Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಚುಟುಕು ಸುದ್ದಿಗಳು

ಚುಟುಕು ಸುದ್ದಿಗಳು

ವಾರ್ತಾಭಾರತಿವಾರ್ತಾಭಾರತಿ7 Feb 2016 11:41 PM IST
share


ಇಂದಿನಿಂದ ಶಿವರಾಮ ಕಾರಂತರ ಬಾಲವನ ಪುನಶ್ಚೇತನ
ಪುತ್ತೂರು, ಫೆ.7: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಕೆ. ಶಿವರಾಮ ಕಾರಂತರ ಕರ್ಮಭೂಮಿಯಾದ ಪುತ್ತೂರಿನ ಪರ್ಲಡ್ಕದಲ್ಲಿರುವ ಬಾಲವನ ‘ಡಾ. ಕಾರಂತರ ಮನೆ’ಯ ಪುನಶ್ಚೇತನ ಕಾಮಗಾರಿ ಸೋಮವಾರದಿಂದ ಆರಂಭಗೊಳ್ಳಲಿದೆ ಬಾಲವನ ಅಭಿವೃದ್ಧಿಗೆ ಸಂಬಂಧಿಸಿದ ರಾಜ್ಯ ಮಟ್ಟದ ಸಮಿತಿಯ ಸದಸ್ಯರೂ, ದ.ಕ. ಜಿಲ್ಲಾಧಿಕಾರಿಗಳೂ ಆದ ಎ.ಬಿ. ಇಬ್ರಾಹೀಂ ಬಾಲವನಕ್ಕೆ ಭೇಟಿ ನೀಡಿ ಎರಡನೆ ಹಂತದ ಕಾಮಗಾರಿ ಆರಂಭದ ಬಗ್ಗೆ ಗುತ್ತಿಗೆದಾರ ಸಂಸ್ಥೆ ಇಂಟ್ಯಾಕ್‌ನ ಸಮನ್ವಯಕಾರ ಅರವಿಂದ್ ಮತ್ತು ಅಭಿವೃದ್ಧಿ ಸಮಿತಿ ಸದಸ್ಯರ ಜತೆ ಸಮಾಲೋಚನೆ ನಡೆಸಿದರು. ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ರಾಜೇಂದ್ರ ಕೆ.ವಿ., ತಹಶೀಲ್ದಾರ್ ಸಣ್ಣರಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ಚಂದ್ರಹಾಸ ರೈ, ರಾಜ್ಯ ಮಟ್ಟದ ಬಾಲವನ ಅಭಿವೃದ್ಧಿ ಸಮಿತಿಯ ಸದಸ್ಯ, ಹಿರಿಯ ಸಾಹಿತಿ ಡಾ.ಬಿ.ಎ. ವಿವೇಕ ರೈ, ನಿವೃತ್ತ ಪ್ರೊ. ಬಿ.ಜೆ.ಸುವರ್ಣ, ಬಾಲವನದ ಉಸ್ತುವಾರಿ ಅಶೋಕ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.1936ರಿಂದ 1978ರವರೆಗೆ ಪುತ್ತೂರಿನ ಈ ಮನೆಯಲ್ಲಿ ಡಾ.ಕೆ. ಶಿವರಾಮ ಕಾರಂತರು ನೆಲೆಸಿದ್ದರು. ಇದರ ಪುನಶ್ಚೇತನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 29.5 ಲಕ್ಷ ರೂ. ಬಿಡುಗಡೆ ಮಾಡಿದೆ. ಈ ಹಣ ಎ.ಸಿ.ಯ ಖಾತೆಯಲ್ಲಿದೆ. ಕಾರಂತರಿಗೆ ನೀಡಲಾಗಿದ್ದ ಜ್ಞಾನಪೀಠ ಪ್ರಶಸ್ತಿಯು ಈ ಮನೆಯಲ್ಲಿ ಗುಂಡು ನಿರೋಧಕ ಗಾಜಿನೊಳಗೆ ಸಂರಕ್ಷಣೆಯಲ್ಲಿದ್ದು, ಅದನ್ನು ಎ.ಸಿ. ಕಚೇರಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗುತ್ತದೆ. ಮಾ.4ರಂದು ಬಾಲವನದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಮಾರ್ಚ್ 31ರ ಒಳಗೆ ಕಟ್ಟಡದ ಮಾಡಿನ ಪುನಶ್ಚೇತನ ಕಾಮಗಾರಿ ಮುಗಿಸಬೇಕು. ಮೇ 31ರ ಒಳಗೆ ಇಡೀ ಕಟ್ಟಡದ ಕಾಮಗಾರಿ ಮುಗಿಸಬೇಕೆಂದು ಕಂಪೆನಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಬಾಲವನ ಅಭಿವೃದ್ಧಿ ಸಮಿತಿ ಸದಸ್ಯ ಪ್ರೊ ಬಿ.ಜೆ.ಸುವರ್ಣ, ಸಾಹಿತಿ ಡಾ. ಬಿ.ಎ. ವಿವೇಕ್ ರೈ, ಇಂಟ್ಯಾಕ್‌ನ ಸಮನ್ವಯಕಾರ ಅರವಿಂದ್ ಮತ್ತಿತರರು ಉಪಸ್ಥಿತರಿದ್ದರು.

