Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಸಮಸ್ಯೆಗಳ ಇತ್ಯರ್ಥಕ್ಕೆಹೊಸರೂಪದ ರೈತ...

ಸಮಸ್ಯೆಗಳ ಇತ್ಯರ್ಥಕ್ಕೆಹೊಸರೂಪದ ರೈತ ಚಳವಳಿ ಅವಶ್ಯ: ನೂರ್ ಶ್ರೀಧರ್

ವಾರ್ತಾಭಾರತಿವಾರ್ತಾಭಾರತಿ7 Feb 2016 11:46 PM IST
share
ಸಮಸ್ಯೆಗಳ ಇತ್ಯರ್ಥಕ್ಕೆಹೊಸರೂಪದ ರೈತ ಚಳವಳಿ ಅವಶ್ಯ: ನೂರ್ ಶ್ರೀಧರ್

ಕೃಷಿ, ಸಕ್ಕರೆ, ಮೈಷುಗರ್ ಬಿಕ್ಕಟ್ಟು ಕುರಿತ ವಿಚಾರಗೋಷ್ಠಿ, ರೈತ-ಕಾರ್ಮಿಕ ಸಮಾವೇಶ
ಮಂಡ್ಯ, ಫೆ.7: ಒಡೆದಿರುವ ರೈತ ಸಂಘಟನೆಗಳು ಮತ್ತೆ ಒಗ್ಗೂಡಿ ಹೊಸರೂಪದ ಚಳವಳಿ ರೂಪಿಸಬೇಕು. ಇದರಿಂದ ಮಾತ್ರ ಕೃಷಿ ಬಿಕ್ಕಟ್ಟು ಮತ್ತು ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯ ಎಂದು ಸಮಾನತೆಗಾಗಿ ಜನಾಂದೋಲನದ ನೂರ್ ಶ್ರೀಧರ್ ಪ್ರತಿಪಾದಿಸಿದ್ದಾರೆ.
ರೈತ ಹೋರಾಟ ಸಮಿತಿ, ಕರ್ನಾಟಕ ಜನಶಕ್ತಿ ಸಂಘಟನೆ ಹಾಗೂ ಮೈಷುಗರ್ಸ್‌ ಎಂಪ್ಲಾಯಿಸ್ ಅಸೋಸಿಯೇಶನ್ ವತಿಯಿಂದ ನಗರದ ರೈತ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ಕೃಷಿ ಬಿಕ್ಕಟ್ಟು, ಸಕ್ಕರೆ ಬಿಕ್ಕಟ್ಟು, ಮೈಷುಗರ್ ಬಿಕ್ಕಟ್ಟು ಕುರಿತ ವಿಚಾರಗೋಷ್ಠಿ ಹಾಗೂ ರೈತ-ಕಾರ್ಮಿಕರ ಜಂಟಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ೃಷಿ ಬಿಕ್ಕಟ್ಟಿನ ಪ್ರಸ್ತುತ ಸ್ವರೂಪ ಮತ್ತು ಪರಿಹಾರದ ದಾರಿಗಳು ಕುರಿತು ವಿಚಾರ ಮಂಡಿಸಿದ ಶ್ರೀಧರ್, ಕೃಷಿಕರು, ಕಬ್ಬು ಬೆಳೆಗಾರರು, ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆ, ಇದಕ್ಕೆ ಕಾರಣಗಳು ಹಾಗೂ ಕೈಗೊಳ್ಳಬಹುದಾದ ಮಾರ್ಗೋಪಾಯಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.


