ಚಿನ್ನಾಭರಣ ಕಳವು
ಬೆಂಗಳೂರು, ಫೆ.6: ಮನೆಯ ಕಿಟಕಿ ಬಳಿಯಿದ್ದ ಚಿನ್ನಾಭರಣವನ್ನು ದುಷ್ಕರ್ಮಿಗಳು ಕಸಿದು ಪರಾರಿಯಾಗಿರುವ ಘಟನೆ ನಗರದ ಕೆ.ಆರ್.ಪುರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೆ.ಆರ್.ಪುರಂ ಸಮೀಪದ ದುರ್ಗಾನುಗ್ರಹ ನಿವಾಸಿ ರಾಘವೇಂದ್ರ ಜೆನ್ನಿ ಚಿನ್ನಾಭರಣ ಕಳೆದುಕೊಂಡವರು.
ಇವರು ಫೆ.4ರ ರಾತ್ರಿ 28 ಗ್ರಾಂ ಚಿನ್ನದ ಬಳೆ, 12 ಗ್ರಾಂ ಕಿವಿ ಒಲೆ, ಎರಡು ಚಿನ್ನದ ಉಂಗುರವನ್ನು ಒಂದು ಪರ್ಸ್‌ನಲ್ಲಿ ಇಟ್ಟಿದ್ದರು. ಫೆ.5ರ ಬೆಳಗ್ಗೆ ನೋಡಿದಾಗ ಕಿಟಕಿಯಲ್ಲಿದ್ದ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದೆ.
ಕೆ.ಆರ್.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