ಅಂತಾರಾಷ್ಟ್ರೀಯ ಕ್ರೀಡಾಪಟುಗೆ ಸನ್ಮಾನ
ಮಂಗಳೂರು, ಫೆ.7: ನಗರದಲ್ಲಿ ಇತ್ತೀಚೆಗೆ ನಡೆದ ಕಿರಿಯರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು, ನ್ಯಾಯವಾದಿ ಡಿ. ಪದ್ಮನಾಭ ಕುಮಾರ್‌ರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಜೆ.ಆರ್. ಲೋಬೊ, ಮಾಜಿ ಸಂಸದೆ ತೇಜಸ್ವಿನಿ ಗೌಡ, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಅನ್ವರ್ ಮಾಣಿಪ್ಪಾಡಿ, ಸದಾನಂದ ಶೆಟ್ಟಿ, ಮಂಜುನಾಥ್, ನಾಗರಾಜ ಶೆಟ್ಟಿ, ಚಂದ್ರಶೇಖರ ರೈ, ಪ್ರದೀಪ್ ಕುಮಾರ್ ಕಲ್ಕೂರ, ಕೆ.ಎಚ್. ನಾಯಕ್, ಎಂಆರ್‌ಪಿಎಲ್‌ನ ಎಚ್. ಕುಮಾರನ್, ಪಾಂಡುರಂಗ ಗೌಡ, ಜಯಂತಿ ಆಚಾರ್, ಸುಧೀರ್ ಶೆಟ್ಟಿ, ವಾಮನ್ ಶೆಣೈ, ಡಾ. ಸತೀಶ್ ರಾವ್, ಪ್ರಕಾಶ್ ಶೆಟ್ಟಿ, ಉದಯ ಚೌಟ, ಸುರೇಶ್ ಚಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಕೀರ್ತನ್ ಮರಿಯಾ ಪಿಂಟೊಗೆ ನಾಲ್ಕನೆ ರ್ಯಾಂಕ್
 ಮಂಗಳೂರು, ಫೆ.7: ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ನಡೆಸಿದ ಬ್ಯಾಚ್‌ಲರ್ ಆಫ್ ಲಾಸ್ (ಎಲ್‌ಎಲ್‌ಬಿ) ಪದವಿ ಪರೀಕ್ಷೆಯಲ್ಲಿ ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಕೀರ್ತನ್ ಮರಿಯಾ ಪಿಂಟೊ ನಾಲ್ಕನೆ ರ್ಯಾಂಕ್ ಗಳಿಸಿದ್ದಾರೆ. ಈಕೆ ಮಾಜಿ ಕಾರ್ಪೊರೇಟರ್ ಗಿಲ್ಬರ್ಟ್ ಪಿಂಟೊ ಹಾಗು ಶಿಕ್ಷಕಿ ಲೀನಾ ಪಿಂಟೊ ದಂಪತಿಯ ಪುತ್ರಿ.

