Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಮರುಕಳಿಸಲಿದೆಯೇ ಸಾಂಸ್ಕೃತಿಕ ಗತವೈಭವ..?

ಮರುಕಳಿಸಲಿದೆಯೇ ಸಾಂಸ್ಕೃತಿಕ ಗತವೈಭವ..?

ರಂಗರಾಜು ಎನ್.ಡಿ.ರಂಗರಾಜು ಎನ್.ಡಿ.7 Feb 2016 11:52 PM IST
share
ಮರುಕಳಿಸಲಿದೆಯೇ ಸಾಂಸ್ಕೃತಿಕ ಗತವೈಭವ..?

ತುಮಕೂರು: ಸುಣ್ಣ, ಬಣ್ಣದೊಂದಿಗೆ ಶೃಂಗಾರಗೊಂಡ ಶತಮಾನದ ಟೌನ್‌ಹಾಲ್‌ 

ತುಮಕೂರು, ಫೆ.7: ಹಲವು ದಿನಗಳಿಂದ ಬಳಕೆಗೆ ಬಾರದೆ ಗತಕಾಲವನ್ನು ನೆನಪಿಸುತ್ತಿದ್ದ ತುಮಕೂರಿನ ಟೌನ್‌ಹಾಲ್ ಶಾಸಕರು, ನಗರಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳ ಒತ್ತಾಸೆಯಿಂದಾಗಿ ಜೀರ್ಣೋದ್ಧಾರಗೊಂಡು ಸುಣ್ಣ, ಬಣ್ಣದೊಂದಿಗೆ ಶೃಂಗಾರಗೊಂಡಿದೆ.

ತುಮಕೂರು ನಗರದ ಹೃದಯ ಭಾಗದಲ್ಲಿರುವ ಅತಿ ಪುರಾತನ ಕಟ್ಟಡಗಳಲ್ಲಿಯೇ ಒಂದಾಗಿರುವ ಶ್ರೀಕೃಷ್ಣರಾಜೇಂದ್ರ ಟೌನ್‌ಹಾಲ್‌ನ್ನು 1916 ರಲ್ಲಿ ನಾಲ್ಮಡಿ ಕೃಷ್ಣರಾಜೇಂದ್ರ ಒಡೆಯರು ಜನತೆಗೆ ಆರ್ಪಿಸಿದ್ದಾರೆ. ಹಲವು ದಶಕಗಳ ತುಮಕೂರು ನಗರದ ಸಾಂಸ್ಕೃತಿಕ ಕೇಂದ್ರವಾಗಿ ಮೆರೆದಿದ್ದ ಟೌನ್‌ಹಾಲ್ ಕೆಲ ವರ್ಷಗಳಿಂದ ದುಸ್ತ್ಥಿ ಕಾಣದೆ ಸದಾ ಬಾಗಿಲು ಹಾಕಿರುವ ಪೂಜೆಯೇ ಕಾಣದ ದೇವಾಲಯದಂತಾಗಿತ್ತು. ಕಟ್ಟಡದ ಒಂದೆರಡು ಕೊಠಡಿಗಳನ್ನು ಶಾಸಕರ ಕಚೇರಿಯಾಗಿ ಬಳಕೆ ಮಾಡಿಕೊಂಡರೆ ಇಡೀ ಕಟ್ಟಡ ಸುಣ್ಣ ಬಣ್ಣವಿಲ್ಲದೆ, ಸಣ್ಣಪುಟ್ಟ ದುರಸ್ತಿಯೂ ಇಲ್ಲದೆ ಹಾಳುಬಿದ್ದ ಸ್ಮಾರಕದಂತೆ ಕಂಡುಬರುತ್ತಿತ್ತು.ಹಿಂದೆ ಎಸ್.ಶಿವಣ್ಣ ಶಾಸಕರಾಗಿದ್ದ ಸಂದರ್ಭದಲ್ಲಿ ಸುಮಾರು 42 ಲಕ್ಷ ರೂ. ವೆಚ್ಚದಲ್ಲಿ ಸದರಿ ಕಟ್ಟಡದ ದುರಸ್ತಿಗೆ ಪ್ರಯತ್ನಿಸಿದರೂ ಪುರಾತನ ಕಟ್ಟಡಕ್ಕೆ ಹಾನಿಯಾಗದಂತೆ ನವೀಕರಣಗೊಳಿಸಲು ಗುತ್ತಿಗೆದಾರರು ಒಪ್ಪದ ಹಿನ್ನೆಲೆಯಲ್ಲಿ ಹಾಗೂ ಕಟ್ಟಡದ ನವೀಕರಣಕ್ಕೆ ಪುರಾತತ್ವ ಇಲಾಖೆ ಅನುಮತಿ ನೀಡದ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ನೆನೆಗುದಿಗೆ ಬಿದ್ದಿತ್ತು.

