ಹಜ್ ಯಾತ್ರೆ-2016; ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಬೆಂಗಳೂರು, ಫೆ.8: ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಫೆ.15ರವರೆಗೆ ವಿಸ್ತರಣೆ ಮಾಡಿ ಭಾರತೀಯ ಹಜ್ ಸಮಿತಿ ಆದೇಶ ಹೊರಡಿಸಿದೆ.
ಆನ್‌ಲೈನ್ ಮೂಲಕ ಅಥವಾ ರಾಜ್ಯ ಹಜ್ ಸಮಿತಿ ಕಚೇರಿಗೆ ಸ್ವತಃ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಲು ಫೆ.8ರವರೆಗೆ ಕಾಲಾವಕಾಶ ನೀಡಲಾಗಿತ್ತು. ಯಾತ್ರೆಗೆ ತೆರಳುವವರ ಅನುಕೂಲಕ್ಕಾಗಿ ಒಂದು ವಾರ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಭಾರತೀಯ ಹಜ್ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅತಾವುರ್ರಹ್ಮಾನ್ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ಫೆ.15ಕ್ಕಿಂತ ಮುಂಚಿತವಾಗಿ ಪಾಸ್‌ಪೋರ್ಟ್ ಪಡೆದವರು ಹಾಗೂ ಕನಿಷ್ಠ 2017ರ ಮಾ.10ರವರೆಗೆ ಚಾಲ್ತಿಯಲ್ಲಿರುವ ಪಾಸ್‌ಪೊರ್ಟ್ ಹೊಂದಿದವರು ಮಾತ್ರ ಹಜ್ ಯಾತ್ರೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಅವರು ಪ್ರಕಟನೆಯಲ್ಲಿ ಹೇಳಿದ್ದಾರೆ.
Next Story





