ಆಕ್ಟ್ರಸ್ ಪ್ರೀಮಿಯರ್ ಲೀಗ್ ಕ್ರೀಡಾಕೂಟ

ಸುರತ್ಕಲ್, ಫೆ.6: ಕೃಷ್ಣಾಪುರ ಆಕ್ಟ್ರಸ್ ಗೈಸ್ ತಂಡದ ವತಿಯಿಂದ ಕೃಷ್ಣಾಪುರ ಫಿಝಾ ಮೈದಾನದಲ್ಲಿ ಆಯೋಜಿಸಿದ್ದ ಆಕ್ಟ್ರಸ್ ಪ್ರೀಮಿಯರ್ ಲೀಗ್-2016 ಹೊನಲು ಬೆಳಕಿನ ಕ್ರೀಡಾಕೂಟವನ್ನು ಶಾಸಕ ಮೊಯ್ದಿನ್ ಬಾವ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕ್ರೀಡೆ ಸೌಹಾರ್ದ ಹಾಗೂ ಸಹೋದರತೆಯ ಸೇತುವೆಯಾಗಬೇಕು. ಅಂತಹ ಗುಣವಿರುವ ಕ್ರೀಡೆಯನ್ನು ಸದುಪಯೋಗಪಡಿಸಿಕೊಳ್ಳುವ ಮನಸ್ಸು, ಉತ್ಸಾಹ ನಮ್ಮಲ್ಲಿರಬೇಕು ಎಂದರು.
ಇಂಟಕ್‌ನ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಅಧ್ಯಕ್ಷತೆ ವಹಿಸಿದ್ದರು. ಸುರತ್ಕಲ್ ಪೊಲೀಸ್ ನಿರೀಕ್ಷಕ ಚೆಲುವರಾಜ್, ಕಾರ್ಪೊರೇಟರ್ ಅಯಾಝ್, ಅಲ್ ಬದ್ರಿಯಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಶರೀಫ್, ಮಯೂರ್ ಉಳ್ಳಾಲ್, ಅಬೂಬಕರ್ ಕನ್ನಡನಾಡು, ಹಾರಿಸ್, ಖೇತ್ ಸಿಂಗ್, ಪ್ಯಾರಡೈಸ್ ಕ್ಲಬ್ನ ಅಧ್ಯಕ್ಷ ಅಬೂಬಕರ್, ಸಂಸ್ಥೆಯ ಅಧ್ಯಕ್ಷ ಅಲಿ ಮತ್ತಿತರರು ಉಪಸ್ಥಿತರಿದ್ದರು.
Next Story