ತುಮಕೂರು ನಗರಕ್ಕೆ ಡಾ.ರಫೀಕ್ ಅಹ್ಮದ್ ಶಾಸಕರಾಗಿ ಆಯ್ಕೆಯಾದ ನಂತರ 2014-15ನೆ ಸಾಲಿನ ಎಸ್.ಎಫ್.ಸಿ. ವಿಶೇಷ ಅನುದಾನದಲ್ಲಿ ಸುಮಾರು 18ಲಕ್ಷ ರೂ.ಗಳನ್ನು ಮೀಸಲಿಟ್ಟು ಟೌನ್‌ಹಾಲ್‌ಗೆ ಆಗಬೇಕಿದ್ದ ಸಣ್ಣಪುಟ್ಟ ರಿಪೇರಿಗಳನ್ನು ಮಾಡಿ ಸುಣ್ಣಬಣ್ಣ ಹೊಡೆದು ಸಿಂಗರಿಸಲಾಗಿದೆ. ಲಕ್ಷ ರೂ.ಗಳಲ್ಲಿ ಕಟ್ಟಡದ ಒಳ, ಹೊರಗೂ ಟೈಲ್ಸ್ ಒಳಗೊಂಡ ನೆಲಹಾಸು, ಒಡೆದು ಹೋಗಿದ್ದ ಕಿಟಕಿ ಬಾಗಿಲುಗಳ ಗಾಜುಗಳ ಅಳವಡಿಕೆ, ಒಡೆದು ಹೋಗಿದ್ದ ಹೆಂಚುಗಳ ಬದಲಾವಣೆ, ಹೊಸದಾಗಿ ವಿದ್ಯುತ್ ಅಳವಡಿಕೆ ಹೀಗೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸುಣ್ಣ ಬಣ್ಣದ ನಂತರ ಇಡೀ ಕಟ್ಟಡಕ್ಕೆ ಹೊಸ ಮೆರುಗು ಬಂದಿದ್ದು, ಗತಕಾಲದ ವೈಭವವನ್ನು ಪುನರ್ ನೆನಪಿಸುವಂತೆ ಕಂಡು ಬರುತ್ತಿದೆ.

