ಟವರ್ ಜನರೇಟರ್‌ನ ಬ್ಯಾಟರಿ ಕಳವು
ಉಡುಪಿ: ಕುಂಜಿಬೆಟ್ಟು ಎಂಜಿಎಂ ಕಾಲೇಜು ಸಮೀಪದ ತ್ರಿವಿಕ್ರಮ ಹೊಟೇಲ್ ಕಟ್ಟಡದ ಟೆರೆಸ್ ಮೇಲಿರುವ ಇಂಡಸ್ ಟವರ್‌ನ ಜನರೇಟರ್‌ಗೆ ಅಳವಡಿಸಿದ ಬ್ಯಾಟರಿ ಕಳವಾಗಿರುವ ಬಗ್ಗೆ ವರದಿಯಾಗಿದೆ.
ಕಟ್ಟಡದ ಹಾಸ್ಟೆಲ್‌ನ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಫೆ.2ರಂದು ಮಧ್ಯರಾತ್ರಿ ವೇಳೆ ಓರ್ವ ವ್ಯಕ್ತಿ ಬ್ಯಾಟರಿ ಕಳವು ಮಾಡಿ ಸಾಗಿಸುತ್ತಿರುವುದು ಕಂಡುಬಂದಿದೆ. ಕಳವಾದ ಬ್ಯಾಟರಿಯ ಮೌಲ್ಯ 15 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





