ಅಸ್ಸಾಂ: ಕಟ್ಟರ್ ಉಗ್ರ ಪೊಲೀಸ್ ಗುಂಡಿಗೆ ಬಲಿ
ಗುವಾಹಟಿ,ಫೆ.8: ಕೊಕ್ರಾಜಾರ್ ಜಿಲ್ಲೆಯ ರುನಿಖಾತಾ ಪ್ರದೇಶದಲ್ಲಿ ಸೋಮವಾರ ನಸುಕಿನಲ್ಲಿ ಪೊಲೀಸ್ ಮತ್ತು ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಎನ್‌ಡಿಎಫ್‌ಬಿ(ಸೋಂಗ್‌ಬಿಜಿತ್) ಉಗ್ರಗಾಮಿ ಸಂಘಟನೆಯ ಸೆರ್ಫಾಂಗುರಿ ವಲಯದ ಉಪಮುಖ್ಯಸ್ಥ ಉದಯ ನರ್ಝರಿ ಎಂಬಾತ ಕೊಲ್ಲಲ್ಪಟ್ಟಿದ್ದಾನೆ.
ರುನಿಖಾತಾ ಪೊಲೀಸ್ ಠಾಣಾ ವ್ಯಾಪ್ತಿಯ ರಾಣಿಪುರದಲ್ಲಿ ರವಿವಾರ ರಾತ್ರಿಯೇ ಶೋಧ ಕಾರ್ಯಾಚರಣೆ ಆರಂಭಗೊಂಡಿದ್ದು,ನಸುಕಿನ ಮೂರು ಗಂಟೆಯ ಸುಮಾರಿಗೆ ಅರಣ್ಯದಲ್ಲಿ ಅಡಗಿದ್ದ ನರ್ಝರಿ ಜೊತೆಗೆ ಗುಂಡಿನ ಕಾಳಗ ನಡೆದಿತ್ತು ಎಂದು ಐಜಿಪಿ ಎಲ್.ಆರ್.ಬಿಷ್ಣೋಯಿ ಸುದ್ದಿಸಂಸ್ಥೆಗೆ ತಿಳಿಸಿದರು.
ಹತ ಉಗ್ರ ಎನ್.ಉದಾಂಗ್ ಮತ್ತು ಖುಲಿಖಾಂಗ್ ಆಫ್ ಎಡೆನ್‌ಬಾರಿ ಎಂಬ ಹೆಸರುಗಳಿಂದಲೂ ಕರೆಯಲ್ಪಡುತ್ತಿದ್ದ. ಆತನ ಬಳಿಯಿದ್ದ ಎಕೆ-56 ರೈಫಲ್ ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
Next Story





