ಉಲ್ಕಾಶಿಲೆ ಅಪ್ಪಳಿಸಿ ತಮಿಳುನಾಡಿನಲ್ಲಿ ಚಾಲಕನ ಸಾವು..!
ಚೆನ್ನೈ,ಫೆ.8: ಪ್ರಪಂಚದಲ್ಲೇ ಉಲ್ಕಾ ಶಿಲೆ ಅಪ್ಪಳಿಸಿ ಮೊದಲ ಸಾವು ಭಾರತದಲ್ಲಿ ಸಂಭವಿಸಿದೆ.ತಮಿಳುನಾಡಿನ ವೆಲ್ಲೂರಿನ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಶನಿವಾರ ಸಂಭವಿಸಿದ ಚಾಲಕ ಕಾಮರಾಜ್ ಸಾವಿಗೆ ಉಲ್ಕಾಶಿಲೆ ಅಪ್ಪಳಿಸಿರುವುದು ಕಾರಣವಾಗಿದೆ.
ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಕಾಮರಾಜ್ ಉಲ್ಕಾಶಿಲೆ ಅಪ್ಪಳಿಸಿದ ಪರಿಣಾಮವಾಗಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ.ಆದರೆ ವಿಜ್ಞಾನಿಗಳು ಇನ್ನೂ ಇದನ್ನು ಅಧಿಕೃತವಾಗಿ ಹೇಳಿಕೆ ನೀಡಿಲ್ಲ.
ವೆಲ್ಲೂರು ಜಿಲ್ಲೆಯ ಕೆ.ಪ್ಯಾಂಥರಾಪಳ್ಳಿ ಗ್ರಾಮದ ಎಂಜಿನಿಯರಿಂಗ್ ಕಾಲೇಜಿನ ಆವರಣಕ್ಕೆ ಶನಿವಾರ ಆಕಾಶದಿಂದ ಗ್ರೇನೆಡ್‌ನಂತೆ ಅಪ್ಪಳಿಸಿತ್ತು.ಆದರೆ ಗ್ರೇನೆಡ್ ಅಥವಾ ಬಾಂಬ್ ಆಗಿರಲಿಲ್ಲ. ಇದರ ಪರಿಣಾವಾಗಿ ಓರ್ವ ಮೃತಪಟ್ಟು ಇತರ ನೂರು ಗಾಯಗೊಂಡಿದ್ದರು.
ಉಲ್ಕಾಪಾತದ ಪರಿಣಾಮ 1911ರಲ್ಲಿ ಈಜಿಪ್ಟ್‌ನಲ್ಲಿ ಉಲ್ಕಾಶಿಲೆ ಅಪ್ಪಳಿಸಿ ನಾಯಿಯೊಂದು ಸತ್ತ ಘಟನೆ ವರದಿಯಾಗಿತ್ತು.1992ರಲ್ಲಿ ಉಗಾಂಡದಲ್ಲಿ ಉಲ್ಕಾಶಿಲೆ ಅಪ್ಪಳಿಸಿ ಬಾಲಕನೊಬ್ಬನಿಗೆ ಗಾಯವಾಗಿತ್ತು. ಆದರೆ ಸಾವಿನ ಪ್ರಕರಣ ಈ ತನಕ ವರದಿಯಾಗಿರಲಿಲ್ಲ.
ಉಲ್ಕಾಶಿಲೆ ಅಪ್ಪಳಿಸಿ ಮೃತಪಟ್ಟ ಕಾಮರಾಜ್‌ಕುಟುಂಬಕ್ಕೆ ತಮಿಳುನಾಡು ಸರಕಾರ ಒಂದು ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ ಇಪ್ಪತ್ತೈದು ಸಾವಿರ ರೂ.ಪರಿಹಾರ ಘೋಷಿಸಿದೆ.





