ಪುತ್ರಿಯರ ಹತ್ಯೆಗೈದಿದ್ದ ಮಾಜಿ ಯೋಧನಿಗೆ ಜೀವಾವಧಿ ಶಿಕ್ಷೆ
ಮಥುರಾ,ಫೆ.6: 2013ರಲ್ಲಿ ಇಲ್ಲಿಯ ನಾಗ್ಲಾ ದೀಪಾ ಗ್ರಾಮದಲ್ಲಿ ತನ್ನ ಮೂವರು ಪುತ್ರಿಯರನ್ನು ಕೊಲೆ ಮಾಡಿದ್ದ ಮತ್ತು ಪತ್ನಿಯ ಕೊಲೆಗೆ ಯತ್ನಿಸಿದ್ದ ನಿವೃತ್ತ ಯೋಧನಿಗೆ ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 30,000ರೂ.ಗಳ ದಂಡವನ್ನು ವಿಧಿಸಿದೆ.
ಮನೆಯ ಎದುರು ಆಟವಾಡಿಕೊಂಡಿದ್ದ ಏಳು,ಐದು ಮತ್ತು ಮೂರು ವರ್ಷ ಪ್ರಾಯದ ಪುತ್ರಿಯರನ್ನು ಗುಂಡಿಟ್ಟು ಕೊಂದಿದ್ದ ಅಪರಾಧಿಯು ಮಕ್ಕಳ ರಕ್ಷಣೆಗೆ ಧಾವಿಸಿದ್ದ ಪತ್ನಿಯ ಮೇಲೂ ಗುಂಡು ಹಾರಿಸಿದ್ದ.
Next Story





