ಮಂಜೇಶ್ವರ : ಮಚ್ಚಂಪಾಡಿ ಮಖಾಂ ಉರೂಸ್ ಫೆಬ್ರುವರಿ 24 ರಿಂದ ಮಾರ್ಚ್ 6 ರ ವರೆಗೆ
ಮಂಜೇಶ್ವರ : ಇತಿಹಾಸ ಪ್ರಸಿದ್ದ ಮಚ್ಚಂಪಾಡಿ ಅಸ್ಸಯ್ಯಿದ್ ಬಪ್ಪನ್ ಕುಟ್ಟಿ ವಲಿಯುಲ್ಲಾಹಿ(ಖ.ಅ) ಮಖಾಂ ಉರೂಸ್ ಮಾರ್ಚ್ 6 ರಂದು ಭಾನುವಾರ ಹಗಲು ನಡೆಯಲಿದೆ. ಉರೂಸ್ ಭಾಗವಾಗಿ ಧಾರ್ಮಿಕ ಪ್ರವಚನ ಫೆಬ್ರುವರಿ 24 ರಿಂದು ಮಾರ್ಚ್ 5 ರ ತನಕ ನಡೆಯಲಿದೆ. ಫೆಬ್ರುವರಿ 24 ರಂದು ಬುಧವಾರ ಬೆಳಿಗ್ಗೆ 10 ಘಂಟೆಗೆ ಸಯ್ಯಿದ್ ಅತಾವುಲ್ಲಾ ತಂಘಳ್ ಉದ್ಯಾವರ ದ್ವಜಾರೋಹಣ ಗೈಯ್ಯವರು. ಸಂಜೆ 7 ಘಂಟೆಗೆ ನಡೆಯುವ ಝಿಯಾರತ್ ಗೆ ಸಯ್ಯಿದ್ ಎಸ್.ಎಸ್. ಮುತ್ತುಕ್ಕೋಯ ತಂಘಳ್ ಲಕ್ಷ್ವ ದೀಪ್ ನೇತೃತ್ವದ ನೀಡುವರು. 8 ಘಂಟೆಗೆ ನಡೆಯುವ ಉದ್ಗಾಟನಾ ಸಮಾರಂಭದಲ್ಲಿ ಆಲಿಕುಞ್ಞೆ ಉಸ್ತಾದ್ ಶಿರಿಯ ದುವಾಗೆ ನೇತೃತ್ವ ನೀಡುವರು. ಸ್ಥಳಿಯ ಮುದರ್ರಿಸ್ ಬಶೀರ್ ಬಾಖವಿ ಸ್ವಾಗತ ಭಾಷಣ ಮಾಡುವರು. ಮಾಣಿ ಅಬ್ದುಲ್ ಹಮೀದ್ ಮಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ ಕಡಲುಚಿಡಿ ಉದ್ಗಾಟಿಸುವರು.
ಉಡುಪಿ ಖಾಝಿ ಇಬ್ರಾಹಿಮ ಮುಸ್ಲಿಯಾರ್ ಮುಖ್ಯ ಭಾಷಣ ಮಾಡುವರು. 25 ರಂದು ಗುರುವಾರ ರಾತ್ರಿ ಸಯ್ಯಿದ್ ಅಲೀ ತಂಘಳ್ ದುವಾಗೆ ನೇತೃತ್ವ ನೀಡುವರು. ಖಲೀಲ್ ಹುದವಿ ಮೊಗ್ರಾಲ್ ಭಾಷಣ ಮಾಡುವರು. 26 ರಂದು ಶುಕ್ರವಾರ ರಫೀಕ್ ಸಅದಿ ದೇಲಂಪಾಡಿ ಭಾಷಣ ಮಾಡುವರು. 27 ರಂದು ಶನಿವಾರ ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡು ಭಾಷಣ ಮಾಡುವರು. 28 ರಂದು ಅಬ್ದುಲ್ ಅಝೀರ್ ಅಶ್ರಫಿ ಪಾಣತ್ತೂರು ಭಾಷಣ ಮಾಡುವರು. 