ರೈತ ಮತ್ತು ಕಾರ್ಮಿಕ ಸಂಘಟನೆಗಳು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಜಾತ್ಯತೀತ, ಧರ್ಮಾತೀತವಾಗಿ ಒಗ್ಗೂಡಬೇಕು. ಒಗ್ಗೂಡದಿದ್ದರೂ ಚಿಂತೆಯಿಲ್ಲ. ಆದರೆ, ರೈತ ಹೋರಾಟದಲ್ಲಿ ಸಂಘಟಿತ ಹೋರಾಟ ನಡೆಸಬೇಕು. ಸಂಘಟನೆಗಳು ಮತ್ತೆ ಮರುಹುಟ್ಟು ಪಡೆದು ಭವಿಷ್ಯದಲ್ಲಿ ದೊಡ್ಡ ಹೋರಾಟ ರೂಪಿಸುತ್ತವೆ ಎಂಬ ಭರವಸೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಂದು ದೇಶದ ಪ್ರತೀ ರೈತನ ಮೇಲೆ ಸರಾಸರಿ 6ಲಕ್ಷ ರೂ. ಸಾಲದ ಭರವಿದೆ. ಈ ಋಣ ಭಾರವನ್ನು ರೈತರು ತಲೆಮೇಲಿಟ್ಟುಕೊಂಡು ತಮ್ಮ ಪ್ರಾಣವನ್ನು ತ್ಯಾಗಮಾಡಿ ಕೃಷಿಯನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಇಂತಹ ಘೋರ ದುರಂತಕ್ಕೆ ದೇಶದಲ್ಲಿ 1990ರಲ್ಲಿ ಜಾರಿಗೆ ಬಂದ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣ ನೀತಿ ಕಾರಣ ಎಂದು ಅವರು ಹೇಳಿದರು.ಜಾಗತೀಕರಣ ನೀತಿಯಿಂದಾಗಿ ಕಾರ್ಪೊರೇಟ್ ಶಕ್ತಿಗಳು ಪ್ರಭಲಗೊಂಡು ಆಳುವ ಸರಕಾರಗಳನ್ನು ನಿಯಂತ್ರಣ ಮಾಡುತ್ತಿವೆ. ಇದು ಸಕ್ಕರೆ ನೀತಿಯ ಮೇಲೂ ಪರಿಣಾಮ ಬೀರಿದೆ. ಸಕ್ಕರೆ ಮಾರಾಟದ ಮೇಲೆ ನಿಯಂತ್ರಣ ಸಾಧಿಸಲು 1920ರಲ್ಲಿ ಬ್ರಿಟಿಷರು ರೂಪಿಸಿದ ಮೊದಲ ಸಕ್ಕರೆ ನೀತಿ ಮುಂದುವರಿದಿದ್ದು, ಇಂದು ಕಾರ್ಪೊರೇಟ್ ಶಕ್ತಿಗಳಿಂದ ರೂಪಿತವಾಗುತ್ತಿದೆ ಎಂದು ಶ್ರೀಧರ್ ವಿವರಿಸಿದರು.ಬ್ಬಿನ ದರ ನಿಗದಿಪಡಿಸುವ ಅಧಿಕಾರ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗಿತ್ತು. ಕ್ರಮೇಣ ರಾಜ್ಯ ಸರಕಾರಗಳು ಆ ಅಧಿಕಾರ ಕಳೆದುಕೊಂಡಿವೆ. ಕೇಂದ್ರ ಸರಕಾರವೇ ದರ ನಿಗದಿಪಡಿಸಿದರೂ ಖಾಸಗಿ ಸಕ್ಕರೆ ಕಂಪೆನಿಗಳು ಒಪ್ಪುತ್ತಿಲ್ಲ. ಈ ಒಪ್ಪಂದವನ್ನು ಉಲ್ಲಂಘಿಸುವ ಕಂಪೆನಿಗಳ ವಿರುದ್ಧ ಕ್ರಮಕ್ಕೂ ಮುಂದಾಗುತ್ತಿಲ್ಲ. ಏಕೆಂದರೆ, ಸರಕಾರಗಳು, ಪಕ್ಷಗಳು ಖಾಸಗಿ ಕಂಪೆನಿಗಳ ಜತೆ ಶಾಮೀಲಾಗಿವೆ ಎಂದು ಆರೋಪಿಸಿದರು.


