ನಾಲ್ಕನೆ ಕ್ರಮಾಂಕದಲ್ಲಿ ರೈನಾ: ಧೋನಿ
ಪುಣೆ, ಫೆ.8: ಮುಂದಿನ ತಿಂಗಳು ಆರಂಭವಾಗಲಿರುವ ಟ್ವೆಂಟಿ-20 ವಿಶ್ವಕಪ್‌ನ್ನು ದೃಷ್ಟಿಯಲ್ಲಿಟ್ಟುಕೊಂಡು ಸುರೇಶ್ ರೈನಾ ನಾಲ್ಕನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಬಗ್ಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಭಾರತದ ನಾಯಕ ಎಂಎಸ್ ಧೋನಿ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೈನಾರನ್ನು 3ನೆ ಕ್ರಮಾಂಕದಲ್ಲಿ ಆಡಿಸುವುದಿಲ್ಲ. ಅವರನ್ನು ನಾಲ್ಕನೆ ಕ್ರಮಾಂಕದಲ್ಲಿ ಆಡಿಸಲಾಗುವುದು. ಈ ಸರಣಿಯಲ್ಲಿ ಅವರು ಅವಕಾಶವನ್ನು ಬಳಸಿಕೊಳ್ಳುವ ವಿಶ್ವಾಸದಲ್ಲಿದ್ದೇನೆ ಎಂದು ಧೋನಿ ತಿಳಿಸಿದರು.
ಟ್ವೆಂಟಿ-20 ಸ್ಪೆಷಲಿಸ್ಟ್ ರೈನಾ ಮಂಗಳವಾರ 50ನೆ ಟ್ವೆಂಟಿ-20 ಪಂದ್ಯ ಆಡಲಿದ್ದಾರೆ.
Next Story





