ಭಾರತ- ಯುಎಇ ವ್ಯಾಪಾರ ಉತ್ತುಂಗಕ್ಕೆ
ಹೊಸದಿಲ್ಲಿ, ಫೆ.7: ಭಾರತ ಹಾಗೂ ಯುಎಇ ನಡುವಿನ ವ್ಯಾಪಾರ ಹಾಗೂ ಹೂಡಿಕೆ ಸಂಬಂಧ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದು, ಮುಂದಿನ ದಿನಗಳಲ್ಲಿ ಇದು ಭವಿಷ್ಯದಲ್ಲಿ ಭಾರತ ಅಚ್ಚರಿದಾಯಕ ಪ್ರಗತಿ ಯಶೋಗಾಥೆಗೆ ನಾಂದಿ ಹಾಡಲಿದ್ದು, ಇದು ಎಲ್ಲ ನೆರೆಯ ರಾಷ್ಟ್ರಗಳ ಆಸಕ್ತಿಗೆ ಕಾರಣವಾಗಿದೆ ಎಂದು ಖಲೀಜ್ ಟೈಮ್ಸ್ ಜತೆ ಮಾತನಾಡಿದ ಅವರು ವಿವರಿಸಿದ್ದಾರೆ. ಯುಎಇ ನಿಯೋಗ ಫೆಬ್ರವರಿ 10ರಿಂದ ಭಾರತ ಪ್ರವಾಸ ಕೈಗೊಳ್ಳಲಿದೆ.
ಐಎಂಎಪ್ ಅಂದಾಜಿನ ಪ್ರಕಾರ ಮುಂದಿನ ಎರಡು ಹಣಕಾಸು ವರ್ಷಗಳಲ್ಲಿ ಭಾರತದ ಪ್ರಗತಿ ದರ ಕ್ರಮವಾಗಿ ಶೇ. 7.3 ಮತ್ತು ಶೇ. 7.5 ಆಗಲಿದೆ. ಚೀನಾ ಈ ವರ್ಷಗಳಲ್ಲಿ ಕ್ರಮವಾಗಿ ಶೇ. 6.3 ಹಾಗೂ 6ರ ಪ್ರಗತಿಗೆ ಸೀಮಿತವಾಗಿ ಹೊಸ ಎತ್ತರಕ್ಕೆ ತಲುಪುವ ನಿರೀಕ್ಷೆ ಇದೆ. ಮುಂದಿನ ವಾರ ಭಾರತಕ್ಕೆ ಯುಎಇ ಸರಕಾರದ ಉನ್ನತ ಮಟ್ಟದ ನಿಯೋಗ ಆಗಮಿಸಲಿದ್ದು, ಈ ವೇಳೆ ಹಲವು ಒಪ್ಪಂದಗಳಿಗೆ ಸಹಿ ಮಾಡುವ ನಿರೀಕ್ಷೆ ಇದೆ.
100 ಶತಕೋಟಿ ಡಾಲರ್ ವಹಿವಾಟು
ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಈ ವರ್ಷ ಕುದುರುವ ನಿರೀಕ್ಷೆ ಇದ್ದು, ಮುಂದಿನ ವರ್ಷಗಳಲ್ಲಿ ಇದು ಹೊಸ ಎತ್ತರಕ್ಕೆ ಬೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಭಾರತ ಜಾಗತಿಕ ಮಟ್ಟದಲ್ಲಿ ಕ್ಷಿಪ್ರ ಅಭಿವೃದ್ಧಿ ಸಾಧಿಸುತ್ತಿರುವ ದೇಶವಾಗಿದ್ದು, ಇದು ಯುಎಇ ಸೇರಿದಂತೆ ನೆರೆರಾಷ್ಟ್ರಗಳ ಮೇಲೆ ಭಾರೀ ಪ್ರಭಾವ ಬೀರಿದೆ.
-ಕುಲ್ವಂತ್ ಸಿಂಗ್, ಭಾರತದ ವ್ಯಾಪಾರ ಹಾಗೂ ವೃತ್ತಿಪರ ಮಂಡಳಿ ಅಧ್ಯಕ್ಷ







