Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಐಪಿಎಲ್ ಹರಾಜು: ಐದು ಹೊಸ ಮುಖಗಳಿಗೆ...

ಐಪಿಎಲ್ ಹರಾಜು: ಐದು ಹೊಸ ಮುಖಗಳಿಗೆ ‘ಬಂಪರ್’

ವಾರ್ತಾಭಾರತಿವಾರ್ತಾಭಾರತಿ6 Feb 2016 11:40 PM IST
share

ಬೆಂಗಳೂರು, ಫೆ.6: ಮುಂಬರುವ 9ನೆಆವೃತ್ತಿಯ ಐಪಿಎಲ್‌ಗೆ ಶನಿವಾರ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಐವರು ಹೊಸ ಆಟಗಾರರಿಗೆ ಜಾಕ್‌ಪಾಟ್ ಹೊಡೆದಿದೆ. ಅವರುಗಳ ಪರಿಚಯ ಇಲ್ಲಿದೆ...

1.ಮುರುಗನ್ ಅಶ್ವಿನ್(ರೈಸಿಂಗ್ ಪುಣೆ, 4.5 ಕೋ.ರೂ.): 25ರ ಹರೆಯದ ಚೆನ್ನೈ ಆಟಗಾರ ಮುರುಗನ್ ಅಶ್ವಿನ್ ಹೊಸ ಐಪಿಎಲ್ ತಂಡ ರೈಸಿಂಗ್ ಪುಣೆ ತಂಡಕ್ಕೆ 4.5 ಕೋ.ರೂ.ಗೆ ಹರಾಜುಗೊಂಡು ಅಚ್ಚರಿ ಮೂಡಿಸಿದರು. ಮೂಲ ಬೆಲೆ 10 ಲಕ್ಷ ರೂ. ಹೊಂದಿದ್ದ ಲೆಗ್-ಬ್ರೇಕ್ ಬೌಲರ್ ಅಶ್ವಿನ್ 3 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ.

2.ನಾಥೂ ಸಿಂಗ್(ಮುಂಬೈ ಇಂಡಿಯನ್ಸ್, ರೂ.3.2 ಕೋ.ರೂ.): ಇತ್ತೀಚೆಗೆ ಸೈಯದ್ ಮುಶ್ತಾಕ್ ಅಲಿ ಟ್ವೆಂಟಿ-20 ಟೂರ್ನಿಯಲ್ಲಿ ಗಮನ ಸೆಳೆದಿದ್ದ ಜೈಪುರದ ಸ್ವಿಂಗ್ ಬೌಲರ್ ನಾಥೂ ಸಿಂಗ್ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಹರಾಜಾದರು. ಟ್ವೆಂಟಿ-20 ಪಂದ್ಯ:11, ವಿಕೆಟ್: 21, ಗರಿಷ್ಠ:4/13.

3.ಕ್ರುನಾಲ್ ಪಾಂಡ್ಯ(ಮುಂಬೈ ಇಂಡಿಯನ್ಸ್, 2 ಕೋ.ರೂ.): ಮೂಲ ಬೆಲೆ 10 ಲಕ್ಷ ರೂ. ಹೊಂದಿದ್ದ 24ರ ಹರೆಯದ ಕ್ರುನಾಲ್ ಪಾಂಡೆ 2 ಕೋ.ರೂ.ಗೆ ಮುಂಬೈ ಪಾಲಾದರು. ಎಡಗೈ ಬೌಲರ್ ಪಾಂಡ್ಯ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ.

ಟ್ವೆಂಟಿ-20 ಪಂದ್ಯ: 15, ರನ್: 167, ಗರಿಷ್ಠ: 51, ಒಟ್ಟು ವಿಕೆಟ್: 16.