ಫೆ.9ರಿಂದ ಸವಕಲು ನೋಟಿನ ಬಗ್ಗೆ ವಿಶೇಷ ಅಭಿಯಾನ
ಮಂಗಳೂರು, ಫೆ.7: ಸವಕಲು ನೋಟಿನ ವಿನಿಮಯಕ್ಕೆ ಸಂಬಂಧಿಸಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವಿವಿಧ ಕೇಂದ್ರಗಳಲ್ಲಿ ಫೆ.9ರಿಂದ 3 ದಿನಗಳ ಕಾಲ ವಿಶೇಷ ಕೌಂಟರ್‌ಗಳನ್ನು ಆರಂಭಿಸಲಿದೆ. ಸವಕಲು ನೋಟಿನ ಚಲಾವಣೆಯನ್ನು ಸಂಪೂರ್ಣ ನಿವಾರಣೆ ಮಾಡುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ನಿರ್ದೇಶನದ ಮೇರೆಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಈ ವಿಶೇಷ ಅಭಿಯಾನಕ್ಕೆ ಮುಂದಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಅಶೋಕ ರೆಡ್ಡಿ ತಿಳಿಸಿದ್ದಾರೆ. ಶಿಬಿರದಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಮಾಸಿದ, ಸವಕಲುಗೊಂಡ ಮತ್ತು ತುಂಡಾಗಿ ಅಂಟಿಸಿದ ನೋಟುಗಳನ್ನು ಹಿಂಪಡೆದು ಹೊಸ ನೋಟುಗಳನ್ನು ವಿತರಿಸಲಾಗುವುದು. ವಿಶೇಷ ಕೌಂಟರ್‌ಗಳನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಪಿವಿಎಸ್-ಬಂಟ್ಸ್ ಹಾಸ್ಟೆಲ್ ರಸ್ತೆ, ಮಂಗಳೂರು ಇಲ್ಲಿ ಸ್ಥಾಪಿಸಲಾಗಿದೆ ಎಂದು ಪ್ರಕಟನೆೆ ತಿಳಿಸಿದೆ.


ಹಿರಾ ಪ್ರೌಢಶಾಲೆ: ಕಾರ್ಯಾಗಾರ 
ಮಂಗಳೂರು, ಫೆ.7: ಹಿರಾ ಬಾಲಕಿಯರ ಪ್ರೌಢ ಶಾಲೆಯಲ್ಲಿ ಎಸೆಸೆಲ್ಸಿ ವಿದ್ಯಾರ್ಥಿನಿಯರಿಗೆ ಹಾಗೂ ಹೆತ್ತವರಿಗೆ ಶೈಕ್ಷಣಿಕ ಕಾರ್ಯಗಾರ ನಡೆಯಿತು.
ಸವಣೂರು ಸರಕಾರಿ ಕಾಲೇಜಿನ ಪ್ರಾಂಶುಪಾಲ ಬಿ.ವಿ ಸೂರ್ಯನಾರಾಯಣ ಮಾತನಾಡಿ, ವಿದ್ಯಾರ್ಥಿನಿಯರ ಗುಣಮಟ್ಟ ಪರೀಕ್ಷಾ ಸಿದ್ಧತೆಗೆ ಹೆತ್ತವರ ಸಹಕಾರದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಸಂಚಾಲಕ ರಹ್ಮತುಲ್ಲಾ, ಶಾಂತಿ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಅಬ್ದುರ್ರಹ್ಮಾನ್, ಸದಸ್ಯ ಉಮರ್ ಬಾವ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನಝೀರ್ ಉಳ್ಳಾಲ್,ಮುಖ್ಯಶಿಕ್ಷಕಿ ವನಜಾಕ್ಷಿ ಉಪಸ್ಥಿತರಿದ್ದರು.

