Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಪ್ರಣವ್ ಮುಖರ್ಜಿ, ನೆನಪುಗಳ ಬೆನ್ನು...

ಪ್ರಣವ್ ಮುಖರ್ಜಿ, ನೆನಪುಗಳ ಬೆನ್ನು ಹತ್ತಿ...

ವಾರ್ತಾಭಾರತಿವಾರ್ತಾಭಾರತಿ8 Feb 2016 8:17 PM IST
share
ಪ್ರಣವ್ ಮುಖರ್ಜಿ,  ನೆನಪುಗಳ ಬೆನ್ನು ಹತ್ತಿ...

ರಾಜೀವ್ ಸಾವು ನನ್ನ ಕಂಗಾಲಾಗಿಸಿತು. ಭಾರತವು ತನ್ನ ಓರ್ವ ಅತ್ಯಂತ ಸಕ್ರಿಯ ನಾಯಕನನ್ನು ಹದಿಹರೆಯದಲ್ಲೇ ಮತ್ತು ಬಹಳ ಭೀಕರವಾಗಿ ಕಳೆದುಕೊಂಡಿತ್ತು. ವರ್ಚಸ್ಸಿನಿಂದ ಕೂಡಿದ, ಸ್ನೇಹಪರ ಮತ್ತು ಹೊಸ ಪರಿಕಲ್ಪನೆಗಳಿಂದ ತುಂಬಿದ್ದ,ಅವರು ಯಾರ ಸಂಪರ್ಕಕ್ಕೆ ಬಂದರೂ ಅವರಿಗೆ ಪ್ರೀತಿಪಾತ್ರರಾಗುತ್ತಿದ್ದರು.ಅವರ ಬೆಂಬಲದ ಆಧಾರ ನಿಜವಾಗಿಯೂ ಸಮಸ್ತ ಭಾರತೀಯವಾಗಿತ್ತು. ಅವರು ಬದುಕಿರಬೇಕಿತ್ತು ಮತ್ತು ನಮ್ಮ ದೇಶ ಮತ್ತು ರಾಜಕೀಯವನ್ನು ಬಹಳ ವರ್ಷಗಳ ವರೆಗೆ ಮುನ್ನಡೆಸಬೇಕಿತ್ತು. ಅವರು ಕಾಣಿಕೆ ನೀಡಬಹುದಾಗಿದ್ದದ್ದು ಬಹಳಷ್ಟು ಇತ್ತು.ಆದರೆ ಅದು ಹಾಗಾಗಲಿಲ್ಲ.

ರಾಮನಗರದಲ್ಲಿ ಮೊದಲ ಸಭೆಯನ್ನುದ್ದೇಶಿಸಿ ಮಾತನಾಡಿದ ನಂತರ ರಾಜೀವ್ ಗಾಂಧಿ ಕಾಂತಿಗೆ ತೆರಳಿ ಆ ದಿನದ ತಮ್ಮ ಎರಡನೆ ಸಭೆಯಲ್ಲಿ ಭಾಷಣ ಮಾಡಲು ಆರಂಭಿಸಿದ್ದರು. ಬೆಳಗ್ಗೆ ಸುಮಾರು 93ರ ಹೊತ್ತಿಗೆ ನನಗೊಂದು ಸಂದೇಶ ಬಂತು: ‘ಇಂದಿರಾ ಗಾಂಧಿ ಮೇಲೆ ಹಲ್ಲೆ ನಡೆದಿದೆ.ಕೂಡಲೇ ದಿಲ್ಲಿಗೆ ಬನ್ನಿ’

ರಾಜೀವ್ ಭಾಷಣ ಮಾಡುತ್ತಿರುವ ಮಧ್ಯೆಯೇ ನಾನು ಅವರಿಗೊಂದು ಪತ್ರ ಕಳುಹಿಸಿದೆ ಮತ್ತು ಭಾಷಣವನ್ನು ಸಂಕ್ಷಿಪ್ತಗೊಳಿಸುವಂತೆ ತಿಳಿಸಿದೆ. ಅವರು ಹಾಗೆಯೇ ಮಾಡಿದರು ಮತ್ತು ಅವರು ಕುಳಿತ ತಕ್ಷಣ ನಾನು ಸಂದೇಶದ ಬಗ್ಗೆ ಅವರಲ್ಲಿ ಹೇಳಿದೆ.ಅಂದಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ನಾವು ದಿಲ್ಲಿಗೆ ತಕ್ಷಣ ಪ್ರಯಾಣ ಬೆಳೆಸಬೇಕೆಂದು ನಾನವರಿಗೆ ಸಲಹೆ ನೀಡಿದೆ,ಅವರು ಕೂಡಾ ಒಪ್ಪಿದರು.

