ಮಾಧ್ಯಮ ಜಾಹೀರಾತಿಗೂ ಅನುಮತಿ ಕಡ್ಡಾಯ: ಜಿಲ್ಲಾಧಿಕಾರಿ ಮೋಹನ್ ರಾಜ್

ತುಮಕೂರು ಜಿಲ್ಲೆಯಲ್ಲಿ 2,195 ಮತಗಟ್ಟೆಗಳ ಸ್ಥಾಪನೆ, 14,487 ಸಿಬ್ಬಂದಿ ನಿಯೋಜನೆ
ತುಮಕೂರು, ಫೆ.7: ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮಾಧ್ಯಮಗಳಿಗೆ ನೀಡುವ ಜಾಹೀರಾತಿಗೂ ಸಹ ಜಿಲ್ಲಾ ಮಾಧ್ಯಮ ಸಮಿತಿಯಿಂದ ಅಭ್ಯರ್ಥಿಗಳು ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮಾಧ್ಯಮಗಳಿಗೆ ನೀಡುವ ಜಾಹೀರಾತಿಗೆ ಸಂಬಂಧಿಸಿದಂತೆ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಹಾಗೆಯೇ ಸ್ಟಾರ್ ನಾಯಕರ ಪ್ರಚಾರದ ಜಾಹೀರಾತಿನ ವೆಚ್ಚವನ್ನು ಅಯಾ ಪಕ್ಷದ ಖರ್ಚು ವೆಚ್ಚದಲ್ಲಿ ಪರಿಗಣಿಸಲಾಗುವುದು. ಅನುಮತಿ ಪಡೆಯದೆ ಜಾಹೀರಾತು ನೀಡಿದರೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದರು.ಮತಗಟ್ಟೆ: ಜಿಲ್ಲೆಯ 57 ಜಿಪಂ ಹಾಗೂ 215 ತಾಪಂ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 539 ಸೂಕ್ಷ್ಮ ಹಾಗೂ 397 ಅತೀಸೂಕ್ಷ್ಮ ಸೇರಿದಂತೆ ಒಟ್ಟು 2195 ಮತಗಟ್ಟೆಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ಸೂಕ್ಷ ಮತಗಟ್ಟೆಗಳಲ್ಲಿ ಇಬ್ಬರು, ಅತೀ ಸೂಕ್ಷ ಮತಗಟ್ಟೆಗಳಲ್ಲಿ ಮೂವರು ಹಾಗೂ ಸಾಮಾನ್ಯ ಮತಗಟ್ಟೆಗಳಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಕಚೇರಿ, ಎಸ್ಪಿ ಕಚೇರಿ ಹಾಗೂ 10 ತಾಲೂಕು ತಾಹಶೀಲ್ದಾರ್ ಕಚೇರಿಗಳು ಸೇರಿದಂತೆ 12 ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ.ಪಂ 550 ನಾಮಪತ್ರಗಳು ಸಲ್ಲಿಕೆ: ಜಿಲ್ಲೆಯ ಒಟ್ಟು 57 ಜಿ.ಪಂ. ಕ್ಷೇತ್ರಗಳಿಗೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ಪಕ್ಷೇತರರು ಸೇರಿದಂತೆ ಒಟ್ಟು 550 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ 11 ನಾಮಪತ್ರಗಳು ತಿರಸ್ಕೃತವಾಗಿದ್ದು,226 ಉಮೇದುವಾರರು ನಾಮಪತ್ರ ಹಿಂಪಡೆದಿದ್ದಾರೆ.78 ಪಕ್ಷೇತರರು ಸೇರಿದಂತೆ ಒಟ್ಟು 261 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.ಹಾಗೆಯೇ ಜಿಲ್ಲೆಯ 215 ತಾ.ಪಂ. ಕ್ಷೇತ್ರಗಳಿಗೆ 1399 ನಾಮಪತ್ರ ಸಲ್ಲಿಕೆಯಾಗಿದ್ದವು. ಇದರಲ್ಲಿ 2 ನಾಮಪತ್ರಗಳು ತಿರಸ್ಕೃತ ವಾಗಿದ್ದು, 536 ಮಂದಿ ಉಮೇದುವಾರಿಕೆ ಹಿಂಪಡೆ ದಿದ್ದಾರೆ. 146 ಪಕ್ಷೇತರರು ಸೇರಿದಂತೆ ಒಟ್ಟು 804 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ ಎಂದರು.ಲ್ಲೆಯಲ್ಲಿ 8,68,286 ಪುರುಷ ಹಾಗೂ 9,01981 ಮಹಿಳಾ ಹಾಗೂ 93 ಇತರೆ ಸೇರಿದಂತೆ ಒಟ್ಟು 17,70,360 ಮತದಾರು ಮತದಾನದ ಹಕ್ಕು ಚಲಾಯಿಸಲಿದ್ದಾರೆ. ಹಾಗೆಯೇ ಜಿಲ್ಲೆಯ 10 ತಾಲೂಕಿಗಳಲ್ಲಿ 47 ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ದಿನದ 24 ಗಂಟೆಯೂ ಕಂದಾಯ, ಪೊಲೀಸ್ ಹಾಗೂ ಅಬಕಾರಿ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಇದುವರೆಗೆ 11 ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ದೂರುಗಳು ಬಂದಿವೆ ಎಂದರು.
ತಾ.ಪಂಗೆ 50 ಸಾವಿರ ಜಿ.ಪಂಗೆ 1 ಲಕ್ಷ: ಪ್ರತಿ ಚುನಾವಣೆಯಂತೆ ತಾಪಂ ಅಭ್ಯರ್ಥಿಗೆ 50 ಸಾವಿರ ಹಾಗೂ ಜಿಪಂ ಅಭ್ಯರ್ಥಿಗೆ 1 ಲಕ್ಷ ಚುನಾವಣಾ ವೆಚ್ಚ ಮಿತಿಯನ್ನು ನಿಗದಿಪಡಿಸಲಾಗಿದೆ. ಜಿಲ್ಲೆಯ ತುಮಕೂರು, ಮಧುಗಿರಿ, ತಿಪಟೂರು ಮೂರು ವಿಭಾಗಗಳಲ್ಲಿಯೂ ಓರ್ವ ಚುನಾವಣಾ ವೀಕ್ಷಕರು ಹಾಗೂ ವಿಶೇಷವಾಗಿ ಚುನಾವಣಾ ವೆಚ್ಚದ ಮೇಲೆ ನಿಗಾ ಇಡಲಿ ಜಿಲ್ಲೆಯಲ್ಲಿ ಓರ್ವ ಖರ್ಚುವೆಚ್ಚ ವೀಕ್ಷಕರು ಕರ್ತವ್ಯ ನಿರ್ವಹಿಸಲಿದ್ದಾರೆ. ಬಲಗೈ ಹೆಬ್ಬೆರಳಿಗೆ ಶಾಹಿ: ಈ ಬಾರಿ ಚುನಾವಣಾ ಆಯೋಗ ಮತದಾರರ ಬಲಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕುವಂತೆ ನಿರ್ದೇಶನ ನೀಡಿದೆ. ಈ ಬಾರಿ ಚುನಾವಣೆಯಲ್ಲಿ ಹೆಬ್ಬೆಟ್ಟು ಹಾಕಬೇಕು.







