ಸಂಗಟನೆಗಳ ಮೂಲಕ ಸಂಘಟಿತರಾಗಿ ಕಾರ್ಯ ನಿರ್ವಹಿಸಿದಾಗ ಉತ್ತಮ ಸಾಮಾಜಿಕ ಕಾರ್ಯಗಳನ್ನು ಮಾಡಲು ಸಾಧ್ಯ

ಉಳ್ಳಾಲ: ಸಮಾಜದ ಎಲ್ಲಾ ಆಗುಹೋಗುಗಳಲ್ಲಿ ಛಾಯಾಗ್ರಾಹಕರ ಪಾತ್ರ ಮಹತ್ವದ್ದಾಗಿದ್ದು, ಸಂಗಟನೆಗಳ ಮೂಲಕ ಸಂಘಟಿತರಾಗಿ ಕಾರ್ಯ ನಿರ್ವಹಿಸಿದಾಗ ಉತ್ತಮ ಸಾಮಾಜಿಕ ಕಾರ್ಯಗಳನ್ನು ಮಾಡಲು ಸಾದ್ಯ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಅಭಿಪ್ರಾಯಪಟ್ಟರು.
ಅವರು ತೊಕ್ಕೊಟ್ಟು ಒಳಪೇಟೆಯಲ್ಲಿ ನಡೆದ ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಶನ್ ಉಳ್ಳಾಲ ವಲಯ ಇದರ 2015-17ರ ನೂತನ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಪದಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಕೆ.ಪಿ.ಎ. ದ.ಕ. ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಅಧ್ಯಕ್ಷ ಜಗನ್ನಾಥ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್.ಕೆ.ಪಿ. ವಿವಿಧೋದ್ಧೇಶ ಸಹಕಾರಿ ಸಂಘ ಅಧ್ಯಕ್ಷ ವಾಸುದೇವರಾವ್, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ಎಸ್‌ಕೆಪಿಎ ಪ್ರಧಾನ ಕಾರ್ಯದರ್ಶಿ ಮಧು ಮಂಗಳೂರು, ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗ ಉಪಾಧ್ಯಕ್ಷ ಕೆ.ಎಸ್. ಅಮೀರ್ ಅಹ್ಮದ್ ತುಂಬೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಸೋಸಿಯೇಶನ್‌ನ ಸದಸ್ಯರೂ ಫೋಟೋಗ್ರಾಫಿಯಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ರಾಕೇಶ್ ಕೊಣಾಜೆ, ಅಪುಲ್ ಇರಾ, ಕಲಾವಿದ ಪ್ರವೀಣ್ ಮರ್ಕಮೆ, ಅಸೋಸಿಯೇಶನ್‌ನ ಸ್ಥಾಪಕಾಧ್ಯಕ್ಷ ಅರುಣ್ ಉಳ್ಳಾಲ್, ಪ್ರ.ಕಾರ್ಯದರ್ಶಿ ಸಂತೋಷ್ ಮಾರ್ಲ ಅವರನ್ನು ಸನ್ಮಾನಿಸಲಾಯಿತು.
ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಗೋರಿಗುಡ್ಡ ಕಿಟೆಲ್ ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಠಲ ಎ., ಉಳ್ಳಾಲ ನಗರಸಭಾ ಸದಸ್ಯ ಕೆ. ಹುಸೈನ್ ಕುಂಇಮೋನು, ಕ್ಲಿಕ್ ಕ್ಯಾಟರಿಂಗ್‌ನ ಮಾಲಕ ಚಂದ್ರಕಾಂತ್ ತೊಕ್ಕೊಟ್ಟು, ಆಡಂಕುದ್ರ ಸೈಂಟ್ ಸೆಬಾಸ್ಟಿಯನ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ, ಜಿನಿವಾ ಪಿಂಟೋ, ಅಥ್ಲೆಟಿಕ್ ಕ್ರೀಡಾಪಟು ಅಬ್ದುಲ್ ರೆಹಮಾನ್ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಯು. ಅರುಣ್ ಕುಮಾರ್, ಕೋಶಾಧಿಕಾರಿ ತೀರ್ಥನಾಥ್ ಕಣಂತೂರು, ನಿಯೋಜಿತ ಅಧ್ಯಕ್ಷ ಉಮೇಶ್ ಉಳ್ಳಾಲ್ ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸಂತೋಷ್ ಮಾರ್ಲ ಸ್ವಾಗತಿಸಿದರು. ಹರೀಶ್ ಕೊಣಾಜೆ ಪ್ರಸ್ತಾವನೆಗೈದರು. ತನುಂಜಯ ರಾವ್ ವಂದಿಸಿದರು. ಹೇಮಚಂದ್ರ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು.







