ಕಾಟಿಪಳ್ಳ: ನೂರುಲ್ ಹುದಾ ಶಿಕ್ಷಣ ಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

ಕಾಟಿಪಳ್ಳ, ಫೆ.7: ಇಲ್ಲಿನ ನೂರುಲ್ ಹುದಾ ಶಿಕ್ಷಣ ಸಂಸ್ಥೆಯ ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಶನಿವಾರ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿತ್ತು.
ಒಟ್ಟು ಐದು ಶಾಲೆಗಳ ಸುಮಾರು ಇನ್ನೂರು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಾಗಾರವನ್ನು ಪ್ಲಾಮಾ ಡೆವೆಲಪರ್ಸ್‌ನ ಆಡಳಿತ ನಿರ್ದೇಶಕ ಪಿ.ಎಂ.ಎ.ರಝಾಕ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಠಿಣ ಪರಿಶ್ರಮ ಹಾಗೂ ಏಕಾಗ್ರತೆಯಿಂದ ಕಲಿತು ಜೀವನದಲ್ಲಿ ಯಶ ಗಳಿಸಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷ ಬದ್ರುದ್ದೀನ್ ಪಣಂಬೂರು ಅಧ್ಯಕ್ಷತೆ ವಹಿಸಿದ್ದರು.
ಮೂಡುಬಿದಿರೆಯ ಆಳ್ವಾಸ್ ಪ್ರೌಢಶಾಲೆಯ ಪ್ರಾಂಶುಪಾಲರಾದ ವಸಂತಕುಮಾರ್ ನಿಟ್ಟೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾಹಿತಿ ನೀಡಿದರು.
ಜೋಕಟ್ಟೆಯ ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎ.ರಶೀದ್, ಸಂಚಾಲಕ ಮೂಸಬ್ಬ ಬ್ಯಾರಿ, ಸೂರಿಂಜೆಯ ಹಿದಾಯತ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಕೆ.ಎ.ಖಾದರ್, ನೂರುಲ್ ಹುದಾ ಸಂಸ್ಥೆಯ ಸಂಚಾಲಕ ಪಿ.ಎ.ಇಲ್ಯಾಸ್, ಕಾರ್ಯದರ್ಶಿ ಜಿ.ಮುಹಮ್ಮದ್, ಕೋಶಾಧಿಕಾರಿ ಪಿಎಎಂ ಶರೀಫ್, ಹಿರಿಯ ಸದಸ್ಯ ಪಿ.ಅಬ್ದುಲ್ ಹಮೀದ್, ಪಿಟಿಎ ಅಧ್ಯಕ್ಷ ಸುಲ್ಯೆಮಾನ್, ಮುಖ್ಯ ಶಿಕ್ಷಕಿಯರಾದ ಸುನೀತಾ ಪೈ, ಶಕುಂತಳಾ ಮುಂತಾದವರು ಹಾಜರಿದ್ದರು.
ಕಾರ್ಯಾಗಾರದಲ್ಲಿ ಪ್ರಶ್ನೋತ್ತರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.











