ಮಂಗಳೂರು : ಕೋಡಿಕಲ್ ನಿವಾಸಿ ಮುರುಗೇಶನ್ ಎಂಬವರಿಗೆ ಮೊಬೈಲ್‌ನಲ್ಲಿ ಜೀವ ಬೆದರಿಕೆ
ಮಂಗಳೂರು,ಫೆ.8: ಕೋಡಿಕಲ್ ನಿವಾಸಿ ಮುರುಗೇಶನ್ ಎಂಬವರಿಗೆ ಮೊಬೈಲ್‌ನಲ್ಲಿ ಬೆದರಿಕೆ ಹಾಕಿದ ದುಷ್ಕರ್ಮಿಗಳು ಮನೆಯ ಬೆಡ್‌ರೂಂ ಕಿಟಕಿಗೆ ಕಲ್ಲು ಎಸೆದ ಘಟನೆ ಇಂದು ನಡೆದಿದೆ.
ಮುರುಗೇಶನ್ ತಮ್ಮ ಮನೆಯಲ್ಲಿ ಹೆಂಡತಿ ಮತ್ತು ತಮ್ಮನೊಂದಿಗೆ ಇದ್ದ ಸಂದರ್ಭದಲ್ಲಿ ರಾಸಪ್ಪ ಎಂಬಾತ ಮೊಬೈಲ್ ಪೋನ್‌ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆಯೊಡ್ಡಿದ್ದ. ಇದರಿಂದ ಹೆದರಿದ ಮುರುಗೇಶನ್ ತಮ್ಮ ಮೊಬೈಲನ್ನು ಸ್ವಿಚ್ ಆಫ್ ಮಾಡಿದ್ದರು. ನಂತರ ಮುರುಗೇಶನ್ ಅವರ ಮನೆಯ ಬೆಡ್‌ರೂಂಗೆ ಕಲ್ಲು ತೂರಲಾಗಿದೆ. ಮನೆಯಿಂದ ಹೊರಬಂದಾಗ ರಾಸಪ್ಪನ್ , ಸೆಲ್ವಕುಮಾರ್, ತಿರುಪತಿ, ದೀಬನ್ ಎಂಬವರು ಮನೆಯ ಎದುರು ರಸ್ತೆಯಲ್ಲಿ ನಿಂತುಕೊಂಡು ಜೀವಬೆದರಿಕೆಯೊಡ್ಡಿದ್ದಾರೆ ಎಂದು ಮುರುಗೇಶನ್ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Next Story