ದೇಶದಲ್ಲಿ ಸರಕಾರಿ ಸಕ್ಕರೆ ಕಂಪೆನಿಗಳು ನಷ್ಟದಲ್ಲಿದ್ದರೆ, ಸಹಕಾರಿ ಕ್ಷೇತ್ರದ ಕಂಪೆನಿಗಳು ಸಂಕಷ್ಟದಲ್ಲಿವೆ. ಆದರೆ, ಖಾಸಗಿ ಕಂಪೆನಿಗಳು ಲಾಭದಲ್ಲಿವೆ. ಖಾಸಗಿ ಕಂಪೆನಿಗಳು ನಷ್ಟದಲ್ಲಿವೆ ಎಂದು ಹೇಳಿತ್ತಿರುವುದು ಸುಳ್ಳು. ನಷ್ಟದಲ್ಲಿದ್ದರೆ ಖಾಸಗಿ ಕಂಪೆನಿಗಳ ಕಾರ್ಖಾನೆಗಳ ಸ್ಥಾಪನೆ ಹೆಚ್ಚುತ್ತಿರಲಿಲ್ಲ ಎಂದು ಅವರು ವಿಶ್ಲೇಷಿಸಿದರು.್ಟಾರೆ ಸರಕಾರಗಳು ಸರಕಾರಿ ಸ್ವಾಮ್ಯದ ಕಂಪೆನಿಗಳನ್ನು ಪುನಶ್ಚೇತನಗೊಳಿಸುವ ಬದಲು ನಷ್ಟದ ನೆಪಮಾಡಿಕೊಂಡು ಮುಚ್ಚುವ ಕಾರ್ಯಕ್ರಮವನ್ನು ಹಾಕಿಕೊಳ್ಳುವ ಮೂಲಕ ಕಾರ್ಪೊರೇಟ್ ಕಂಪೆನಿಗಳಿಗೆ ಧಾರೆಯೆರೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ರೈತ-ಕಾರ್ಮಿಕರ ಸಂಘಟಿತ ಹೋರಾಟವೊಂದೇ ಪರಿಹಾರ ಎಂದು ಅವರು ಹೇಳಿದರು.ರಲ್ಲೇ ರೈತರ ಮರಣ ಶಾಸನಕ್ಕೆ ಅಡಿಗಲ್ಲು: ಕೃಷಿ ಬಿಕ್ಕಟ್ಟು ಉಂಟಾದ ಬಗೆ ಮತ್ತು ಪ್ರಸ್ತುತ ಸನ್ನಿವೇಶ ಕುರಿತು ವಿಚಾರ ಮಂಡಿಸಿದ ಮೈಸೂರು ವಿವಿ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ಕೆ.ಸಿ.ಬಸವರಾಜು, ಶೇ.93ರಷ್ಟು ಜನರು ಅವಲಂಬಿಸಿದ್ದ ಕೃಷಿಯನ್ನು ಕಡೆಗಣಿಸಿ, ಕೈಗಾರೀಕರಣಕ್ಕೆ ಒತ್ತು ನೀಡುವ ಮೂಲಕ 1950ರಲ್ಲೇ ರೈತರ ಮರಣ ಶಾಸಕ್ಕೆ ಸರಕಾರ ಅಡಿಗಲ್ಲು ಇಟ್ಟಿತು ಎಂದರು.ರ ಹಸಿರು ಕ್ರಾಂತಿಯಲ್ಲಿ 36 ವಲಯಗಳನ್ನು ಗುರುತಿಸಿ ಕೇವಲ 6 ವಲಯಗಳಲ್ಲಿ ಮಾತ್ರ ಹಸಿರು ಕ್ರಾಂತಿ ಮಾಡಲಾಯಿತು. ಸ್ವಾತಂತ್ರ್ಯ ಬಂದ 30 ವರ್ಷದಲ್ಲಿ ಕೃಷಿಯಲ್ಲಿ ಏನನ್ನೂ ಸಾಧಿಸಲಾಗಲಿಲ್ಲ. 1980ರ ವೇಳೆಗೆ ಕೃಷಿ ದುರ್ಬಲವಾಗಿತ್ತು. ಆ ಸಂದರ್ಭದಲ್ಲಿ ಹುಟ್ಟಿಕೊಂಡ ರೈತ ಚಳವಳಿ ಸರಕಾರಗಳು ಗ್ರಾಮಗಳ ಕಡೆಗೆ ಮುಖಮಾಡುವಂತೆ ಮಾಡಿತು ಎಂದು ಅವರು ತಿಳಿಸಿದರು.