ಕಾಸರಗೋಡು:ಬಾಲಕಿಗೆ ಕಿರುಕುಳ: ಮದ್ರಸಾ ಅಧ್ಯಾಪಕ ಪೊಲೀಸ್ ಕಸ್ಟಡಿಗೆ

ಕಾಸರಗೋಡು: ಏಳರ ಹರೆಯದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯಾಧ ಮದ್ರಸಾ ಅಧ್ಯಾಪಕನನ್ನು ಪೊಲೀಸರು ಕಸ್ಟಡಿಗೆ ತೆಗೆದು ವಿಚಾರಣೆ ನಡೆಸಿದರು. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಯಿತು.
ಮಂಜೇಶ್ವರ ಆನೆಕಲ್ಲು ವಿಜಯಡ್ಕದ ಅಬ್ದುಲ್ ಮಜೀದ್ ಲತೀಫ್(37) ಎಂಬಾತನನ್ನು ಕಾಸರಗೋಡು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಂತೆ ಆರೋಪಿ ಲತೀಫ್‌ನನ್ನು ಮೂರು ದಿನಗಳ ಹಿಂದೆ ಪೊಲೀಸರು ಬಂಧಿಸಿದ್ದರು. ವಿದ್ಯಾರ್ಥಿನಿ ಶಾಲೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಿರುಕುಳ ನೀಡಿರುವುದಾಗಿ ಹೇಳಲಾಗಿದೆ. ಎಂದಿನಂತೆ ಶಾಲೆಗೆ ತಲುಪಿದ ಬಾಲಕಿ ಅಳುತ್ತಿರುವುದು ಗಮನಕ್ಕೆ ಬಂದ ಅಧ್ಯಾಪಿಕೆಯರು ವಿಚಾರಿಸಿದಾಗ ಘಟನೆ ಬಹಿರಂಗಗೊಂಡಿದೆ. ಬಳಿಕ ಚೈಲ್ಡ್‌ಲೈನ್‌ಗೆ ಮಾಹಿತಿ ತಿಳಿಸಿ ಮದ್ರಸಾ ಅಧ್ಯಾಪಕನ ವಿರುದ್ಧ ಕೇಸು ದಾಖಲಿಸಲಾಗಿತ್ತು. ಪೊಲೀಸರು ಆರೋಪಿಯನ್ನು ಕಸ್ಟಡಿಗೆ ತೆಗೆದು ಕಿರುಕುಳ ನೀಡಿರುವುದಾಗಿ ಹೇಳಲಾದ ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕಿದರು.
ವೈದ್ಯಕೀಯ ತಪಾಸಣೆ ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದ ಆರೋಪಿಗೆ ಮತ್ತೆ ನ್ಯಾಯಾಂಗ ಬಂಧನ ನೀಡಲಾಗಿದೆ.