ವಿಮಾನ ಮೇಲೇರಿದ ತಕ್ಷಣ ರಾಜೀವ್ ಕಾಕ್ ಪಿಟ್‌ಗೆ ತೆರಳಿದರು. ಸ್ವಲ್ಪ ಸಮಯದ ನಂತರ ಹೊರಬಂದರು ಮತ್ತು ಘೋಷಿಸಿದರು,ಆಕೆ ಸಾವನ್ನಪ್ಪಿದ್ದಾರೆ. ಅಲ್ಲಿ ಮೌನ ಆವರಿಸಿತ್ತು. ನನ್ನ ಕಣ್ಣಿಂದ ಕಂಬನಿ ಇಳಿಯಲು ಆರಂಭಿಸಿತು ಮತ್ತು ನಾನು ತಡೆಯಲಾಗದಂತೆ ಅತ್ತೆ, ಸ್ವಲ್ಪ ಹೊತ್ತು ಬಹಳ ಪ್ರಯತ್ನದ ನಂತರ ನಾನು ನನ್ನ ದುಃಖದ ಮೇಲೆ ಹಿಡಿತ ಸಾಧಿಸಿದೆ.

ರಾಜೀವ್ ಅಸಾಧಾರಣವಾಗಿ ಶಾಂತವಾಗಿದ್ದರು ಮತ್ತು ಸಂಪೂರ್ಣ ನಿಯಂತ್ರಣ ಮತ್ತು ಸ್ಥೈರ್ಯವನ್ನು ಪ್ರದರ್ಶಿಸಿದರು, ಬಹುಶಃ ಇದು ಅವರಿಗೆ ತಾಯಿಯಿಂದ ಬಳುವಳಿಯಾಗಿ ಬಂದಂಥಾ ಸ್ವಭಾವ.

ಒಮ್ಮೆ ನಮ್ಮ ದುಃಖವನ್ನು ಹತೋಟಿಗೆ ತಂದ ನಂತರ ನಾವು ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲು ಆರಂಭಿಸಿದೆವು. ಬಲರಾಮ್ ಜಾಖಡ್, ಘನಿ ಖಾನ್ ಚೌದ್ರಿ, ಶ್ಯಾಮ್ ಲಾಲ್ ಯಾದವ್, ಉಮಾಶಂಕರ್ ದೀಕ್ಷಿತ್ ಮತ್ತು ಶೀಲಾ ದೀಕ್ಷಿತ್ ತಮ್ಮಲ್ಲೇ ಭವಿಷ್ಯದ ಪ್ರಕ್ರಿಯೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು ಮತ್ತು ನಾನು ಅವರನ್ನು ಸ್ವಲ್ಪ ತಡವಾಗಿ ಸೇರಿಕೊಂಡೆ. ಪ್ರಧಾನ ಮಂತ್ರಿ ಜವಾಹರ ಲಾಲ್ ನೆಹರೂ ಮತ್ತು ನಂತರ ಶಾಸ್ತ್ರಿಯವರು (ಕ್ರಮವಾಗಿ 1964 ಮೇ 27 ಮತ್ತು 1966 ಜನವರಿ 11) ಆಡಳಿತ ನಡೆಸುತ್ತಿರುವಾಗಲೇ ಮರಣ ಹೊಂದಿದ್ದ ಬಗ್ಗೆ ನಾನು ವಿವರಿಸಿದೆ.

ಎರಡು ಘಟನೆಗಳಲ್ಲೂ ಅತ್ಯಂತ ಹಿರಿಯ ಸಚಿವ ಗುಲ್ಜಾರಿ ಲಾಲ್ ನಂದಾ ಅವರು ಹಂಗಾಮಿ ಪ್ರಧಾನಿಯಾಗಿದ್ದ ಮಧ್ಯಾಂತರ ಸರಕಾರವನ್ನು ರಚಿಸಲಾಗಿತ್ತು.ಆದರೆ ಅದು ಆಡಳಿತ ನಡೆಸುತ್ತಿದ್ದವರು ಸ್ವಾಭಾವಿಕ ಮರಣ ಹೊಂದಿದ ಸಮಯದ ಲ್ಲಾಗಿತ್ತು. ಇದೊಂದು ಅಸಾಧಾರಣ ಪರಿಸ್ಥಿತಿಯಾಗಿತ್ತು ಇಲ್ಲಿ ಆಡಳಿತ ನಡೆಸುತ್ತಿದ್ದ ಪ್ರಧಾನಿಯನ್ನು ಹತ್ಯೆ ಮಾಡಲಾಗಿತ್ತು. ರಾಜಕೀಯ ನಿರ್ವಾತದ ಜೊತೆಗೆ ಇದು ಹಲವು ಅನಿಶ್ಚಿತತೆಗಳನ್ನು ಸೃಷ್ಟಿಸಿತ್ತು.

