ಕುಂಬ್ಳೆ, ಮಾಂಜ್ರೇಕರ್‌ಗೆ ವೀಕ್ಷಕವಿವರಣೆ ಶುಲ್ಕ ಪಾವತಿಸಿದ ಬಿಸಿಸಿಐ
ಹೊಸದಿಲ್ಲಿ, ಫೆ.8: ಅಕ್ಟೋಬರ್-ಡಿಸೆಂಬರ್ ನಡುವೆ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಸ್ವದೇಶಿ ಸರಣಿಯಲ್ಲಿ ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಹಾಗೂ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಮಾಂಜ್ರೇಕರ್‌ಗೆ ಕ್ರಮವಾಗಿ 39 ಲಕ್ಷ ರೂ. ಹಾಗೂ 36 ಲಕ್ಷ ರೂ. ವೀಕ್ಷಕವಿವರಣೆ ಶುಲ್ಕವನ್ನು ಪಾವತಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ದಕ್ಷಿಣ ಆಫ್ರಿಕ ವಿರುದ್ಧದ 5 ಏಕದಿನ ಹಾಗೂ 4 ಟೆಸ್ಟ್ ಪಂದ್ಯಗಳಲ್ಲಿ ವೀಕ್ಷಕವಿವರಣೆಗಾರರಾಗಿ ಕಾರ್ಯನಿರ್ವಹಿಸಿದ್ದ ಕುಂಬ್ಳೆಗೆ 39,10,500 ರೂ. ಹಾಗೂ ಟೆಸ್ಟ್ ಸರಣಿಯಲ್ಲಿ ವೀಕ್ಷಕವಿವರಣೆ ನೀಡಿದ್ದ ಮಾಂಜ್ರೇಕರ್‌ಗೆ 36,49,375 ರೂ. ಪಾವತಿಸಲಾಗಿದೆ ಎಂದು ಬಿಸಿಸಿಐ ಬಹಿರಂಗಪಡಿಸಿದೆ.
Next Story





