‘ಕೆಂಗುಲಾಬಿ’ ಬೆಳೆದವರಿಗೆ ಮುಳ್ಳೇ ಗತಿ!

ಪ್ರಭಾಕರ ಟಿ. ಚೀಮಸಂದ್ರ
ಬೆಂಗಳೂರು, ಫೆ. 8: ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ಪ್ರೇಮ ನಿವೇದನೆಗೆ ಸಂಕೇತ ವಾಗಿರುವ ‘ಕೆಂಗುಲಾಬಿ’ ಈ ಬಾರಿ ಗುಲಾಬಿ ಬೆಳೆಗಾರರ ಕಣ್ಣಲ್ಲಿ ನೀರು ತರಿಸುತ್ತಿದೆ. ಇದೇನಿದು ಎಲ್ಲಿಯ ಪ್ರೇಮಿಗಳ ದಿನ... ಎಲ್ಲಿಯ ರೈತ ಎಂದು ಅಚ್ಚರಿಯಾಗಬಹುದು. ಆದರೂ, ಇದು ಸತ್ಯ.
ಈ ಬಾರಿ ಪ್ರೇಮಿಗಳ ದಿನ ರವಿವಾರ ಬಂದಿದೆ. ಅಕಾಲಿಕ ಮಳೆಯಿಂದ ಗುಲಾಬಿ ಹೂವಿನ ಬೆಳೆ ಸಂಕಷ್ಟಕ್ಕೆ ಸಿಲುಕಿದೆ. ಈ ಮಧ್ಯೆಯೇ ಬೆಂಗಳೂರಿನಿಂದ ವಿದೇಶಗಳಿಗೆ ಗುಲಾಬಿಯ ರಫ್ತು ಕೂಡ ನಿಂತಿದ್ದು, ಬೆಳೆಗಾರರು ಹಾಗೂ ಹೂವಿನ ವ್ಯಾಪಾರಿಗಳನ್ನು ಅಕ್ಷರಶಃ ಕಂಗಾಲಾಗಿಸಿದೆ.
ವಾರದ ದಿನಗಳಲ್ಲಿ ‘ಪ್ರೇಮಿಗಳ ದಿನ’ (ೆ.14) ಬಂದರೆ ವಿದ್ಯಾರ್ಥಿಗಳು ಮತ್ತು ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ. ಪ್ರೇಮಿಗಳು ಪರಸ್ಪರ ಗುಲಾಬಿ ಹೂವು ಹಾಗೂ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು ಆಚರಿಸುತ್ತಾರೆ. ಆದರೆ, ಈ ಬಾರಿಯ ಪ್ರೇಮಿಗಳ ದಿನ ರವಿವಾರ ರಜಾದಿನ ಬಂದಿರುವುದರಿಂದ ಈ ದಿನದ ಆಚರಣೆಗೆ ಕೊಂಚ ಮಹತ್ವ ಕಡಿಮೆ.
ಮಾತ್ರವಲ್ಲದೆ, ಬೆಂಗಳೂರಿನಿಂದ ವಿದೇಶಕ್ಕೆ ರಫ್ತು ಆಗುತ್ತಿದ್ದ ಕೆಂಗುಲಾಬಿ ಹೂವಿಗೆ ಈ ಬಾರಿ ಬೇಡಿಕೆ ಕುಸಿದಿದೆ ಎಂದು ಗುಲಾಬಿ ಹೂವು ರ್ತುದಾರರು ಮತ್ತು ಮಾರಾಟಗಾರರ ಹೇಳಿಕೆಯಾಗಿದೆ. ಕೀನ್ಯಾ, ಇಥಿಯೋಪಿಯಾ ರಾಷ್ಟ್ರಗಳು ಗುಲಾಬಿ ಬೆಳೆಯಲ್ಲಿ ಮುಂಚೂಣಿಯಲ್ಲಿವೆ. ಆದರೆ, ಕರ್ನಾಟಕದ ಗುಲಾಬಿ ಹೂವು ಅದರಲ್ಲೂ ವಿಶೇಷವಾಗಿ ಬೆಂಗಳೂರು ಸುತ್ತಮುತ್ತ ಪಾಲಿಹೌಸ್‌ಗಳಲ್ಲಿ ಬೆಳೆದ ಹೂವುಗಳು ಹೆಚ್ಚು ಆಕರ್ಷಕ. ಈ ಹೂವುಗಳಿಗೆ ಹೆಚ್ಚು ಬೇಡಿಕೆಯಿರುತ್ತದೆ. ಹೀಗಾಗಿ ಪ್ರತಿವರ್ಷ ಜನವರಿ ಮಧ್ಯಭಾಗದಲ್ಲೇ ಹೊರ ದೇಶಗಳಿಂದ ನಮ್ಮ ಗುಲಾಬಿ ಹೂವುಗಳಿಗೆ ಬೇಡಿಕೆ ಬರುತ್ತಿತ್ತು.