ಚರ್ಚೆಯ ಕೊನೆಯಲ್ಲಿ,ಈ ಅಸಾಧಾರಣ ಪರಿಸ್ಥಿತಿಯಿಂದ ಉಂಟಾಗಿರುವ ಸವಾಲನ್ನು ಎದುರಿಸಲು ರಾಜೀವ್ ಗಾಂಧಿಯವರು ಪೂರ್ಣ ಪ್ರಮಾಣದಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಬೇಕು ಎಂಬುದಾಗಿ ನಾವು ನಿರ್ಧರಿಸಿದೆವು. ಕೆಲವರು ಈ ವಿಚಾರವನ್ನು ಅಧಿಕೃತವಾಗಿ ನಾನು ರಾಜೀವ್‌ಗೆ ತಿಳಿಸಬೇಕು ಮತ್ತು ಮುಂದೆ ಅನುಸರಿಸಬೇಕಾದ ನಿಯಮಗಳ ಬಗ್ಗೆ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು. ನಾನು ರಾಜೀವ್ ಅವರನ್ನು ವಿಮಾನದ ಒಂದು ಬದಿಗೆ ಕೊಂಡೊಯ್ದು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಬೇಕು ಎಂದು ಮನವಿ ಮಾಡಿದೆ. ಅವರು ನನ್ನಲ್ಲಿ ಕೇಳಿದ ತಕ್ಷಣದ ಪ್ರಶ್ನೆಯೆಂದರೆ ನಾನು ನಿಭಾಯಿಸಬಲ್ಲೆ ಎಂದು ನಿಮಗನ್ನಿಸುತ್ತದೆಯೇ?

ಹೌದು, ನಾನು ಅವರಿಗೆ ಹೇಳಿದೆ. ನಾವೆಲ್ಲರೂ ನಿಮ್ಮ ಸಹಾಯಕ್ಕೆ ಇದ್ದೇವೆ. ನಿಮಗೆ ನಮ್ಮೆಲ್ಲರ ಬೆಂಬಲವಿದೆ

ರಾಜೀವ್ ಕೂಡಲೇ ಕಾಕ್‌ಪಿಟ್‌ಗೆ ಹೋಗಿ ಹೊಸ ಸರಕಾರ ಪ್ರಮಾಣ ವಚನ ಸ್ವೀಕರಿಸುವ ತನಕ ಇಂದಿರಾ ಗಾಂಧಿ ಸಾವನ್ನಪ್ಪಿರುವ ಸುದ್ದಿಯನ್ನು ಪ್ರಸಾರ ಮಾಡಬಾರದು ಎಂಬ ಸಂದೇಶವನ್ನು ದಿಲ್ಲಿಗೆ ಕಳುಹಿಸಬೇಕು ಎಂದು ನಾನು ಅವರಿಗೆ ತಿಳಿಸಿದೆ. ಯಾವುದೇ ರೀತಿಯ ಗೊಂದಲವನ್ನು ತಪ್ಪಿಸಲು ರಾಜೀವ್ ಅವರನ್ನು ಪ್ರಧಾನ ಮಂತ್ರಿಯಾಗಿ ನೇಮಿಸುವುದು ಮತ್ತು ಇಂದಿರಾ ಅವರ ಹತ್ಯಾ ಸುದ್ದಿಯನ್ನು ಏಕಕಾಲದಲ್ಲಿ ಘೋಷಿಸುವುದಾಗಿ ನಾವು ನಿರ್ಧರಿಸಿದೆವು. ನಂತರ, ಉಪಾಧ್ಯಕ್ಷ ಆರ್. ವೆಂಕಟರಾಮನ್ ಕೂಡಾ ಇಂಥದ್ದೇ ಸೂಚನೆಯನ್ನು ದಿಲ್ಲಿಗೆ ಮೊದಲೇ ನೀಡಿದ್ದರು ಎಂಬುದು ನನಗೆ ತಿಳಿಯಿತು.

ನಮ್ಮ ವಿಮಾನ ದಿಲ್ಲಿಯಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಇಳಿಯಿತು ಮತ್ತು ನಮ್ಮನ್ನು ಸಂಪುಟ ಕಾರ್ಯದರ್ಶಿ ಕೃಷ್ಣಸ್ವಾಮಿ ರಾವ್ ಮತ್ತು ಗೃಹಕಾರ್ಯದರ್ಶಿ ಹಾಗೂ ಇತರ ಸಿಬ್ಬಂದಿ ಸ್ವೀಕರಿಸಿದರು. ಸಂಸದ ಮತ್ತು ರಾಜೀವ್‌ರ ಸೋದರ ಸಂಬಂಧಿ ಮತ್ತು ಆಪ್ತ ಅರುಣ್ ನೆಹರೂ ಕೂಡಾ ಉಪಸ್ಥಿತರಿದ್ದರು. ರಾಜೀವ್ ಮತ್ತು ಅವರು ಕೂಡಲೇ ದಾಳಿಯ ನಂತರ ಇಂದಿರಾ ಗಾಂಧಿಯವರನ್ನು ದಾಖಲು ಮಾಡಲಾಗಿದ್ದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಗೆ ಧಾವಿಸಿದರು.

