ಮಂಗಳೂರು : ಹಲ್ಲೆ; ಕೊಲೆ ಬೆದರಿಕೆ: ಆರು ಮಂದಿ ಬಂಧನ
ಮಂಗಳೂರು, ಫೆ. 7: ವ್ಯಕ್ತಿಯೋರ್ವನ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿದ ಆರೋಪದಲ್ಲಿ ಪಾಂಡೇಶ್ವರ ಠಾಣಾ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.ಬಂಧಿತರನ್ನು ಅತ್ತಾವರ ಕಾಪ್ರಿಗುಡ್ಡದ ನಿವಾಸಿ ಅಬ್ದುಲ್ ಹಮೀದ್ (20), ಅತ್ತಾವರದ ಎಂ.ಇಸ್ಮಾಯೀಲ್ (20), ಮುಳಿಹಿತ್ಲು ನಿವಾಸಿ ಉವೇಸ್ ಅಹ್ಮದ್ (20), ಅತ್ತಾವರದ ಶಾಬಾನ್ ಮುಶೀಬ್ (23), ಕುದ್ರೋಳಿಯ ಬೊಕ್ಕಪಟ್ನ ನೌಫಾಲ್ (20), ಕಾಞಿಂಗಾಡ್‌ನ ಸುಹೇಲ್ (40) ಎಂದು ಗುರುತಿಸಲಾಗಿದೆ.ಹಳೆ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ಫೆಬ್ರವರಿ 5ರಂದು ನಗರದ ಫಿಝಾ ಮಾಲ್ ಬಳಿ ಕಾಞಿಂಗಾಡ್‌ನ ನಿವಾಸಿ ಮುಹಮ್ಮದ್ ಫಾಝಿಲ್ (24) ಎಂಬಾತನ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಒಡ್ಡಿತ್ತು. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ಫೆ.20ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
Next Story





