ವ್ಯಂಗ್ಯಚಿತ್ರಕಾರ ಸುಧೀರ್ ತೈಲಾಂಗ್ ಇನ್ನಿಲ್ಲ

ಹೊಸದಿಲ್ಲಿ,ಫೆ.6: ಜನಪ್ರಿಯ ರಾಜಕೀಯ ವ್ಯಂಗ್ಯಚಿತ್ರಕಾರ ಸುಧೀರ್ ತೈಲಾಂಗ್, ಶನಿವಾರ ನಿಧನರಾಗಿದ್ದಾರೆ. ಮೆದುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಗುರ್ಗಾಂವ್‌ನ ಮೇದಾಂತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.
1982ರಲ್ಲಿ ಮುಂಬೈನ ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ ಪತ್ರಿಕೆಯ ಮೂಲಕ ವ್ಯಂಗ್ಯಚಿತ್ರಕಾರರಾಗಿ ತೈಲಾಂಗ್ ವೃತ್ತಿಜೀವನ ಆರಂಭಿಸಿದ್ದರು. 1983ರಲ್ಲಿ ನವಭಾರತ್ ಟೈಮ್ಸ್ ಗೆ ಅವರು ಸೇರ್ಪಡೆಗೊಂಡರು. ಆನಂತರ ಇಂಡಿಯನ್ ಎಕ್ಸ್‌ಪ್ರೆಸ್, ಹಿಂದೂಸ್ತಾನ್‌ಟೈಮ್ಸ್ , ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳಲ್ಲ್ಲಿಯೂ ಸೇವೆ ಸಲ್ಲಿಸಿದ್ದರು. ತನ್ನ ವೃತ್ತಿಬದುಕಿನ ಕೊನೆಯಲ್ಲಿ ಅವರು ಏಶ್ಯನ್ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ಕೆಲಸ ಮಾಡಿದ್ದರು. ವ್ಯಂಗ್ಯಚಿತ್ರ ಕಲೆಗೆ ನೀಡಿದ ಕೊಡುಗೆಗಾಗಿ ಅವರಿಗೆ 2004ರಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
Next Story





