ಮಂಗಳೂರು : ಖ್ಯಾತ ವಾಗ್ಮಿ ಅಫ್ಝಲ್ ಖಾಸಿಮಿ ಕೊಲ್ಲಂ ಸೂರಿಂಜೆಗೆ.

ಮಂಗಳೂರು : ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸೂರಿಂಜೆ ಘಟಕ ಇದರ ಜಂಟಿ ಆಶ್ರಯದಲ್ಲಿ ಹುಬ್ಬುನ್ನಬಿ (ಸ.ಅ)ರ ರಾಷ್ಟ್ರೀಯ ಅಭಿಯಾನದ ಪ್ರಯುಕ್ತ "ಐಕ್ಯತೆ ಕಾಲದ ಬೇಡಿಕೆ" ಕಾರ್ಯಕ್ರಮವು ಜನಾಬ್ ರಫೀಕ್ ದಾರಿಮಿ ಕಿನ್ಯ( ಜಿಲ್ಲಾ ಜೊತೆ ಕಾರ್ಯದರ್ಶಿ ಇಮಾಮ್ ಕೌನ್ಸಿಲ್) ಇವರ ಅಧ್ಯಕ್ಷತೆಯಲ್ಲಿ ದಿನಾಂಕ 10/02/2016 ಸಮಯ 7 ಘಂಟೆಗೆ ಸೂರಿಂಜೆ ಜಂಕ್ಷನ್ ನಲ್ಲಿ ನಡೆಯಲಿದೆ.
ಮುಖ್ಯ ಭಾಷಣಗಾರರಾಗಿ ಇಮಾಮ್ ಕೌನ್ಸಿಲ್ ಕೇರಳ ರಾಜ್ಯ ಸಮಿತಿಯ ಸದಸ್ಯರಾದ ಜನಾಬ್ ಹಾಫಿಲ್ ಅಫ್ಝಲ್ ಖಾಸಿಮಿ ಕೊಲ್ಲಂ ಭಾಗವಹಿಸಲಿದ್ದು, ದುವಾ ಹಾಗೂ ಆಶಿರ್ವಚನವನ್ನು ಅಂಗರಗುಡ್ಡೆ ಜುಮಾ ಮಸೀದಿಯ ಖತೀಬರಾದ ಜನಾಬ್ ಇಬ್ರಾಹಿಂ ಅಲ್ ಹಾದಿ ಆತೂರ್ ತಂಘಲ್ ನಡೆಸಲಿದ್ದರೆ. ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಅಧ್ಯಕ್ಷರಾದ ಜನಾಬ್ ಹನೀಫ್ ಕಾಟಿಪಲ್ಲರವರು ಪ್ರಸ್ಥಾವಿಕ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜನಾಬ್ ಉಸ್ಮಾನ್ ಅಬ್ದುಲ್ಲಾ(ಅಧ್ಯಕ್ಷರು ಮೊಹಿಯದ್ದೀನ್ ಜುಮಾ ಮಸೀದಿ ಸೂರಿಂಜೆ), ಜನಾಬ್ ಲಿಯಾಕತ್ ಅಲಿ (ಪ್ರಧಾನ ಕಾರ್ಯದರ್ಶಿ ಮೊಹಿಯದ್ದೀನ್ ಜುಮಾ ಮಸೀದಿ ಸೂರಿಂಜೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸೂರಿಂಜೆ), ಜನಾಬ್ ಕೆ.ಎಚ್ ಸಲಾಮ್ (ಗ್ರಾಮ ಪಂಚಾಯಿತಿ ಸದಸ್ಯರು ಸೂರಿಂಜೆ), ಜನಾಬ್ ಖಾದರ್ ಕುಲಾಯಿ(ಅಧ್ಯಕ್ಷರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುರತ್ಕಲ್ ವಲಯ),ಜನಾಬ್ ಹನೀಫ್ ಪಂಜ( ಅಧ್ಯಕ್ಷರು ಅಲ್ ಹರಮೈನ್ ಸೂರಿಂಜೆ), ಜನಾಬ್ ಖಾದರ್ ಮಿಲನ್ ಸೂರಿಂಜೆ, ಜನಾಬ್ ಟಿ.ಇಸ್ಮಾಯಿಲ್ ಪಾಪು ಸೂರಿಂಜೆ , ಜನಾಬ್ ಫಾರೂಖ್ ಕೋಟೆ ಸೂರಿಂಜೆ , ಜನಾಬ್ ರಫೀಕ್ ಪಂಜ ಸೂರಿಂಜೆ, ಜನಾಬ್ ಹಾಜಿ ಝುಬೈರ್ ಬಾವ ಕೋಟೆ ಸೂರಿಂಜೆರವರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದರು.





