ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್‌ನಿಂದ ನೆರವು

ಉಳ್ಳಾಲ, ಫೆ.6: ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ವತಿಯಿಂದ ಶೈಖ್ ಅಬ್ದುಲ್ ಖಾದರ್ ಜೀಲಾನಿ ದಿನಾಚರಣೆ ಪ್ರಯುಕ್ತ ಚೆಂಬುಗುಡ್ಡೆ ಸಮೀಪದ ದಾರಂದಬಾಗಿಲು ಬಳಿಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕೆಸಿಎಫ್ ದುಬೈ ರೆನ್ ಅಧ್ಯಕ್ಷ ಮೆಹ್‌ಬೂಬ್ ಸಖಾಫಿ ಕಿನ್ಯ ಸಂಘಟನೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ಉಳ್ಳಾಲ ವಲಯ ಉಪಾಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾರಂದಬಾಗಿಲು ಮಸೀದಿಯ ಇಮಾಂ ಅಬೂಬಕರ್ ಮದನಿ ದುಆ ನೆರವೇರಿಸಿದರು. ಚೆಂಬುಗುಡ್ಡೆ ಜುಮಾ ಮಸೀದಿ ಖತೀಬ್ ಹಂಝ ಮದನಿ, ಜುನೈದ್ ಸಅದಿ, ಉಸ್ಮಾನ್ ಕಲ್ಲಾಪು, ನೌಶಾದ್ ತಾರಿಪಡ್ಪು, ಹನೀಫ್ ದಾರಂದಬಾಗಿಲು ಮಸೀದಿಯ ಸದಸ್ಯ ರಫೀಕ್, ಎಸ್ಸೆಸ್ಸೆಫ್ ಚೆಂಬುಗುಡ್ಡೆ ಶಾಖೆಯ ಅಧ್ಯಕ್ಷ ಮನ್ಸೂರ್, ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಕೋಶಾಧಿಕಾರಿ ಶಮೀರ್ ಸೇವಂತಿಗುಡ್ಡೆ, ಕಾರ್ಯದರ್ಶಿ ಬಾತಿಷ್ ಮಂಚಿಲ, ಕನ್ವೀನರ್ ಅನ್ಸಾರ್ ಮಾಲಿಕ್, ಸದಸ್ಯರಾದ ಜುನೈದ್ ಮದನಿನಗರ, ಅಬ್ದುಲ್ಲ ಸೇವಂತಿಗುಡ್ಡೆ, ತೌಸೀಫ್ ಸೇವಂತಿಗುಡ್ಡೆ, ರಿಯಾಝ್ ಚೆಂಬುಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ರಿಲೀಫ್ ಸರ್ವಿಸ್‌ನ ಅಧ್ಯಕ್ಷ ಅಲ್ತಾಫ್ ಕುಂಪಲ ಸ್ವಾಗತಿಸಿದರು.