ಬಾಸ್ಕೆಟ್‌ಬಾಲ್ ಪಂದ್ಯಾಟ
ಉಡುಪಿ, ಫೆ.7: ಉಡುಪಿ ಜಿಲ್ಲಾ ಬಾಸ್ಕೆಟ್‌ಬಾಲ್ ಸಂಸ್ಥೆ, ರೋಟರಿ ಕ್ಲಬ್ ಮಣಿಪಾಲ, ನೇತಾಜಿ ಸ್ಪೋರ್ಟ್ಸ್ ಕ್ಲಬ್ ಪರ್ಕಳ ಹಾಗೂ ಮಣಿಪಾಲ ವಿವಿಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಮುಕ್ತ ವಯೋಮಿತಿಯ ಬಾಸ್ಕೆಟ್‌ಬಾಲ್ ಪಂದ್ಯಾವಳಿಯನ್ನು ಫೆ.10ರಂದು ಪುರುಷರಿಗೆ ಮತ್ತು ಫೆ.11ರಂದು ಮಹಿಳೆಯರಿಗಾಗಿ ಹಮ್ಮಿಕೊಂಡಿದೆ. ಭಾಗವಹಿಸಲಿಚ್ಛಿಸುವ ಉಡುಪಿ ಜಿಲ್ಲೆಯ ಕಾಲೇಜು/ಕ್ಲಬ್‌ಗಳ ತಂಡಗಳು ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು. ವಿವರಗಳಿಗೆ ದೀಪಕ್‌ರಾಮ್ ಬಾಯಿರಿ (ಮೊ.ಸಂ. :9449481776) ಯವರನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಮಾ.5ರಂದು ಉಪಚುನಾವಣೆ
ಕಾಸರಗೋಡು, ಫೆ.7: ಚೆಂಗಳ ಗ್ರಾಪಂನ 13ನೆ ಚೆರ್ಕಳ ವೆಸ್ಟ್ (ಮಹಿಳಾ ಮೀಸಲಾತಿ) ಮತ್ತು ಪಿಲಿಕ್ಕೋಡ್ ಗ್ರಾಪಂನ ಮೂರನೆ ಕೊಡಕ್ಕಾಡ್ ವಾರ್ಡಿಗೆ ಮಾರ್ಚ್5ರಂದು ಉಪ ಚುನಾವಣೆ ನಡೆಯಲಿದೆ.

ಎಂ.ಸಿ.ಟಿ. ಪಬ್ಲಿಕ್ ಶಾಲಾ ವಾರ್ಷಿಕೋತ್ಸವ
ಮಂಗಳೂರು,ಫೆ.7: ಮುಲ್ಕಿ ಕಿಲ್ಪಾಡಿಯ ಎಂ.ಸಿ.ಟಿ ಪಬ್ಲಿಕ್ ಸ್ಕೂಲ್‌ನ ವಾರ್ಷಿಕೋತ್ಸವ ಇತ್ತೀಚೆಗೆ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಅನಿವಾಸಿ ಭಾರತೀಯ ಉದ್ಯಮಿ ಕಬೀರ್ ಕಾರ್ನಾಡ್ ಮಾತನಾಡಿ, ಸಮಾಜದ ಸಂಪೂರ್ಣ ಅಭಿವೃದ್ಧಿಗೆ ಕೇವಲ ಶಿಕ್ಷಣವೊಂದೇ ಮಾರ್ಗದರ್ಶಿಯಾದೆ ಎಂದರು.ಕಾರ್ಯಕ್ರಮದಲ್ಲಿ ಮುಲ್ಕಿ ಪಪಂ ಮಾಜಿ ಸದಸ್ಯ ಮಹಾಬಲ ಸಾಲಿಯಾನ್ , ಪಡುಪಣಂಬೂರುಗ್ರಾಪಂ ಉಪಾಧ್ಯಕ್ಷ ಸುರೇಖಾ ಕರುಣಾಕರ್, ಸಂಸ್ಥೆಯ ಅಧ್ಯಕ್ಷ ಇಬ್ರಾಹೀಂ ಬಾವ, ಸಂಚಾಲಕ ಅಬೂಬಕರ್, ಮುಖ್ಯ ಶಿಕ್ಷಕ ರಜನಿಕಾಂತ ಭಟ್, ಕಾರ್ಯದರ್ಶಿ ಹಾಜಿ ಅಬ್ಬಾಸ್ ಅಲಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ನಝೀರ್, ಟ್ರಸ್ಟಿಗಳಾದ ಮೊದಿನಬ್ಬ, ಎಂ.ಬಿ.ಖಾನ್ ಉಪಸ್ಥಿತರಿದ್ದರು.