ಕೃಷ್ಣಸ್ವಾಮಿ ರಾವ್ ಅಲ್ಲಿನ ಪರಿಸ್ಥಿತಿಯ ಬಗ್ಗೆ ನನಗೆ ವಿವರಿಸಿದರು.ಗುಲ್ಜಾರಿ ಲಾಲ್ ನಂದಾ ಈ ಹಿಂದೆ ಏನು ಮಾಡಿದ್ದರೋ ಅದನ್ನೇ ನಾನು ಮಾಡಬೇಕೆಂದು ಅವರು ನನಗೆ ಸಲಹೆ ನೀಡಿದರು. ನಾನು ಅವರಿಗೆ ಹೇಳಿದೆ, ರಾಜೀವ್ ಗಾಂಧಿಯವರನ್ನು ಪ್ರಧಾನಿ ಮಾಡಲಾಗುತ್ತದೆ ಮತ್ತು ನಾನು ಕೂಡಾ ಎಐಐಎಂಎಸ್ ನತ್ತ ತೆರಳಿದೆ.

ಇದೇ ಸಮಯದಲ್ಲಿ ರಾಜೀವ್ ತಾನು ಇತರ ಮೂವರ ಜೊತೆ ಪ್ರಮಾಣ ವಚನ ಸ್ವೀಕರಿಸುವುದಾಗಿ ನಿರ್ಧರಿಸಿದರು -ಪಿವಿ ನರಸಿಂಹ ರಾವ್, ಶಿವಶಂಕರ್ ಮತ್ತು ನಾನು. ಸಿಖ್ ಸಮುದಾಯದ ಭಾವನೆಯನ್ನು ತಲೆಯಲ್ಲಿಟ್ಟುಕೊಂಡು ನಾನು ಬೂಟಾ ಸಿಂಗ್ ಅವರನ್ನೂ ಸೇರಿಸಿಕೊಳ್ಳುವಂತೆ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸಲಹೆ ನೀಡಿದೆ, ಈ ಸಲಹೆಯನ್ನು ಅವರು ಒಪ್ಪಿದರು.

ಕೆಲವರು ರಾಷ್ಟ್ರಪತಿಯವರ ಬರುವಿಕೆಗೆ ಕಾಯದೆ ರಾಜೀವ್ ಗಾಂಧಿ ಉಪರಾಷ್ಟ್ರಪತಿ ಅವರಿಂದಲೇ ಪ್ರಮಾಣ ವಚನ ಸ್ವೀಕರಿಸಬೇಕು ಎಂಬ ಪ್ರಸ್ತಾಪವಿಟ್ಟರು. ರಾಷ್ಟ್ರಪತಿಯವರ ಅನುಪಸ್ಥಿತಿಯಲ್ಲಿ ಅವರು ಈ ಹಕ್ಕನ್ನು ಉಪರಾಷ್ಟ್ರಪತಿಯವರಿಗೆ ನೀಡದ ಹೊರತು ಈ ಅಧಿಕಾರವು ರಾಷ್ಟ್ರಪತಿಯವರ ಕೈಯಲ್ಲಿಯೇ ಇರುತ್ತದೆ ಎಂಬ ಸಾಂವಿಧಾನಿಕ ಹಕ್ಕನ್ನು ದೃಷ್ಟಿಯಲ್ಲಿಟ್ಟು, ನಾನು ಈ ಸಲಹೆಗೆ ನಿರಾಕರಿಸಿದೆ. ಅಂಥಾ ಯಾವುದೇ ಅಧಿಕಾರ ಹಸ್ತಾಂತರ ಗ್ಯಾನಿ ಜೈಲ್ ಸಿಂಗ್ ಅವರು ಮಾಡಿರಲಿಲ್ಲ. ಹಾಗಾಗಿ ಒಂದು ವೇಳೆ ಪ್ರಧಾನ ಮಂತ್ರಿಯವರು ಉಪರಾಷ್ಟ್ರಪತಿಯವರಿಂದ ಪ್ರಮಾಣವಚನ ಸ್ವೀಕರಿಸಿದರೆ ಅದು ಅಸಾಂವಿಧಾನಿಕವಾಗುತ್ತಿತ್ತು. ಮುಖ್ಯವಾಗಿ ಇದು ರಾಜಕೀಯವಾಗಿ ತಪ್ಪು ಸಂದೇಶವನ್ನು ರವಾನಿಸುತ್ತಿತ್ತು.

