ಅಫ್ಘಾನ್: ಆತ್ಮಹತ್ಯಾ ಸ್ಫೋಟಕ್ಕೆ 3 ಬಲಿ
ಮಝಾರಿ ಶರೀಫ್ (ಅಫ್ಘಾನಿಸ್ತಾನ), ಫೆ. 8: ಉತ್ತರ ಅಫ್ಘಾನಿಸ್ತಾನದಲ್ಲಿ ಸೋಮವಾರ ಸೈನಿಕರಿಂದ ತುಂಬಿದ್ದ ಬಸ್ಸೊಂದರ ಮೇಲೆ ಆತ್ಮಹತ್ಯಾ ಬಾಂಬರ್ ಓರ್ವ ನಡೆಸಿದ ದಾಳಿಯಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಹಾಗೂ 14 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಲ್ಖ್ ರಾಜ್ಯದ ರಾಜಧಾನಿ ಮಝಾರಿ ಶರೀಫ್ ಸಮೀಪದ ದೆಹ್‌ದಡಿ ಜಿಲ್ಲೆಯಲ್ಲಿ ಬೆಳಗ್ಗೆ 8 ಗಂಟೆ ವೇಳೆಗೆ ಸ್ಫೋಟ ಸಂಭವಿಸಿದೆ ಎಂದು ರಕ್ಷಣಾ ಸಚಿವಾಲಯ ಹೊರಡಿಸಿದ ಹೇಳಿಕೆಯೊಂದು ತಿಳಿಸಿದೆ.
ಸೇನಾ ಸಿಬ್ಬಂದಿಯಿಂದ ತುಂಬಿದ್ದ ಬಸ್ ಹಾದುಹೋಗುತ್ತಿದ್ದಾಗ ಅದರ ಸಮೀಪ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡನು.
Next Story