ೀ ಭಾರತದ ಉತ್ಪದನಾ ಕ್ಷೇತ್ರಗಳಲ್ಲಿ ಕೃಷಿ ಅತ್ಯಂತ ದುರ್ಬಲವಾಗಿದೆ. ಸಾರ್ವಜನಿಕ ಬಂಡವಾಳವನ್ನು ತೊಡಗಿಸಿ ನೀರಾವರಿ ವ್ಯವಸ್ಥೆ ಮಾಡಬೇಕಿತ್ತು. ಸಿ.ಎಚ್.ಹನುಮಂತರಾವ್ 1989ರಲ್ಲಿ ನೀಡಿದ್ದ ವರದಿಯನ್ನು ಅಂದು ಪ್ರಧಾನಿಯಾಗಿದ್ದ ವಿ.ಪಿ.ಸಿಂಗ್ ಕಡೆಗಣಿಸಿದ್ದರು. ಕೃಷಿಗೆ ಸಾರ್ವಜನಿಕ ಬಂಡವಾಳವನ್ನು ತೊಡಗಿಸಬೇಕೆಂದು ಅಂದು ಭಾಷಣ ಬಿಗಿದಿದ್ದ ಡಾ.ಮನಮೋಹನ್ ಸಿಂಗ್, ತಾನು ಪ್ರಧಾನಿಯಾದ ಮೇಲೆ ಅದನ್ನು ಮರೆತು ದೇಶವನ್ನು ಖಾಸಗೀಕರಣಕ್ಕೆ ತೆರೆದಿಟ್ಟಿದ್ದು ದುರಂತ ಎಂದು ಬಸವರಾಜು ಕಿಡಿಕಾರಿದರು.ರ್ನಾಟಕದಲ್ಲಿ ಕಬ್ಬು ಬೆಳೆಯುವ ರೈತರು ಉಳಿಯಬೇಕಾದರೆ ಮಂಡ್ಯದ ಸರಕಾರಿ ಸ್ವಾಮ್ಯದ ಮೈಷುಗರ್ ಉಳಿಯಬೇಕಾಗಿದೆ. ಏಕೆಂದರೆ ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ನಿಗದಿಯಾಗುವ ಕಬ್ಬಿನ ದರವು ಇಡೀ ರಾಜ್ಯಕ್ಕೆ ಅನ್ವಯವಾಗುತ್ತದೆ. ಹಾಗಾಗಿ ನಮ್ಮ ಸಾಮರ್ಥ್ಯವನ್ನು ಉಪಯೋಗಿಸಿ ಮೈಷುಗರ್ ಉಳಿಸಿಕೊಳ್ಳಲೇಬೇಕು ಎಂದು ಅವರು ಕರೆ ನೀಡಿದರು. ಸಕ್ಕರೆ ಕೃಷಿ ಮತ್ತು ಸಕ್ಕರೆ ಕಾನೂನುಗಳು ಕುರಿತು ಬೆಳಗಾಂನ ಹಿರಿಯ ವಕೀಲ ಬಿ.ಪಿ.ಶೇರಿ ಮತ್ತು ಮೈಷುಗರ್ ಬಿಕ್ಕಟ್ಟು-ವರ್ತಮಾನ ಮತ್ತು ಭವಿಷ್ಯ ಕುರಿತು ಕರ್ನಾಟಕ ಜನಶಕ್ತಿಯ ಡಾ.ವಾಸು ವಿಚಾರ ಮಂಡಿಸಿದರು. ಹಿರಿಯ ಲೇಖಕ ಪ್ರೊ.ಎಚ್.ಎಲ್.ಕೇಶವಮೂರ್ತಿ, ಷುಗರ್ ಫೆಡರೇಷನ್ ರಾಜ್ಯ ಕಾರ್ಯದರ್ಶಿ ಬಿ.ನಾಗರಾಜು ಮತ್ತು ರೈತ ಮುಖಂಡ ಕೆ.ಬೋರಯ್ಯ ವಿವಿಧ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದರು.ರ್ನಾಟಕ ಜನಶಕ್ತಿಯ ಜಿಲ್ಲಾಧ್ಯಕ್ಷ ಬಿ.ಕೃಷ್ಣಪ್ರಕಾಶ್, ರೈತ ಹೋರಾಟ ಸಮಿತಿಯ ಚಂದನ್, ಹುಲಿವಾನದ ಗುರುಸಿದ್ದಯ್ಯ, ಪ್ರಕಾಶ್ ಕಾರಸವಾಡಿ, ಸಂತೆಕಸಲಗೆರೆ ಯೋಗೇಶ್, ಚಾಂಷುಗುರ್‌ನ ಕೃಷ್ಣೇಗೌಡ, ಮೈಷುಗರ್ ಯೂನಿಯನ್ ಅಧ್ಯಕ್ಷ ಶ್ರೀನಿವಾಸ್, ಜಿ.