ಮಂಗಳೂರು : ಡಾ.ಜಿ.ಎನ್.ಭಟ್ ಅವರಿಗೆ ಏರ್ಯ ಪ್ರಶಸ್ತಿ

ಮಂಗಳೂರು,ಫೆ.8: ಕೆನರಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗು ‘ಸಂಶೋಧನ’ ಶಿರಸಿ ಸಂಸ್ಥೆಯ ಅಧ್ಯಕ್ಷ ಡಾ.ಜಿ.ಎನ್.ಭಟ್ ಬೆಂಗಳೂರು ಇವರಿಗೆ ಏರ್ಯ ಪ್ರಶಸ್ತಿಯನ್ನು ಫೆ.17ರಂದು ಪ್ರದಾನ ಮಾಡಲಾಗುವುದೆಂದು ಪ್ರಕಟನೆ ತಿಳಿಸಿದೆ.
ನಗರದ ಕೆನರಾ ಕಾಲೇಜಿನ ರತ್ನಾಬಾಯಿ ಸ್ಮಾರಕ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ಸಿ.ಎ. ಎಸ್.ಎಸ್ ಕಾಮತ್ ವಹಿಸಲಿದ್ದಾರೆ. ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಪ್ರಾಧ್ಯಪಕ ಡಾ.ಶಿಕಾರಿಪುರ ಕೃಷ್ಣಮೂರ್ತಿ ಅಭಿನಂದನಾ ಭಾಷಣ ಮಾಡಲಿದ್ದಾರೆ.ಸಾಹಿತಿ ಏರ್ಯ ಲಕ್ಷ್ಮೀನಾರಯಣ ಆಳ್ವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