29 ರಂದು ಮಜೀದ್ ಬಾಖವಿ ಭಾಷಣ ಮಾಡುವರು. ಮಾರ್ಚ್ 1 ರಂದು ಮಂಗಳವಾರ ಅಸರ್ ನಮಾಜಿನ ಬಳಿಕ ನಡೆಯುವ ಸ್ವಲಾತ್ ವಾರ್ಷಿಕ ಕ್ಕೆ ಸಯ್ಯಿದ್ ಎನ್.ಪಿ.ಎಂ ಝೈನುಲ್ ಆಬಿದೀನ್ ತಂಘಳ್ ನೇತೃತ್ವ ನೀಡುವರು. ಇಸ್ಮಾಯಿಲ್ ಮದನಿ ಕೊಡಿಪ್ಪಾಡಿ ಉಪಸ್ತಿತರಿರುವರು. ರಾತ್ರಿ 8 ಘಂಟೆಗೆ ಬಿ.ಕೆ ಅಬ್ದುಲ್ ಖಾದರ್ ಮುಸ್ಲಿಯಾರ್ ಭಾಷಣ ಮಾಡುವರು. ಮಾರ್ಚ್ 2 ರಂದು ಹಂಝ ಮಿಸ್ಬಾಹಿ ಓಟ್ಟಪ್ಪದವು ಭಾಷಣ ಮಾಡುವರು. ಮಾರ್ಚ್ 3 ರಂದು ಸಯ್ಯಿದ್ ಜಲಾಲುದ್ದೀನ್ ತಂಘಳ್ ಮಳ್‌ಹರ್ ದುವಾಗೆ ನೇತೃತ್ವ ನೀಡುವರು.
ಅಬ್ದುಲ್ ಜಬ್ಬಾರ್ ಸಖಾಫಿ ಭಾಷಣ ಮಾಡುವರು. ಮಾರ್ಚ್ 4 ರಂದು ಕೀಚ್ಚೇರಿ ಅಬ್ದುಲ್ ಗಫೂರ್ ಮೌಲವಿ ಭಾಷಣ ಮಾಡುವರು. ಮಾರ್ಚ್ 5 ಶನಿವಾರ ರಂದು ಸಾಯಂಕಾಲ 5 ಘಂಟೆಗೆ ಪ್ರತಿನಿಧಿ ಸಮ್ಮೇಳನ ನಡೆಯಲಿದೆ. ರಾತ್ರಿ 8 ಘಂಟೆಗೆ ನಡೆಯುವ ಸಮಾರೋಪ ಸಮ್ಮೇಳನವನ್ನು ಸಯ್ಯಿದ್ ಅಬ್ಬಾಸಲೀ ಶಿಹಾಬ್ ತಂಘಳ್ ಪಾಣಕ್ಕಾಡ್ ಉದ್ಗಾಟಿಸುವರು. ಸಯ್ಯಿದ್ ಮುಹಮ್ಮದ್ ಜಿಫ್ರೀ ಮುತ್ತುಕ್ಕೋಯ ತಂಘಳ್ ಅಧ್ಯಕ್ಷತೆ ವಹಿಸುವರು. ಪ್ರೊಫೆಸರ್ ಕೆ.ಆಲಿಕುಟ್ಟಿ ಮುಸ್ಲಿಯಾರ್ , ಖಾಝಿ ಕೋಝಿಕ್ಕೋಡ್ ದುವಾಗೆ ನೇತೃತ್ವ ನೀಡುವರು. ಸಮಸ್ತ ಪ್ರಧಾನ ಕಾರ್ಯದರ್ಶಿ ಚೆರುಶ್ಶೇರಿ ಝೈನುದ್ದೀನ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡುವರು. ತ್ವಾಖಾ ಅಹ್ಮದ್ ಮುಸ್ಲಿಯಾರ್ , ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮುಖ್ಯ ಅತಿಥಿಯಾಗಿ ಭಾಗವಹಿಸವರು. ಮಾರ್ಚ್ 6 ರಂದು ಭಾನುವಾರ 11 ಘಂಟೆಗೆ ಮೌಲೀದ್ ಪಾರಾಯನ ಹಾಗೂ ಬಳಿಕ ಅನ್ನದಾನ ನಡೆಯಲಿದೆ.