ಬಿ.ವೇಣು, ಎನ್‌ಎಸ್‌ಎಲ್ ವರ್ಕರ್ಸ್ ಯೂನಿಯನ್‌ನ ಸಿ.ಪಿ.ಮನೋಹರ್ ಮೊದಲಾದವರು ಉಪಸ್ಥಿತರಿದ್ದರು. ರೈತ ಹೋರಾಟ ಸಮಿತಿಯ ಪದಾಧಿಕಾರಿಗಳು ಸಸಿಗಳಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಕಾರ್ಯಕ್ರಮದಲ್ಲಿ ಸಿಯಾಚಿನ್‌ನಲ್ಲಿ ಹಿಮಪಾತಕ್ಕೆ ಸಿಲುಕಿ ಮರಣ ಹೊಂದಿದ ಯೋಧರಿಗೆ ವೌನಾಚರಣೆ ಸಲ್ಲಿಸಲಾಯಿತು.
 ಪ್ರಮುಖ ನಿರ್ಣಯಗಳು:


 . ಮೈಷುಗರ್ ಕಾರ್ಖಾನೆಯನ್ನು ಸಾರ್ವಜನಿಕ ಕ್ಷೇತ್ರದಲ್ಲೇ ಉಳಿಸಿಕೊಳ್ಳಲು ಸರಕಾರ ಕ್ರಮಕೈಗೊಳ್ಳಬೇಕು. 
2. ಕಬ್ಬು ಬೆಳೆಗಾರರ ಹಿತಾಸಕ್ತಿಗೆ ವಿರುದ್ಧವಾದ ಮತ್ತು ಬಹುರಾಷ್ಟ್ರೀಯ ಕಂಪೆನಿಗಳಿಗೆ ಪೂರಕವಾದ ರಂಗರಾಜನ್ ಸಮಿತಿ ಶಿಪಾರಸು ಒಪ್ಪಬಾರದು. 
3. ಕಬ್ಬು ಬೆಲೆಯ ಮೇಲಿನ ನಿಯಂತ್ರಣವನ್ನು ಸರಕಾರವೇ ಇಟ್ಟುಕೊಳ್ಳಬೇಕು.
4.ಡಿ, ವೈಜ್ಞಾನಿಕ ನೀರಾವರಿ ಕ್ರಮಗಳ ಮೂಲಕ ಸರಕಾರ ರೈತರ ನೆರವಿಗೆ ಬರಬೇಕು. 
5. ಕೃಷಿ ಕ್ಷೇತ್ರದ ಮೇಲಿನ ಕಾರ್ಪೊರೇಟ್ ಕಂಪೆನಿಗಳ ಹಿಡಿತ ತಪ್ಪಿಸಬೇಕು. 
6. ಸರಕಾರಗಳ ರೈತ ವಿರೋಧಿ ನೀತಿಯಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ರೈತರ ಸಾಲಮನ್ನಾ ಮಾಡಿ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು. 
7. ಕಬ್ಬಿಗೆ ಎಫ್‌ಆರ್‌ಪಿ ಕರ ನೀಡದಿರುವ ಕಾರ್ಖಾನೆಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು. ಚ್ಟ8. ಆದಷ್ಟು ಬೇಗ ಮೈಷುಗರ್ ಕಾರ್ಖಾನೆಯ ಕಬ್ಬು ಅರೆಯುವಿಕೆ ಆರಂಭಿಸಬೇಕು.ಚ್ಟ9. ಭದ್ರಾವತಿಯ ಎಂಪಿಎಂ ಕಾರ್ಖಾನೆ ಸೇರಿದಂತೆ ಸಮಸ್ಯೆಯಲ್ಲಿರುವ ಕಾರ್ಮಿಕರ ಹೋರಾಟಕ್ಕೆ ಕೈಜೋಡಿಸಲಾಗುವುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X