ಕೊನೆಯಲ್ಲಿ, ನಾನು ಪ್ರಧಾನ ಮಂತ್ರಿಯಾಗಬೇಕೆಂದು ಬಯಸಿದ್ದೇನೆ ಎಂಬ ಬಹಳಷ್ಟು ಕತೆಗಳು ಹುಟ್ಟಿದವು, ನಾನು ನನ್ನ ಅಧಿಕಾರವನ್ನು ಪ್ರತಿಪಾದಿಸಿದೆ ಮತ್ತು ನನ್ನ ಮನವೊಲಿಸಬೇಕಾಗಿ ಬಂತು ಎಂಬೆಲ್ಲಾ.ಮತ್ತು ಇದು ರಾಜೀವ್ ಗಾಂಧಿಯವರ ಮನಸ್ಸಿನಲ್ಲಿ ತಪ್ಪು ಕಲ್ಪನೆಯನ್ನು ಹುಟ್ಟುಹಾಕಿತು. ಈ ಕತೆಗಳು ಸಂಪೂರ್ಣವಾಗಿ ಸುಳ್ಳು ಮತ್ತು ಹಗೆತನದಿಂದ ಕೂಡಿದ್ದು.

ರಾಷ್ಟ್ರಪತಿ ಜೈಲ್ ಸಿಂಗ್ ಅವರು ಮತ್ತ ಆತ್ಮಚರಿತ್ರೆಯಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ, ನಾನು ಮತ್ತು ಪಿವಿ ನರಸಿಂಹ್ ರಾವ್, ರಾಜೀವ್ ಗಾಂಧಿಯವರನ್ನು ಪ್ರಧಾನ ಮಂತ್ರಿ ಸ್ಥಾನದಲ್ಲಿ ಕೂರಿಸುವ ಅವರ ನಿರ್ಧಾರ ಸರಿಯಾದುದು ಎಂದು ಸಂತೋಷದಿಂದ ಒಪ್ಪಿಕೊಂಡಿದ್ದೆವು ಎಂದು.

 1984ರ ಡಿಸೆಂಬರ್ ಚುನಾವಣೆಗಿದ್ದ ಎರಡು ತಿಂಗಳ ಅವಧಿಯಲ್ಲಿ ನಾನು ರಾಜೀವ್ ಅವರ ನಂಬಿಕೆಯನ್ನು ಗಳಿಸಿದ್ದೆ. ರಾಷ್ಟ್ರಪತಿ ಜೈಲ್ ಸಿಂಗ್‌ಗೆ 1984 ಅಕ್ಟೋಬರ್ 3ರಂದು ತಮ್ಮ ಜೊತೆ ಪ್ರಮಾಣ ವಚನ ಸ್ವೀಕರಿಸಲಿರುವ ಮಂತ್ರಿಗಳ ಹೆಸರಿನ ಪಟ್ಟಿಯಲ್ಲಿ ನನ್ನ ಹೆಸರನ್ನೂ ಸೇರಿಸಲಾಗಿತ್ತು. ಅಷ್ಟು ಮಾತ್ರವಲ್ಲ, ಓದುಗರು ಗಮನಿಸಿರಬಹುದು, ಅವರು ನನ್ನ ಹೆಸರನ್ನು ಮೊದಲು ಬರೆದಿದ್ದರು.ಆಸಕ್ತಿದಾಯಕವೆಂದರೆ, ಮೊದಲ ಮೂರು ಹೆಸರುಗಳು ಕೂಡಾ, ಬೂಟಾ ಸಿಂಗ್ ಹೊರತುಪಡಿಸಿ ‘ಪಿ’ಯಿಂದ ಆರಂಭವಾಗುತ್ತಿತ್ತು.

1984ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನು 1984, ಡಿಸೆಂಬರ್ 24ರಂದು ಘೋಷಿಸಲಾಯಿತು. ಕಾಂಗ್ರೆಸ್ 514 ಸ್ಥಾನಗಳ ಪೈಕಿ 404ನ್ನು ಗೆದ್ದು ಜಯಭೇರಿ ಭಾರಿಸಿತ್ತು, ಬಿಜೆಪಿ ಕೇವಲ 2ಸ್ಥಾನ ಪಡೆದಿತ್ತು. ತೆಲುಗುದೇಸಂ ಪಕ್ಷ 30 ಸ್ಥಾನ,ಸಿಪಿಐ(ಎಂ 22, ಎಐಎಡಿಎಂಕೆ 12 ಮತ್ತು ಜನತಾ ಪಕ್ಷ 10 ಸ್ಥಾನ ಪಡೆದಿತ್ತು.

1984, ಡಿಸೆಂಬರ್ 31ರಂದು ಬೆಳಗ್ಗೆ 11 ಗಂಟೆಗೆ ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ರಾಜೀವ್ ಗಾಂಧಿಯವರನ್ನು ಸಿಪಿಪಿಯ ನಾಯಕನಾಗಿ ಚುನಾಯಿಸಲಾಯಿತು. ನಾನು ಈ ಸಭೆಯ ಅಧ್ಯಕ್ಷತೆ ವಹಿಸಿದ್ದೆ ಮತ್ತು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮಧ್ಯಾಹ್ನ 3ಗಂಟೆಗೆ ನಡೆಯಲಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸುವಾಗ ನಾನು ಅವರ ಪಕ್ಕದಲ್ಲಿ ನಿಂತಿದ್ದೆ. ಆಗಲೂ ನಾನು ಆ ದಿನದಲ್ಲಿ ಮುಂದೆ ಏನಾಗಲಿದೆ ಎಂಬ ಬಗ್ಗೆ ಮಾಹಿತಿ ರಹಿತನಾಗಿದ್ದೆ.

