ಮುಲ್ಕಿ : ಜೀವನಮೌಲ್ಯ ಶಿಕ್ಷಣ ಶಿಭಿರ

ಮುಲ್ಕಿ, ಫೆ.7: ಸ್ವಾವಲಂಭಿ ಚಿಂತನೆ ಜೀವನ ಕ್ರಮದಲ್ಲಿ ಅಳವಡಿಸಿಕೊಂಡಲ್ಲಿ ಜೀವನ ಸಂತಸ ಹಾಗೂ ಶಾಂತಿಯಿಂದ ಕೂಡಿರುತ್ತದೆ ಎಂದು ಮುಲ್ಕಿ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಎನ್.ಪಿ.ಶೆಟ್ಟಿ ಹೇಳಿದರು.
ಮುಲ್ಕಿ ವಿಜಯಾ ಕಾಲೇಜಿನಲ್ಲಿ ಭಾನುವಾರ ನಡೆದ ಜೀವನಮೌಲ್ಯ ಶಿಕ್ಷಣ ಶಿಭಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿರಿಯ ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ರವರು ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಎಚ್.ಜಿ.ನಾಗರಾಜ ನಾಯಕ್, ಸಂಯೋಜಕರಾದ ಪ್ರೊ. ವಿಜಯಾ ಕುಮಾರಿ ಉಪಸ್ಥಿತರಿದ್ದರು. ಪ್ರೊ.ಕೆ.ಆರ್ ಶಂಕರ್ ಸ್ವಾಗತಿಸಿದರು, ಕಿರಣ್ ನಿರೂಪಿಸಿದರು. ಪ್ರೊ. ಎಚ್.ಜಿ. ನಾಗರಾಜ ನಾಯಕ್ ವಂದಿಸಿದರು.
Next Story





