20 ಮುಸ್ಲಿಮ್ ಗೆಳೆಯರಿದ್ದಾರೆ: ಟ್ರಂಪ್
ವಾಶಿಂಗ್ಟನ್, ಫೆ. 8: ತಾನು ಮುಸ್ಲಿಮ್ ವಿರೋಧಿಯಲ್ಲ ಎಂಬುದನ್ನು ಸಾಬೀತುಪಡಿಸಲು ಪ್ರಯತ್ನಿಸಿರುವ ಅಮೆರಿಕದ ಅಧ್ಯಕ್ಷ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್, ತನಗೆ ಕನಿಷ್ಠ 20 ಮಂದಿ ಮುಸಿಮ್ ಸ್ನೇಹಿತರಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಆ ಪೈಕಿ ಒಬ್ಬರ ಹೆಸರನ್ನೂ ಅವರು ಹೇಳಿಲ್ಲ.
ಅಮೆರಿಕಕ್ಕೆ ಮುಸ್ಲಿಮರು ಪ್ರಯಾಣಿಸುವುದನ್ನು ನಿಷೇಧಿಸಬೇಕು ಹಾಗೂ ಈಗಾಗಲೇ ಅಮೆರಿಕದಲ್ಲಿ ವಾಸಿಸುತ್ತಿರುವ ಮುಸ್ಲಿಮರ ಚಲನವಲನಗಳ ಮೇಲೆ ನಿಗಾ ಇಡಲು ಪ್ರತ್ಯೇಕ ಮಾಹಿತಿಕೋಶವೊಂದನ್ನು ಸ್ಥಾಪಿಸಬೇಕು ಎಂಬುದಾಗಿ ಅವರು ಕರೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.
ನಿಮ್ಮ ಮುಸ್ಲಿಮ್ ಸ್ನೇಹಿತರು ಯಾರು ಎಂಬುದಾಗಿ 'ಟೆಲಿಗ್ರಾಫ್' ಕೇಳಿದ ಪ್ರಶ್ನೆಯಿಂದ ಅವರು ನುಣುಚಿಕೊಂಡರು.
Next Story





