ಕುತ್ತಾರು ತೇವುಲ ಪರಿಸರದಲ್ಲಿ ಡಿವೈಎಫ್‌ಐ ನಿರ್ಮಿಸಿರುವ ಎರಡು ರಸ್ತೆಗಳ ಉಧ್ಘಾಟನೆ
ಮಂಗಳೂರು,ಫೆ.7:ಡಿವೈಎಫ್‌ಐ ಬಟ್ಟೆದಡಿ ಘಟಕದ ನೇತೃತ್ವದಲ್ಲಿ ಕುತ್ತಾರು ತೇವುಲ ಪರಿಸರದಲ್ಲಿ ಕಾಂ. ಈಶ್ವರ್ ಸಾಲಿಯಾನ್ ರಸ್ತೆ ಮತ್ತು ಭಗತ್ ಸಿಂಗ್ ರಸ್ತೆ ಯ ಉದ್ಗಾಟನೆ ಕಾರ್ಯಕ್ರಮ ಇಂದು ತೆವುಲದಲ್ಲಿ ನಡೆಯಿತು.
ಭಗತ್ ಸಿಂಗ್ ರಸ್ತೆಯನ್ನು ರಸ್ತೆಗೆ ಸ್ಥಳದಾನ ಮಾಡಿದ ದಾಮೋದರ ಸಾಲಿಯಾನ್ ಮತ್ತು ದಾಸಪ್ಪ ಸಾಲಿಯಾನ್ ಉದ್ಘಾಟಿಸಿದರು. ಕಾಮ್ರೇಡ್ ಈಶ್ವರ್ ಸಾಲಿಯಾನ್ ರಸ್ತೆಯನ್ನು ಈಶ್ವರ್ ಸಾಲಿಯಾನ್ ಪತ್ನಿ ಮೀನಾಕ್ಷಿ ,ಸ್ಥಳದಾನ ಮಾಡಿದ ಹರಿಣಾಕ್ಷಿ, ಲೀಲಾವತಿ ಉದ್ಘಾಟಿಸಿದರು.
ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಮಾತನಾಡಿ ಭೂಮಿಗಾಗಿ ಕೊಲೆಗಳು ನಡೆಯುವ ಈಗಿನ ಸಂಧರ್ಭದಲ್ಲಿ ಊರಿನ ಉಪಯೋಗಕ್ಕೆ ರಸ್ತೆ ನಿರ್ಮಾಣ ಮಾಡಲು ಸ್ಥಳಾವಕಾಶ ನೀಡಿರುವುದು ಅವರ ಹೃದಯವಂತಿಕೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಸಿ.ಪಿ.ಐ.ಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಆಗಮಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಡಿವೈಎಫ್‌ಐ ಬಟ್ಟೆದಡಿ ಘಟಕದ ಅಧ್ಯಕ್ಷ ಭರತ್ ರಾಜ್ ವಹಿಸಿದ್ದರು. ಸಮಾರಂಭದಲ್ಲಿ ಮಾಜಿ ಉಳ್ಳಾಲ ವಲಯ ಅಧ್ಯಕ್ಷರಾದ ಮಹಾಬಲ .ಟಿ.ದೆಪ್ಪೆಲಿಮಾರ್ ಪ್ರಸ್ತಾವನೆಗೈದರು. ಸಮಾರಂಭದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಹರೀಶ್ ಮಾಸ್ಟರ್ ,ಕಾರ್ಮಿಕ ಮುಖಂಡರಾದ ವಿಶ್ವನಾಥ್ ತೇವುಲ,ಪಂಚಾಯತ್ ಸದಸ್ಯರಾದ ಶಶಿಕಲಾ,ಚಂದ್ರಾವತಿ, ಸ್ಥಳೀಯರಾದ ಶ್ರೀಧರ್ ಭಟ್, ಡಿವೈಎಫ್‌ಐ ಉಳ್ಳಾಲ ವಲಯ ಕಾರ್ಯದರ್ಶಿ ಜೀವನ್ ರಾಜ್ , ಸ್ಥಳೀಯ ನಾಯಕರಾದ ಚಂದ್ರಹಾಸ್.ಡಿ ,ಸುರೇಶ್ ತಲೆನೀರು,ನಿತಿನ್ ಕುತ್ತಾರ್,ಸಂಕೇತ್ ಕಂಪ, ಶ್ರಾವಣ್ ತೇವುಲ ಉಪಸ್ಥಿತರಿದ್ದರು ದಿವ್ಯರಾಜ್ ತೇವುಲ ಕಾರ್ಯಕ್ರಮ ನಿರ್ವಹಿಸಿದರು,ಸುನೀಲ್ ತೇವುಲ ವಂದಿಸಿದರು.