ವೃತ್ತಿ ಮಾರ್ಗದರ್ಶನ ಶಿಬಿರ
ಮಂಗಳೂರು, ಫೆ.7: ನಗರದ ರೊಝಾರಿಯೊ ಪ್ರೌಢಶಾಲೆಯ ಸಭಾಂಗಣದಲ್ಲಿ ‘ಎಸೆಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಹೇಗೆ ತಯಾರಿಸಬೇಕು?’ ಮತ್ತು ‘ವೃತ್ತಿ ಮಾರ್ಗದರ್ಶನ ಶಿಬಿರ’ವನ್ನು ನಡೆಸಲಾಯಿತು.
  ಸಂಪನ್ಮೂಲ ವ್ಯಕ್ತಿಯಾಗಿ ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲ ಪ್ರೊ.ರೊನಾಲ್ಡ್ ಪಿಂಟೊ ಭಾಗವಹಿಸಿದ್ದರು. ಮುಖ್ಯ ಶಿಕ್ಷಕ ಅಲೋಶಿಯಸ್ ಡಿಸೋಜ ಸ್ವಾಗತಿಸಿದರು. ವೇದಿಕೆಯಲ್ಲಿ ಶಾಲಾ ನಾಯಕ ಮುಹಮ್ಮದ್ ಕಲಂದರ್ ಉಪಸ್ಥಿತರಿದ್ದರು. ಶಿಕ್ಷಕ ರೋಶನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸುಮಿತ್ ಕುಮಾರ್ ವಂದಿಸಿದರು.

ಸ್ವಚ್ಛತೆ ಕುರಿತು ಕಾರ್ಯಕ್ರಮ
ಕೊಣಾಜೆ, ಫೆ.7: ದೇರಳಕಟ್ಟೆಯ ಕಣಚೂರು ಶಿಕ್ಷಣ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ನೇತೃತ್ವದಲ್ಲಿ ಸ್ವಚ್ಛತೆಯ ಅರಿವು ಮತ್ತು ಸ್ವಚ್ಛತಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಇಕ್ಬಾಲ್ ಅಹ್ಮದ್ ಯು.ಟಿ. ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಎನ್ನೆಸ್ಸೆಸ್ ಯೋಜನಾಧಿಕಾರಿ ಜೀವನ್ ರಾಜ್, ಸಹ ಯೋಜನಾಧಿಕಾರಿ ಸುಜಾತಾ, ನಿರ್ಮಲಾ, ಹಾಗೂ ಎನ್ನೆಸ್ಸೆಸ್ ಘಟಕದ ನಾಯಕರಾದ ಮಿಶ್ರಿಯಾ, ಫಾತಿಮತ್ ಅಫ್ರಾ, ರೋಶ್ಮಿ, ಮನಿಶಾ, ಭವ್ಯಾ, ನಿಶಾ ಉಪಸ್ಥಿತರಿದ್ದರು.