ನಾನು ಕರೆಗಾಗಿ ಕಾಯುತ್ತಾ ಕುಳಿತೆ. ರಾಜೀವ್ ಸಂಪುಟದಿಂದ ಕೈಬಿಡಬಹುದು ಎಂಬ ಸ್ವಲ್ಪ ಅನುಮಾನ ಕೂಡಾ ನನ್ನ ಮನಸ್ಸಿನಲ್ಲಿರಲಿಲ್ಲ. ಈ ಬಗ್ಗೆ ನಾನು ಯಾವುದೇ ಗಾಳಿಸುದ್ದಿಯನ್ನು ಕೇಳಿರಲಿಲ್ಲ ಅಥವಾ ಯಾರೂ ಕೂಡಾ ಸುಖಾಸುಮ್ಮನೆ ಕೂಡಾ ಇದರ ಒಂದು ಸುಳಿವನ್ನು ನನಗೆ ನೀಡಿರಲಿಲ್ಲ. ಅತ್ತ ನನಗೆ ಕರೆ ಬಂದಿದೆಯೇ ಎಂದು ಹಲವು ಬಾರಿ ಕರೆ ಮಾಡಿ ನನ್ನನ್ನು ವಿಚಾರಿಸುತ್ತಿದ್ದ ಪಿವಿ ನರಸಿಂಹ ರಾವ್ ಕೂಡಾ ಬಹಳಷ್ಟು ಚಡಪಡಿಸುತ್ತಿದ್ದರು.

ನನ್ನನ್ನು ಸಂಪುಟದಿಂದ ಕೈಬಿಡಲಾಗಿದೆ ಎಂದು ತಿಳಿದಾಗ ನಾನು ಆಘಾತಕ್ಕೊಳಗಾದೆ ಮತ್ತು ಮಂಕು ಬಡಿದವರಂತಾದೆ. ನನಗೆ ಅದನ್ನು ನಂಬಲೂ ಆಗುತ್ತಿರಲಿಲ್ಲ. ಆದರೆ ನಾನು ನನ್ನನ್ನೇ ತಡೆದೆ ಮತ್ತು ದೂರದರ್ಶನದಲ್ಲಿ ಪ್ರಮಾಣ ವಚನ ಸಮಾರಂಭ ವೀಕ್ಷಿಸುತ್ತಿದ್ದ ಪತ್ನಿಯ ಬಳಿ ಕುಳಿತುಕೊಂಡೆ. ಅದು ಕೊನೆಯಾದ ತಕ್ಷಣ ನಾನು ನಗರಾಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆದು ನಾನು ಸಚಿವರಾಗಿಲ್ಲದ ಕಾರಣ 2 ಜಂತರ್ ಮಂತರ್ ನಿವಾಸದ (ಮಂತ್ರಿಗಳಿಗೆ ನೀಡುವಂಥಾ ಮನೆ)ಬದಲು ಸಣ್ಣ ಮನೆ ನೀಡುವಂತೆ ಹೇಳಿದೆ-ಇದನ್ನು ನಾನು 1977ರಲ್ಲೂ ಮಾಡಿದ್ದೆ. ನಂತರ ನಾನು ಸದಾ ನನ್ನ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ನನ್ನ ಕುಟುಂಬದ ಜೊತೆ ರಜೆಯಲ್ಲಿ ತೆರಳಿದೆ.

