ಅಕ್ರಮ ಮರಳುಗಾರಿಕೆ: 10 ದೋಣಿಗಳು ವಶ
ಕಾಸರಗೋಡು: ಅಕ್ರಮ ಮರಳುಗಾರಿಕೆ ಅಡ್ಡೆಗಳಿಗೆ ಕರಾವಳಿ ಪೊಲೀಸರು ದಾಳಿ ನಡೆಸಿ ಹತ್ತು ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ.
ನೆಲ್ಲಿಕುಂಜೆ, ಪಳ್ಳಂ, ತುರುತ್ತಿ, ಬಾಂಗೋಡ್ ತೀರಗಳಿಗೆ ಜಿಲ್ಲಾ ಪೊಲೀಸ್ ಮುಖ್ಯಸ್ಥ ಡಾ.ಎ. ಶ್ರೀನಿವಾಸ್‌ರ ನಿರ್ದೇಶನದಂತೆ ದಾಳಿ ನಡೆಸಲಾಗಿತ್ತು. ದಾಖಲೆಗಳಿಲ್ಲದೆ ಮರಳುಗಾರಿಕೆ ನಡೆಸುತ್ತಿದ್ದ ಹತ್ತು ದೋಣಿಗಳನ್ನು ವಶಪಡಿಸಿಕೊಂಡು ಕ್ರಮ ಜರಗಿಸಲಾಯಿತು. ರಾತ್ರಿ ಭಾರೀ ಪ್ರಮಾಣದಲ್ಲಿ ಮರಳುಗಾರಿಕೆ ನಡೆಯುತ್ತಿತ್ತು. ಮರಳುಗಾರಿಕೆ ಬಳಿಕ ದೋಣಿಗಳನ್ನು ಕಾಂಡ್ಲಾ ಪೊದೆಗಳಡಿಯಲ್ಲಿ ಬಚ್ಚಿಡಲಾಗಿತ್ತು.
Next Story