ಕ್ಷಯ ರೋಗ ಅರಿವು ಕಾರ್ಯಕ್ರಮ
ಮಂಗಳೂರು, ಫೆ.7: ಜಿಲ್ಲಾ ಕ್ಷಯರೋಗ ಚಿಕಿತ್ಸಾ ಕೇಂದ್ರದ ವತಿಯಿಂದ ಕ್ಷಯರೋಗದ ಕುರಿತು ಅರಿವು ಕಾರ್ಯಕ್ರಮವನ್ನು ಮಂಗಳೂರು ತಾಲೂಕಿನ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬಗಂಬಿಲದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜಿಲ್ಲಾ ಕ್ಷಯ ಚಿಕಿತ್ಸಾ ಕೇಂದ್ರದ ಸಂಯೋಜಕ ಮನೋಜ್ ಕೆ. ಮಾಹಿತಿ ನೀಡಿದರು. ಶಾಲೆಯ ಮುಖ್ಯ ಶಿಕ್ಷಕಿ ಶಕುಂತಳಾ ಬಿ. ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿಯರಾದ ಉಮಾವತಿ, ಯಮುನಾ, ಪ್ರತಿಮಾ, ರಶ್ಮಿ, ಸ್ಯಾಂಡ್ರಾ ಉಪಸ್ಥಿತರಿದ್ದರು. ರಾಜ್ಯಮಟ್ಟಕ್ಕೆ ಆಯ್ಕೆ ಮಂಗಳೂರು, ಫೆ.7: ಸರಕಾರಿ ಐಟಿಐ, ಕದ್ರಿಹಿಲ್ಸ್ ಇದರ ಪ್ರಾಂಶುಪಾಲ ಗಿರಿಧರ್ ಸಾಲಿಯಾನ್ ಇತ್ತೀಚೆಗೆ ಮಂಗಳಾ ಕ್ರೀಡಾಂಗಣದಲ್ಲಿ ಜರಗಿದ ಸರಕಾರಿ ನೌಕರರ ಕ್ರೀಡಾಕೂಟದ ಪುರುಷರ ವಿಭಾಗದ ಜಾವೆಲಿನ್ ತ್ರೊ ಕ್ರೀಡಾಕೂಟ ಸ್ಪರ್ಧೆ ಹಾಗೂ 45 ವರ್ಷ ಮೇಲ್ಪಟ್ಟ ಪುರುಷರ ವಿಭಾಗದ ಡಿಸ್ಕಸ್ ತ್ರೊ ಮತ್ತು ಶಾಟ್‌ಫುಟ್ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಶಿವಮೊಗ್ಗದಲ್ಲಿ ಜರಗಲಿರುವ ರಾಜ್ಯ ಮಟ್ಟದ ಸಿವಿಲ್ ಸರ್ವಿಸಸ್ ಕ್ರೀಡಾಕೂಟಕ್ಕೆ ದ.ಕ ಜಿಲ್ಲೆಯನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

‘ಪಿನ್ಯಾಕಲ್ 2016’ ಉದ್ಘಾಟನೆ
ಪುತ್ತೂರು, ಫೆ.7: ಮಾನವನ ಪ್ರತಿಭೆಯನ್ನು ಬೆಳಕಿಗೆ ತರಲು ಸ್ಪರ್ಧೆ ಅನಿವಾರ್ಯ. ನಮ್ಮ ಚಟುವಟಿಕೆಗಳಲ್ಲಿ ಕ್ರಿಯಾಶೀಲತೆ ಮತ್ತು ಗುಣಮಟ್ಟವನ್ನು ಅಳವಡಿಸಿಕೊಂಡಾಗ ಯಶಸ್ಸು ನಿಶ್ಚಿತ ಎಂದು ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ರೆ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಹೇಳಿದರು. ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಜರಗಿದ ಅಂತರ್ ಕಾಲೇಜು ಸ್ಪರ್ಧೆ ‘ಪಿನ್ಯಾಕಲ್ 2016’ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರೆ. ಫಾ. ವಿಜಯ್ ಲೋಬೊ, ಬೆಂಗಳೂರಿನ ಐಟಿಸಿ ಇನ್‌ಫೊಟೆಕ್‌ನ ಐಟಿ ಕಾರ್ಯನಿರ್ವಾಹಕಿ ವಂದನಾ ಬಿ.ಎಸ್. ಮತ್ತು ಪುಣೆಯ ವಿಪ್ರೊ ಟೆಕ್ನೋಲಜಿಯ ಮುಖ್ಯ ಅಭಿವೃದ್ಧಿ ಅಧಿಕಾರಿ ನಿರ್ಮಲಾ ಜಿ. ಆರ್. ಅತಿಥಿಗಳಾಗಿ ಭಾಗವಹಿಸಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೊ ನೊರೊನ್ಹ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಪ್ರೊ. ವಾರಿಜಾ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಪ್ರೊ. ರಾಜೇಶ್ವರಿ ಎಮ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ವಿನಯಚಂದ್ರ ಮತ್ತು ಸಂಯೋಜಕಿ ಅನನ್ಯಾ ಉಪಸ್ಥಿತರಿದ್ದರು. ಕಾರ್ತಿಕ್ ಪಡಿಯಾರ್ ವಂದಿಸಿದರು.

