ಫೆ.10ರಂದು ಉರ್ದು ದಿನಾಚರಣೆ
ಬೆಂಗಳೂರು, ಫೆ.6: ಮೆಹಫಿಲ್-ಎ-ನಿಸಾ ಸಂಸ್ಥೆ ವತಿಯಿಂದ ಉರ್ದು ದಿನಾಚರಣೆ (ಜಶ್ನೆ ಉರ್ದು) ಕಾರ್ಯಕ್ರಮವನ್ನು ಫೆ.10ರಂದು ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಶಾಯಿಸ್ತ ಯೂಸುಫ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ಆರಂಭಕ್ಕೂ ಮುನ್ನ ಸ್ವಾತಂತ್ರ ಉದ್ಯಾನವನದಿಂದ ಪುರಭವನದವರೆಗೂ ಉರ್ದು ಭಾಷಾಭಿಮಾನಿಗಳು ಮತ್ತು ವಿದ್ಯಾರ್ಥಿಗಳಿಂದ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಈ ಮೆರವಣಿಗೆಗೆ ಹೆಚ್ಚುವರಿ ಸಂಚಾರಿ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಚಾಲನೆ ನೀಡಲಿದ್ದಾರೆ ಎಂದರು.
ಉರ್ದು ಸಾಹಿತ್ಯದಲ್ಲಿ ಸಾಧನೆಗೈಯ್ದಿರುವ ಸಾಹಿತಿಗಳಿಗೆ ಮಹ್ಮೂದ್ ಅಯಾಝ್ ಮತ್ತು ಮುಮ್ತಾಝ್ ಶಿರೀನ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ವಾರ್ತಾ ಸಚಿವ ಆರ್.ರೋಷನ್ ಬೇಗ್, ಪೌರಾಡಳಿತ, ಅಲ್ಪಸಂಖ್ಯಾತ ಸಚಿವ ಡಾ.ಖಮರುಲ್ ಇಸ್ಲಾಮ್, ಕರ್ನಾಟಕ ಉರ್ದು ಅಕಾಡಮಿ ಅಧ್ಯಕ್ಷೆ ಡಾ.ಫೌಝಿಯಾ ಚೌಧರಿ, ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷೆ ಬಲ್ಕೀಶ್ ಬಾನು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.