ಇನ್ನು ಅವರು ನನ್ನನ್ನು ಸಚಿವ ಸಂಪುಟದಿಂದ ಯಾಕೆ ಕೈಬಿಟ್ಟರು ಮತ್ತು ನನ್ನನ್ನು ಯಾಕೆ ಪಕ್ಷದಿಂದ ವಜಾ ಮಾಡಿದರು ಎಂಬ ಪ್ರಶ್ನೆಗೆ ಮರಳುವುದಾದರೆ : ‘ನಾನೇನು ಹೇಳಬಲ್ಲೆನೆಂದರೆ ಅವರು ಸಾಕಷ್ಟು ತಪ್ಪುಗಳನ್ನು ಮಾಡಿದರು ಮತ್ತು ನಾನು ಕೂಡಾ.ಅವರ ಮೇಲೆ ಇತರರು ಪ್ರಭಾವ ಬೀರಿದರು ಮತ್ತು ಇತರರು ನನ್ನ ವಿರುದ್ಧ ಮಾಡುತ್ತಿದ್ದ ಸುಳ್ಳು ಆರೋಪಗಳನ್ನು ಆವರು ಕೇಳುತ್ತಿದ್ದರು. ನಾನು ನನ್ನ ಹತಾಶೆ ನನ್ನ ತಾಳ್ಮೆಯನ್ನು ಮೀರಲು ಬಿಟ್ಟೆ’ ಎಲ್ಲದಕ್ಕಿಂತಲೂ ಮಿಗಲಾಗಿ, ರಾಜೀವ್ ಮತ್ತು ನನ್ನ ವಯಸ್ಸಿನ ಮಧ್ಯೆ ಇದ್ದ ಅಂತರ ಕೇವಲ ಒಂಬತ್ತು ವರ್ಷಗಳು. ನನ್ನನ್ನು ಸಂಪುಟದಿಂದ ಕೈಬಿಟ್ಟಾಗ ನನಗಿನ್ನೂ ಐವತ್ತು ವರ್ಷವೂ ಆಗಿರಲಿಲ್ಲ. ಆದರೆ ಸ್ಪಷ್ಟವಾಗಿ ನಾವು ಬಹಳ ವಿಭಿನ್ನ ಹಿನ್ನೆಲೆಯವರು ಮತ್ತು ಮನೋಧರ್ಮದವರು.ರಾಜೀವ್ ಓರ್ವ ಉದಾಸೀನ ರಾಜಕಾರಣಿಯಾಗಿದ್ದರು. ಸಂದರ್ಭಗಳು ಅವರನ್ನು ನಲ್ವತ್ತರ ಹರೆಯದಲ್ಲಿ ಪ್ರಧಾನ ಮಂತ್ರಿಯಾಗುವಂತೆ ಒತ್ತಡ ಹೇರಿದ್ದವು. ಅವರು ತಮ್ಮ ಕಾಲಕ್ಕಿಂತ ಮುಂದಿದ್ದರು. ಅವರು ವೇಗದ ಬದಲಾವಣೆಯನ್ನು ಬಯಸಿದರು ಮತ್ತು ಕಾಂಗ್ರೆಸ್‌ನ ಹಳೆಯ ಕಾವಲುಗಾರನನ್ನು ಅವರ ಕಲ್ಪನೆಗೆ ತಡೆಯೆಂದು ಕಂಡರು.ಅವರು ಮುಂದಾಲೋಚನೆ ಮಾಡುತ್ತಿದ್ದರು, ತಂತ್ರಜ್ಞಾನದ ಗೀಳು ಹೊಂದಿದ್ದರು ಮತ್ತು ಭಾರತಕ್ಕೆ ವಿದೇಶಿ ಬಂಡವಾಳವನ್ನು ಸ್ವಾಗತಿಸಿದರು ಮತ್ತು ಮಾರುಕಟ್ಟೆ ಆರ್ಥಿಕತೆಯನ್ನು ವಿಸ್ತಾರಗೊಳಿಸುವುದನ್ನೂ ಸ್ವಾಗತಿಸಿದ್ದರು.ಅದರ ವಿರುದ್ಧವಾಗಿ ನಾನು ಸಂಪ್ರದಾಯವಾದಿ, ಸಾರ್ವಜನಿಕ ವಲಯವನ್ನು, ನಿಯಂತ್ರಿಸಲ್ಪಡುವ ಆರ್ಥಿಕತೆಯನ್ನು ಮತ್ತು ಕೇವಲ ಅನಿವಾಸಿ ಭಾರತೀಯರಿಂದ ವಿದೇಶಿ ಬಂಡವಾಳ ಬಯಸಿದ್ದ ಸಾಂಪ್ರದಾಯಿಕ ರಾಜಕೀಯ ನಾಯಕನಾಗಿದ್ದೆ.

ನಾನು ರಾಜೀವ್ ವಿರುದ್ಧ್ದ ಯಾವುದೇ ದ್ವೇಷ ಹೊಂದಿದ್ದೇನೆಯೇ ಎಂದು ಜನರು ಆಗಾಗ ನನ್ನನ್ನು ಕೇಳುತ್ತಾರೆ. ಅದಕ್ಕೆ ನಾನು ನೀಡುವ ಪ್ರತಿಕ್ರಿಯೆ, ಹತ್ಯೆಗೊಳಗಾಗುವ ಮೊದಲು ರಾಜೀವ್ ಇಂಡಿಯಾ ಟುಡೆಯ ಸಂಪಾದಕ ಅರೂನ್ ಪುರಿಗೆ ನೀಡಿದ ಸಂದರ್ಶನ.

ಎಪಿ: ಮೊದಲು ನೀವು ಇಂದಿರಾ ಗಾಂಧಿಯವರು ಉಪಯೋಗಿಸುತ್ತಿದ್ದ ಜನರು ಉದಾಹರಣೆಗೆ ಪ್ರಣವ್ ಮುಖರ್ಜಿ ಮತ್ತು ಧವನ್ ಅವರನ್ನು ದೂರ ಮಾಡಿದಿರಿ ನಂತರ ಅವರತ್ತ ಮರಳಿದಿರಿ.ನೀವು ಏನಾದರೂ ಕಲಿಕೆಯ ಪ್ರಕ್ರಿಯೆ ಮುಖಾಂತರ ಸಾಗಿದಿರಾ?