ಕಾಂಗ್ರೆಸ್ ಸಭೆ
 ಮಂಗಳೂರು,ಫೆ.7: ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಸಭೆಯು ಇತ್ತೀಚೆಗೆ ಜೆಪ್ಪುನಲ್ಲಿರುವ ಬ್ಲಾಕ್ ಕಚೇರಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ನೂತನ ಬ್ಲಾಕ್ ಅಧ್ಯಕ ಕೆ. ಬಾಲಕೃಷ್ಣ ಶೆಟ್ಟಿ ವಹಿಸಿದ್ದರು ಸಭೆಯಲ್ಲಿ ಪಿ.ವಿ. ಮೋಹನ, ಜೆ. ಎ. ಸಲೀಮ್, ಟಿ.ಕೆ. ಸುಧೀರ್, ಬ್ಲಾಕ್ ಉಪಾಧ್ಯಕ್ಷ ಸದಾಶಿವ ಅಮೀನ್, ಶೇಖರ ಸುವರ್ಣ, ಅಹ್ಮದ್ ಬಾವಾ, ದುರ್ಗಾಪ್ರಸಾದ್, ಉಪಸ್ಥಿತರಿದ್ದರು.


 ರಾಷ್ಟ್ರೀಯ ನಾಟಕೋತ್ಸವ: ಸಮಾಲೋಚನಾ ಸಭೆ
ಹೆಬ್ರಿ, ಫೆ.7: ಮುದ್ರಾಡಿ ನಮ ತುಳುವೆರ್ ಕಲಾಸಂಘಟನೆ ನಾಟ್ಕ ಮುದ್ರಾಡಿ ವತಿಯಿಂದ ಮಾ.1ರಿಂದ 7ರವರೆಗೆ ನಡೆಯುವ ಆರನೆ ರಾಷ್ಟ್ರೀಯ ನಾಟಕೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆ ಮುದ್ರಾಡಿ ಆದಿಶಕ್ತಿ ದೇವಸ್ಥಾನದಲ್ಲಿ ರಂಗ ನಟ, ನಿರ್ದೇಶಕ ಬಾಸುಮ ಕೊಡಗು ನೇತೃತ್ವದಲ್ಲಿ ನಡೆಯಿತು. ಮುದ್ರಾಡಿ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ಮೋಹನ್ ಸ್ವಾಮೀಜಿ, ಮುದ್ರಾಡಿ ನಮ ತುಳುವೆರ್ ಕಲಾಸಂಘಟನೆ ನಾಟ್ಕ ಮುದ್ರಾಡಿ ಅಧ್ಯಕ್ಷ ಸುಕುಮಾರ್ ಮೋಹನ್, ಮುದ್ರಾಡಿ ಗೆಳೆಯರ ಬಳಗದ ಮಂಜುನಾಥ್ ಹೆಗ್ಡೆ, ಪತ್ರಕರ್ತ ಸುಕುಮಾರ್ ಮುನಿಯಾಲ್, ಮುದ್ರಾಡಿ ನಮ ತುಳುವೆರ್ ಕಲಾಸಂಘಟನೆ ನಾಟ್ಕ ಮುದ್ರಾಡಿಯ ಪ್ರಮುಖರಾದ ವಾಣಿ ಸುಕುಮಾರ್, ಉಮೇಶ್ ಕಲ್ಮಾಡಿ, ಸುಗಂಧಿ ಉಮೇಶ್ ಕಲ್ಮಾಡಿ, ಸುರೇಂದ್ರ ಮೋಹನ್, ಸುಧೀಂದ್ರ ಮೋಹನ್ ಮುಂತಾದವರು ಉಪಸ್ಥಿತರಿದ್ದರು.

ಡ್ರಾಯಿಂಗ್ ಗ್ರೇಡ್ ಪರೀಕ್ಷೆ ಪ್ರಶಸ್ತಿ
ಬಂಟ್ವಾಳ, ಫೆ.7: ಕರ್ನಾಟಕ ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಾಮದಪದವು ಸರಕಾರಿ ಪದವಿ ಪೂರ್ವ ಕಾಲೇಜಿನ 9ನೆ ತರಗತಿ ವಿದ್ಯಾರ್ಥಿಗಳಾದ ಕೆ.ಎಸ್.ವಿಶ್ವಜ್ಞ ಹಾಗೂ ಹರ್ಷಿತಾ ಕೆ. 523 ಅಂಕಗಳೊಂದಿಗೆ ಬಂಟ್ವಾಳ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X