4.ರಿಷಭ್ ಪಂತ್(ಡೆಲ್ಲಿ ಡೇರ್ ಡೆವಿಲ್ಸ್, 1.9 ಕೋ.ರೂ.): ಪ್ರಸ್ತುತ ಅಂಡರ್-19 ವಿಶ್ವಕಪ್‌ನಲ್ಲಿ ಆಡುತ್ತಿರುವ ಭಾರತದ ಅಂಡರ್-19 ತಂಡದ ಉಪ ನಾಯಕ ಪಂತ್ ತವರು ತಂಡ ಡೆಲ್ಲಿ ಡೇರ್ ಡೆವಿಲ್ಸ್‌ಗೆ 1.9 ಕೋ.ರೂ.ಗೆ ಹರಾಜಾದರು. ಈ ವರ್ಷ ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಾಲಿಟ್ಟಿರುವ ಪಂತ್ ಇತ್ತೀಚೆಗೆ ನೇಪಾಳದ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಅತ್ಯಂತ ವೇಗವಾಗಿ ಅರ್ಧಶತಕ(50ರನ್, 18 ಎಸೆತ) ಸಿಡಿಸಿ ವಿಶ್ವದ ಗಮನ ಸೆಳೆದಿದ್ದರು.

5.ಅಂಕಿತ್ ರಾಜ್‌ಪೂತ್(ಕೆಕೆಆರ್, 1.5 ಕೋ.ರೂ): ಕಾನ್ಪುರದ 22ರ ಹರೆಯದ ವೇಗದ ಬೌಲರ್ ರಾಜ್‌ಪೂತ್ ಕೆಕೆಆರ್ ತಂಡಕ್ಕೆ 1.5 ಕೋ.ರೂ.ಗೆ ಬಿಕರಿಯಾದರು. ಕಳೆದ 4 ವರ್ಷಗಳಿಂದ ಉತ್ತರ ಪ್ರದೇಶ ತಂಡದಲ್ಲಿ ಆಡುತ್ತಿರುವ ರಾಜ್‌ಪೂತ್ 2012ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಾಲಿಟ್ಟಿದ್ದರು.

ಟ್ವೆಂಟಿ-20 ಪಂದ್ಯ: 19, ವಿಕೆಟ್: 22, ಶ್ರೇಷ್ಠ: 3/15.

ಹರಾಜಾಗದೇ ಉಳಿದ ಪ್ರಮುಖ ಆಟಗಾರರು.

ಮಾರ್ಟಿನ್ ಗಪ್ಟಿಲ್, ಚೇತೇಶ್ವರ ಪೂಜಾರ, ಹಾಶಿಮ್ ಅಮ್ಲ, ಜಾರ್ಜ್ ಬೈಲಿ, ಬದ್ರಿನಾಥ್, ಮಹೇಲ ಜಯವರ್ಧನೆ, ಮೈಕಲ್ ಹಸ್ಸಿ, ಉಸ್ಮಾನ್ ಖ್ವಾಜಾ, ಬ್ರಾಡ್ ಹಡಿನ್, ಮನೋಜ್ ತಿವಾರಿ, ತಿಲಕರತ್ನೆ ದಿಲ್ಶನ್, ಡರೆನ್ ಸಮ್ಮಿ, ಅಜಂತಾ ಮೆಂಡಿಸ್, ರಾಹುಲ್ ಶರ್ಮ, ಪ್ರಗ್ಯಾನ್ ಓಜಾ, ಡೇವಿಡ್ ಹಸ್ಸಿ, ಗ್ರಾಂಟ್ ಎಲಿಯಟ್, ಅಭಿಷೇಕ್ ನಾಯರ್, ಲಹಿರು ತಿರಿಮನ್ನೆ, ಮರ್ಲಾನ್ ಸ್ಯಾಮುಯೆಲ್ಸ್. ಕ್ಯಾಮರೂನ್ ವೈಟ್.

ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಐಪಿಎಲ್‌ನ 8 ಫ್ರಾಂಚೈಸಿಗಳು 94 ಆಟಗಾರರ ಮೇಲೆ 136 ಕೋಟಿ ರೂ. ವ್ಯಯಿಸಿದ್ದಾರೆ. ನೇಗಿ ಭಾರತದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X