ಆರ್ ಜಿ: ಅವರ ಬಗ್ಗೆ ಹೇಳಿದ್ದ ಬಹಳಷ್ಟು ವಿಷಯಗಳು ಸತ್ಯವಾಗಿರಲಿಲ್ಲ.

ರಾಜೀವ್ ಸಾವು ನನ್ನನ್ನೂ ಕಂಗಾಲಾಗಿಸಿತು. ಭಾರತವು ತನ್ನ ಓರ್ವ ಅತ್ಯಂತ ಸಕ್ರಿಯ ನಾಯಕನನ್ನು ಹದಿಹರೆಯದಲ್ಲೇ ಮತ್ತು ಬಹಳ ಭೀಕರವಾಗಿ ಕಳೆದುಕೊಂಡಿತ್ತು. ವರ್ಚಸ್ಸಿನಿಂದ ಕೂಡಿದ, ಸ್ನೇಹಪರ ಮತ್ತು ಹೊಸ ಪರಿಕಲ್ಪನೆಗಳಿಂದ ತುಂಬಿದ್ದ ಅವರು ಯಾರ ಸಂಪರ್ಕಕ್ಕೆ ಬಂದರೂ ಅವರಿಗೆ ಪ್ರೀತಿಪಾತ್ರರಾಗುತ್ತಿದ್ದರು.ಅವರ ಬೆಂಬಲದ ಆಧಾರ ನಿಜವಾಗಿಯೂ ಸಮಸ್ತ ಭಾರತೀಯವಾಗಿತ್ತು. ಅವರು ಬದುಕಿರಬೇಕಿತ್ತು ಮತ್ತು ನಮ್ಮ ದೇಶ ಮತ್ತು ರಾಜಕೀಯ ವನ್ನು ಬಹಳ ವರ್ಷಗಳ ವರೆಗೆ ಮುನ್ನಡೆಸಬೇಕಿತ್ತು. ಅವರು ಕಾಣಿಕೆ ನೀಡಬಹುದಾಗಿದ್ದದ್ದು ಬಹಳಷ್ಟು ಇತ್ತು.ಆದರೆ ಅದು ಹಾಗಾಗಲಿಲ್ಲ.

ಆದರೆ, ಯಾರೂ ಪರಿಪೂರ್ಣರಲ್ಲ ಎಂಬುದು ಸತ್ಯ. ತಮ್ಮ ಆಪ್ತಗೆಳೆಯರು ಮತ್ತು ಸಲಹೆಗಾರರ,ಬಾಬಾಲೋಗ್ ಎಂದು ಕರೆಯಲ್ಪಡುವ ಸರಕಾರವನ್ನು ಸ್ಥಾಪಿಸಿದ್ದಂಥವರ ಮೇಲೆ ಅತೀಹೆಚ್ಚು ನಂಬಿಕೆ ಹೊಂದಿರುವುದಕ್ಕೆ ರಾಜೀವ್ ಟೀಕೆಗೊಳಗಾಗಿದ್ದರು.ಅವರಲ್ಲಿ ಕೆಲವರು ಅವಕಾಶವಾದಿಗಳಾಗಿದ್ದರು.

ಶಾ ಬಾನು ತೀರ್ಪು ಮತ್ತು ಮುಸ್ಲಿಮ್ ಮಹಿಳಾ ಮಸೂದೆ (ವಿಚ್ಛೇದನ ಹಕ್ಕಿನ ರಕ್ಷಣೆ)ಸಾಕಷ್ಟು ಟೀಕೆಗಳಿಗೆ ಒಳಗಾಯಿತು ಮತ್ತು ಅವರ ಆಧುನಿಕ ವ್ಯಕ್ತಿತ್ವಕ್ಕೆ ಕುಂದು ಮಾಡಿತ್ತು.

1986ರ ಫೆಬ್ರವರಿ 1ರಂದು ರಾಮಜನ್ಮ ಭೂಮಿ ಮಂದಿರ ಸ್ಥಳವನ್ನು ತೆರೆದಿದ್ದು ಅವರು ಮಾಡಿದ ಮತ್ತೊಂದು ತಪ್ಪು ತೀರ್ಮಾನ.ಈ ನಡೆಗಳನ್ನು ತಪ್ಪಿಸಬಹುದಿತ್ತು ಎಂದು ಜನರು ಭಾವಿಸಿದ್ದರು.

ಇಂದಿನವರೆಗೂ ರಾಜೀವ್ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲವಾದರೂ, ಬೋಫೋರ್ಸ್ ಪ್ರಕರಣ 1989ರ ಲೋಕಸಭಾ ಚುನಾವಣೆಯಲ್ಲಿ ಅವರು ಕಳಪೆ ನಿರ್ವಹಣೆ ತೋರಲು ಕಾರಣವಾದ ಅಂಶಗಳಲ್ಲಿ ಒಂದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X