಶನರ್ ಅಲ್ ಹುಸೈನ್ ನಾಲ್ಕು ದಿನಗಳ ಭೇಟಿಗಾಗಿ ಶ್ರೀಲಂಕಾಗೆ ಆಗಮಿಸಿದ್ದಾರೆ.
Next Story