ಯೂರೋಪ್, ಲಂಡನ್, ಆಸ್ಟ್ರೇಲಿಯಾ, ನ್ಯೂಝೀ ಲೆಂಡ್, ಗಲ್ಫ್, ಸಿಂಗಾಪುರ, ಮಲೇಷಿಯಾ ಮತ್ತಿತರ ರಾಷ್ಟ್ರಗಳಿಗೆ ಕಳೆದ ವರ್ಷ ನಾನಾ ಬಗೆಯ ಸುಮಾರು 50 ಲಕ್ಷ ಗುಲಾಬಿ ಹೂವುಗಳು ಬೆಂಗಳೂರಿನಿಂದ ರ್ತಾಗು ತ್ತಿದ್ದವು. ಜ.29ರಿಂದಲೇ ರ್ತು ಪ್ರಕ್ರಿಯೆಯೂ ಆರಂಭವಾಗುತ್ತಿತ್ತು. ಆದರೆ, ಈ ವರ್ಷ ಇದುವರೆಗೂ ಹೊರ ದೇಶಗಳಿಂದ ಬೇಡಿಕೆ ಬಂದಿಲ್ಲ. ಇದರಿಂದ ಶೇ.20 ರಷ್ಟು ರಪ್ತು ಪ್ರಕ್ರಿಯೆ ಕ್ಷೀಣಿಸಲಿದೆ. ಫೆ. 8ರ ನಂತರ ಬೇಡಿಕೆ ಬರುವ ನಿರೀಕ್ಷೆಯಿದ್ದು, ೆ.11ರವರೆಗೆ ರಪ್ತು ಪ್ರಕ್ರಿಯೆ ನಡೆಯಲಿದೆ ಎಂದು ರಪ್ತುದಾರರ ಅನಿಸಿಕೆ.
ಅಕಾಲಿಕ ಮಳೆಯೊಂದಿಗೆ ಬಂದ ರೋಗ
ಗುಲಾಬಿ ಹೂವಿನ ರ್ತು ಇಳಿಕೆ, ಪ್ರೇಮಿಗಳ ದಿನ ರವಿವಾರ ಬಂದಿರುವುದು ಒಂದು ಕಾರಣ ಎನ್ನಲಾಗುತ್ತಿದೆ. ಆದರೆ, ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಗುಲಾಬಿ ಬೆಳೆಗೆ ‘ಡೌನಿ ಮಿಲ್ಡೀವ್’ ರೋಗ ತಗಲಿದೆ. ಹೀಗಾಗಿ ಕೆಲವು ಭಾಗಗಳಲ್ಲಿ ರ್ತು ಹೂವು ಉತ್ತಮವಾಗಿಲ್ಲ. ಜತೆಗೆ ಕೀನ್ಯಾ, ಇಥಿಯೋಪಿಯಾಗಳಲ್ಲಿ ಈ ಬಾರಿ ಉತ್ತಮ ಬೆಳೆಯಾಗಿರುವುದರಿಂದ ಆ ರಾಷ್ಟ್ರಗಳು ವಿಶ್ವದ ನಾನಾ ಭಾಗಗಳಿಗೆ ಹೂವು ರವಾನೆಯಾಗುತ್ತದೆ. ಈ ಎಲ್ಲ್ಲ ಕಾರಣಗಳಿಂದಾಗಿ ಬೆಂಗಳೂರಿನ ಗುಲಾಬಿ ಹೂವುಗಳ ರ್ತು ಪ್ರಕ್ರಿಯೆಯು ಗಣನೀಯವಾಗಿ ಕುಂಠಿತಗೊಂಡಿದೆ.