ಹಿರಿಯ ತಬಲಾ ಕಲಾವಿದ ಪಿ.ಜಾರ್ಜ್ ಹೇಳುವಂತೆ ಒಂದು ಕಾಲದಲ್ಲಿ ಟೌನ್‌ಹಾಲ್‌ನಲ್ಲಿ ಪ್ರತಿದಿನ ಒಂದಿಲ್ಲೊಂದು ನಾಟಕ, ವಿಚಾರ ಸಂಕಿರಣ, ಸಭೆ, ಸಮಾರಂಭ ನಡೆಯುತ್ತಿತ್ತು. ಪೌರಾಣಿಕ ನಾಟಕಗಳಿಗಿಂತ ಸಾಮಾಜಿಕ ನಾಟಕಗಳು ಹೆಚ್ಚು ಪ್ರದರ್ಶನಗೊಳ್ಳುತ್ತಿತ್ತು. ಟ್ಟಡದ ಬಾಡಿಗೆ ಐದು ರೂ. ಇದ್ದ ಕಾಲದಿಂದಲೂ ನಾನು ಟೌನ್‌ಹಾಲ್ ಕುರಿತು ಬಲ್ಲೆ. ಇನ್ನೇನು ಟೌನ್‌ಹಾಲ್ ಕಟ್ಟಡ ಜನರ ಮನಸ್ಸಿನಿಂದ ಅಳಿಸಿಯೇ ಹೋಯಿತು ಎಂಬ ಭಾವನೆ ಮೂಡುವ ವೇಳೆ ಮತ್ತೆ ಸುಣ್ಣ, ಬಣ್ಣ ಕಂಡು ಹೊಸದರಂತೆ ಕಾಣುತ್ತಿರುವುದು ನಿಜಕ್ಕೂ ಸಂತೋಷವನ್ನುಂಟು ಮಾಡಿದೆ. ಅಲ್ಲದೆ, ಬ್ರಿಟಿಷರ ಕಾಲದ ಇಂಜಿನಿಯರ್ಸ್‌, ಗಾಳಿ ಬೆಳಕಿಗೆ ನೀಡುತ್ತಿದ್ದ ಮಹತ್ವ ಕಟ್ಟಡ ನೋಡಿದಾಗ ಆಶ್ಚರ್ಯವನ್ನುಂಟು ಮಾಡುತ್ತದೆ ಎಂದರು.ಟ್ಟಡದ ಕುರಿತು ಮಾತನಾಡಿದ ಶಾಸಕ ಡಾ.ರಫೀಕ್ ಅಹ್ಮದ್, ಪುರಾತನ ಕಟ್ಟಡ ಹಾಳಾಗಬಾರದು ಎಂಬ ಕಾರಣಕ್ಕೆ ನವೀಕರಿಸಲಾಗಿದೆ. ಈ ಹಿಂದೆ ಯಾವ ಕಾರ್ಯಕ್ರಮ ನಡೆಯುತ್ತಿದ್ದವು ಎಂಬುದು ಗೊತ್ತಿಲ್ಲ. ಆದರೆ, ಪ್ರಸ್ತುತ ಕಟ್ಟಡವನ್ನು ಸರಕಾರಿ ಅದರಲ್ಲಿಯೂ ಪಾಲಿಕೆಯ ಸಭೆ, ಸಮಾರಂಭಗಳಿಗೆ ಬಳಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಸಾರ್ವಜನಿಕರಿಗೆ ಬಾಡಿಗೆ ನೀಡುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದರು. ಇದೇ ಅಭಿಪ್ರಾಯವನ್ನು ಪಾಲಿಕೆಯ ಆಯುಕ್ತರು, ಜಿಪಂ ಮತ್ತು ತಾಪಂ ಚುನಾವಣೆ ನಂತರ ಕಟ್ಟಡವನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.ಳೆದ ಐದಾರು ವರ್ಷಗಳಿಂದ ಚಟುವಟಿಕೆಯೇ ಇಲ್ಲದೆ, ಹಳೆಯ ಸ್ಮಾರಕದಂತೆ ಕಂಡುಬರುತ್ತಿದ್ದ ಟೌನ್‌ಹಾಲ್ ಮತ್ತೆ ಸುಣ್ಣ, ಬಣ್ಣದೊಂದಿಗೆ ಶೃಂಗಾರಗೊಂಡಿರುವುದು ನಿಜಕ್ಕೂ ಸಂತೋಷದ ವಿಚಾರವಾಗಿದೆ. 
 

share
ರಂಗರಾಜು ಎನ್.ಡಿ.
ರಂಗರಾಜು ಎನ್.ಡಿ.
Next Story
X