ಕೋಲಾರ: ಬಿಜೆಪಿ ಪರ ಈಶ್ವರಪ್ಪಪ್ರಚಾರ

ಕೋಲಾರ, ಫೆ.8: ಕೋಲಾರ ತಾಲೂಕು, ಸುಗಟೂರು ಗ್ರಾಮದಲ್ಲಿ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಜಿಪಂ ಹಾಗೂ ತಾಪಂ ಪ್ರಚಾರದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ರೋಡ್ ಶೋ ನಡೆಸುವ ಮೂಲಕ ಪ್ರಚಾರ ಹಮ್ಮಿಕೊಂಡರು.
ಬಿಜೆಪಿ ರಾಜ್ಯದಲ್ಲಿ ನಡೆಯುತ್ತಿರುವ ಜಿಪಂ ಹಾಗೂ ತಾಪಂ ಚುನಾವಣೆಗಳು ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದ್ದು, ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಮತದಾರರಿಗೆ ತಿಳಿಸುವುದರ ಮೂಲಕ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು ಮತ್ತು ಬಿಜೆಪಿ ಚುನಾವಣೆ ಪ್ರಚಾರದಲ್ಲಿ ಯುವಕರು ಮುಂದಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ರಾಜ್ಯ ಮಟ್ಟದಲ್ಲಿ ಮುನ್ನಡೆಯಲಿದ್ದಾರೆ ಎಂದು ಹೇಳಿದರು.ೋಲಾರ ತಾಲೂಕು, ಸುಗಟೂರು ಗ್ರಾಮದಲ್ಲಿ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಜಿಪಂ ಹಾಗೂ ತಾಪಂ ಚುನಾವಣೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಅಭ್ಯರ್ಥಿಗಳ ಪರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಬಡ ಜನರಿಗೆ ಅನುಕೂಲವಾಗುವಂತಹ ಯಾವುದೇ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಮುಖ್ಯಮಂತ್ರಿ ಸೇರಿದಂತೆ ಸಚಿವರು ಹಾಗೂ ಶಾಸಕರ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಸರಕಾರ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಪ್ರಚಾರ ಕಾರ್ಯದಲ್ಲಿ ಸುಗಟೂರು ಜಿಪಂ ಬಿಜೆಪಿ ಅಭ್ಯರ್ಥಿ ಎಂ.ಹರೀಶ್, ಬಿಜೆಪಿಯ ಸ್ಟೇಟ್ ಸ್ಲಂ ಸೆಕ್ರೆಟರಿ ಮೋರ್ಚರು ನಾಯ್ಡು, ಎಸ್.ತಾಪಂ ಅಗ್ರಹಾರ ಅಭ್ಯರ್ಥಿ ಭಾಗ್ಯಮ್ಮ, ತಾಪಂ ತೋಟ್ಲಿ ಅಭ್ಯರ್ಥಿ ಆಶಾಕುಮಾರಿ, ಸುಗಟೂರು ಚಲಪತಿ, ಜಿಲ್ಲಾ ಕಾರ್ಯಧರ್ಶಿ ಮಮತಾ, ಮಹಿಳಾ ಮೋರ್ಚರು ನಿಮ್ಮಲ, ಎಸ್.ವಿ. ನಾರಾಯಣಸ್ವಾಮಿ, ಹೊಸಮಟ್ನಹಳಿ ಮಹೇಶ್, ನಂಜುಂಡ, ಜಗದೀಶ್, ಎಚ್.ಆರ್. ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.





